ಬ್ಯಾನರ್ ವಿವಾದ ಪಂಚಾಯತ್‌ಗೆ ಘೇರಾವು

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರೂರು ಹಾಗೂ ಗುತ್ತಕಾಡು ಪರಿಸರದಲ್ಲಿ ಹಾಕಿದ ಬ್ಯಾನರ್‌ನ್ನು ಬ್ಯಾನರು ಹಾಕಿದವರಿಗೆ ಮಾಹಿತಿ ನೀಡದೆ ಪಂಚಾಯಿತಿ ಆಡಳಿತ ಮಂಡಳಿ ತೆಗೆದು ಹಾಕಿದ್ದು ಹಾಗೂ ದಲಿತ ಸಮುದಾಯದವರನ್ನು ಜಾತಿ ನಿಂದನೆ ಮಾಡಿದ ಆರೋಪವನ್ನು ಪುನರೂರು ಗ್ರಾಮಸ್ಥರು ಕಿನ್ನಿಗೋಳಿ ಪಂಚಾಯಿತಿಗೆ ಘೇರಾವು ಹಾಕಿದ ಘಟನೆ ಗುರುವಾರ ನಡೆದಿದೆ.
ಪುನರೂರು ಬ್ರಹ್ಮ ಮುಗೇರ ದೈವಸ್ಥಾನದ ನೇಮೋತ್ಸವದ ಬ್ಯಾನರ್‌ನ್ನು ಸಮಿತಿಗೆ ಮಾಹಿತಿ ನೀಡದೆ ಏಕಾ ಎಕಿ ತೆಗೆಯಲಾಗಿತ್ತು. ಈ ಬಗ್ಗೆ ದಲಿತ ಸಮುದಾಯದವರು ವಿಚಾರಿಸಲು ಗ್ರಾಮ ಪಂಚಾಯಿತಿಗೆ ಬಂದಾಗ ದಲಿತ ಸಮುದಾಯವನ್ನು ಮೂದಲಿಸಿ ಮತ್ತು ಅವಾಚ್ಯ ಶಬ್ದಗಳಿಂದ ಪಂಚಾಯಿತಿ ಸದಸ್ಯರು ಜಾತಿ ನಿಂದನೆ ಮಾಡಿದ್ದಾರೆ ಎಂದು ಗ್ರಾಮಸ್ಥರಾದ ಜಯಪ್ರಕಾಶ್, ದೇವಪ್ಪ, ಗೋಪಾಲಕೃಷ್ಣರವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ನಮಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ಮುಂದಿನ ಹಂತಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ನಿರ್ಮಾಣವಾಗುವ ಸಭಾ ಭವನವನ್ನು ಸ್ಥಳೀಯ ಕೂಲಿಗಳಿಂದ ಮಾಡಬೇಕಾದ ಕಾಮಗಾರಿಯನ್ನು ಗುತ್ತಿಗೆ ಅಧಾರದಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ತುರ್ತು ಸಾಮಾನ್ಯ ಸಭೆಯಲ್ಲಿ ಗ್ರಾ. ಪಂ. ಸದಸ್ಯರಾದ ದೇವಪ್ರಸಾದ್ ಪುನರೂರು ಹಾಗೂ ಮಾಧವ, ಹೇಮಲತಾ, ರಘುರಾಮ್ ಪುನರೂರು ಗ್ರಾ. ಪಂ ವ್ಯಾಪ್ತಿಯಲ್ಲಿ ಧಾರ್ಮಿಕ ಸಂಸ್ಥೆಗಳ ಬ್ಯಾನರುಗಳು ಉಚಿತವಾಗಿ ಮತ್ತು ಇತರ ವಾಣಿಜ್ಯ ಬ್ಯಾನರ್‌ಗಳಿಗೆ ಚದರ ಅಡಿಗೆ ರೂಪಾಯಿ ಮೂರು ನಿಗದಿ ಪಡಿಸಿ ಎಂದು ಪಟ್ಟು ಹಿಡಿದರು. ಸಭೆಯಲ್ಲಿ ಎಲ್ಲಾ ಬ್ಯಾನರ್‌ಗಳನ್ನು ಉಚಿತವಾಗಿ ಹಾಕುವ ಬಗ್ಗೆ ನಿರ್ಣಯ ಮಾಡಲಾದರೂ ಸರಕಾರದ ಆದೇಶದಂತೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ದರ ನಿಗದಿಪಡಿಸಲಾಗಿದ್ದು ಉಚಿತವಾಗಿ ಬ್ಯಾನರ್ ಹಾಕುವ ಬಗ್ಗೆ ನಿರ್ಣಯ ಮಾಡಿ ತಾಲೂಕು ಪಂಚಾಯಿತಿಗೆ ಕಳುಹಿಸಲಾಗುವುದು. ಸರಕಾರದಿಂದ ಬರುವ ಆದೇಶವನ್ನು ಪರಿಗಣಿಸಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಂಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಪಿಡಿಓ ಅರುಣ್ ಪ್ರದೀಪ್ ಡಿಸೋಜ ಹಾಗೂ ಕಾರ್ಯದರ್ಶಿ ಓಲಿವರ್ ಪಿಂಟೋ ತಿಳಿಸಿದ್ದಾರೆ.

Kinnigoli 19121307 Kinnigoli 19121308

Comments

comments

Comments are closed.

Read previous post:
Kinnigoli 19121305
ಪತ್ನಿ ಗೃಹ ಬಂಧನ ಪತಿಯ ಪೈಶಾಶಿಕ ಕೃತ್ಯ

ಕಟೀಲು : ಕಳೆದ 23 ವರ್ಷದಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಅಲ್ಲದೆ ಕಳೆದ ನಾಲ್ಕು ವರ್ಷದಿಂದ ಗೃಹಬಂಧನದಲ್ಲಿಟ್ಟ ಪತಿರಾಯನ ರಕ್ಕಸ ಪೃವೃತ್ತಿಯನ್ನು ಮನ ಬಿಚ್ಚಿ ಹೇಳುತ್ತಿದ್ದಾಗ ಮನಸ್ಸು...

Close