ಸೂಕ್ತ ಮಾರ್ಗದರ್ಶನ ಅಗತ್ಯ

ಕಿನ್ನಿಗೋಳಿ : ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಮೌಲ್ಯಾಧಾರಿತ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿ ಸೂಕ್ತ ಮಾರ್ಗದರ್ಶನ ನೀಡಿದಾಗ ಭವಿಷ್ಯದ ಉತ್ತಮ ಪ್ರಜೆಗಳಾಗಬಲ್ಲರು. ಎಂದು ಪೊಂಪೈ ವಿದ್ಯಾ ಸಂಸ್ಥೆಗಳಾ ಸಂಚಾಲಕ ಫಾ| ಪಾವ್ಲ್ ಪಿಂಟೊ ಹೇಳಿದರು.
ಬುಧವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರಾ, ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೊಟ್ಯಾನ್, ಪೊಂಪೈ ಕಾಲೇಜು ಉಪನ್ಯಾಸಕ ಯೋಗೀಂದ್ರ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಫಿಲೋಮಿನಾ ಸಿಕ್ವೇರಾ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಡೈನಾ ಡಿಸೋಜ ವಂದಿಸಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.

Kinnigoli 1812201318 Kinnigoli 1812201319 Kinnigoli 1812201320

Comments

comments

Comments are closed.

Read previous post:
Kinnigoli 18121313
ಉಗ್ರ ನರಸಿಂಹ ದೇವರಿಗೆ ಸೀಯಾಳ ಅಭಿಷೇಕ

Puneethakrishna Sk ಮುಲ್ಕಿ; ಒಳಲಂಕೆ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಪ್ರಯುಕ್ತ ಉಗ್ರ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಸೀಯಾಳ ಅಭಿಷೇಕ ನಡೆಯಿತು ಲಕ್ಷಾಂತರ ಮಂದಿ...

Close