ಶಿಬರೂರು ಜಾತ್ರಾ ಮಹೋತ್ಸವ

ಇತಿಹಾಸ ಪ್ರಸಿದ್ಧ ಶಿಬರೂರು ಕ್ಷೇತ್ರದ ಜಾತ್ರಾ ಮಹೋತ್ಸವವು ಸೋಮವಾರ ಪ್ರಾರಂಭವಾಯಿತು. ನಿನ್ನೆ ರಾತ್ರಿ ಧ್ವಜಾರೋಹಣಗೊಂಡಿದ್ದು ಇಂದು ಬೆಳಿಗ್ಗೆ ತುಲಾಭಾರ ಸೇವೆ, ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವದ ನೇಮೋತ್ಸವ ನಂತರ ಮಡಸ್ನಾನ ಕಂಚೀಲು ಸೇವೆ ಮುಂತಾದ ದಾರ್ಮಿಕ ಕಾರ್ಯಕ್ರಮಗಳು ನಡೆದವು. ಶಿಬರೂರಿನ ತೀರ್ಥವು ವಿಷ ನಿವಾರಣೆಗೆ ಅತ್ಯಂತ ಪ್ರಸಿದ್ದಿಯನ್ನು ಪಡೆದಿದ್ದು ತೀರ್ಥ ಬಾವಿಯಿಂದ ಏತದ ಮೂಲಕ ತೀರ್ಥವನ್ನು ತೆಗೆಯಲಾಗುತ್ತದೆ. ಸಾವಿರಾರು ಮಂದಿ ಈ ತೀರ್ಥವನ್ನು ಸೇವಿಸುವುದು ಮಾತ್ರವಲ್ಲದೆ ಬಾಟಲುಗಳಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ ಏಳು ದಿನಗಳ ಕಾಲನಡೆಯುವ ಜಾತ್ರಾ ಮಹೋತ್ಸವದಲ್ಲಿ ಜಾರಂದಾಯ, ಪಿಲಿಚಾಮುಂಡಿ ಮುಂತಾದ ದೈವಗಳ ನೇಮೋತ್ಸವವು ನಡೆಯುತ್ತದೆ ಮತ್ತು ದಿನ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತಿದ್ದು ಸಾವಿರಾರು ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.
Kinnigoli 16121314 Kinnigoli 16121315Kinnigoli 16121316Kinnigoli 16121319Kinnigoli 16121317Kinnigoli 16121318

Kinnigoli-16121320 Kinnigoli-16121321 Kinnigoli-16121322 Kinnigoli-16121323 Kinnigoli-16121324 Kinnigoli-16121325Kinnigoli-16121327 Kinnigoli-16121328 Kinnigoli-16121329 Kinnigoli-16121330 Kinnigoli-16121331 Kinnigoli-16121332 Kinnigoli-16121333 Kinnigoli-16121334 Kinnigoli-16121335 Kinnigoli-16121336

Comments

comments

Comments are closed.

Read previous post:
Kinnigoli 16121313
ಕಂಬಳ ಕ್ರೀಡೆ ಸಂಚಲನ ಮೂಡಿಸಲಿ

ಕಂಬಳ ಕ್ರೀಡೆ ಯುವಜನಾಂಗಕ್ಕೆ ಸಂಚಲನ ಮೂಡಿಸಲಿ ಜನಪದ ಕಂಬಳ ಕ್ರೀಡೆಯನ್ನು ಸರ್ಕಾರ ಗುರುತಿಸಿರುವುದು ಶ್ಲಾಘನೀಯ. ಪಯ್ಯೋಟ್ಟು ಮನೆತನ ಕಂಬಳ ಕ್ರೀಡೆ ಹಾಗು ಕೃಷಿಯಲ್ಲಿ ಉತ್ತಮ ಸಾಧನೆಗೈದಿದೆ. ಇವರ...

Close