ಕಂಬಳ ಕ್ರೀಡೆ ಸಂಚಲನ ಮೂಡಿಸಲಿ

ಕಂಬಳ ಕ್ರೀಡೆ ಯುವಜನಾಂಗಕ್ಕೆ ಸಂಚಲನ ಮೂಡಿಸಲಿ
ಜನಪದ ಕಂಬಳ ಕ್ರೀಡೆಯನ್ನು ಸರ್ಕಾರ ಗುರುತಿಸಿರುವುದು ಶ್ಲಾಘನೀಯ. ಪಯ್ಯೋಟ್ಟು ಮನೆತನ ಕಂಬಳ ಕ್ರೀಡೆ ಹಾಗು ಕೃಷಿಯಲ್ಲಿ ಉತ್ತಮ ಸಾಧನೆಗೈದಿದೆ. ಇವರ ಯಶಸ್ಸು ಯುವಜನಾಂಗದಲ್ಲಿ ಸಂಚಲನ ಮೂಡಿಸಿ ಸ್ಪೂರ್ತಿಯನ್ನು ತುಂಬುವಂತಾಗಲಿ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಳದಲ್ಲಿ ಭಾನುವಾರ ನಡೆದ ಏಳಿಂಜೆ ಪೌರ ಸನ್ಮಾನ ಸಮಿತಿಯ ಸಂಯೋಜನೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ರವರಿಗೆ ಐಕಳ ಏಳಿಂಜೆ ಉಳೆಪಾಡಿ ನಾಗರಿಕರ ಪರವಾಗಿ ನೀಡಿದ ಪೌರ ಸನ್ಮಾನದ ಗೌರವವನ್ನು ನೀಡಿ ಮಾತನಾಡಿದರು.
ಏಳಿಂಜೆ ಕೋಂಜಾಲಗುತ್ತು ದಯಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎ.ಪಿ.ಎಂಸಿ. ಸದಸ್ಯ ಪ್ರಮೋದ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೊ, ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ, ಏಳಿಂಜೆ ಕೋಂಜಾಲಗುತ್ತು ಅನಿಲ್ ಶೆಟ್ಟಿ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಸೆವರಿನ್ ಲೋಬೊ, ಸುಜಾತ ಮೂಲ್ಯ, ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಳದ ಅರ್ಚಕ ಗಣೇಶ್ ಭಟ್, ರಘುರಾಮ ಅಡ್ಯಂತಾಯ, ಕೃಷ್ಣ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು
ವೈ ಯೋಗೀಶ್ ರಾವ್ ಸ್ವಾಗತಿಸಿ ಐಕಳ ಪಂಚಾಯಿತಿ ಸದಸ್ಯ ಹರ್ಬಟ್ ವಿಲಿಯಂ ಲೋಬೊ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 16121312 Kinnigoli 16121313

Comments

comments

Comments are closed.

Read previous post:
Kinnigoli 16121311
ಕಾಂತಾಬಾರೆ – ಬೂದಾಬಾರೆ ಕಿರು ಚಿತ್ರ ಮುಹೂರ್ತ

ಕಿನ್ನಿಗೋಳಿ : ಮೂಲ್ಕಿ ಸೀಮೆಯ ಕಾರ್ನಾಡು ಬೀದಿಸಾನ, ನಡಿಸಾಲು ಬಾಕ್ಯಾರ ಕೋಡಿ, ಸೀಮಂತೂರ ಭಾವಗಳಲ್ಲಿ ಅವರು ತೋಡಿದ ಬಾವಿಗಳಿವೆ. ಇದೀಗ ಕಾಂತಬಾರೆ-ಬೂದಬಾರೆಯರ ಕುರಿತು ಕಿರು ಚಿತ್ರ ಸಂಪನ್ನಗೊಳ್ಳುತ್ತಿರುವುದು...

Close