ಪತ್ನಿ ಗೃಹ ಬಂಧನ ಪತಿಯ ಪೈಶಾಶಿಕ ಕೃತ್ಯ

ಕಟೀಲು : ಕಳೆದ 23 ವರ್ಷದಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಅಲ್ಲದೆ ಕಳೆದ ನಾಲ್ಕು ವರ್ಷದಿಂದ ಗೃಹಬಂಧನದಲ್ಲಿಟ್ಟ ಪತಿರಾಯನ ರಕ್ಕಸ ಪೃವೃತ್ತಿಯನ್ನು ಮನ ಬಿಚ್ಚಿ ಹೇಳುತ್ತಿದ್ದಾಗ ಮನಸ್ಸು ಕರಗಿ ಕಣ್ಣಿನಂಚಿನಲ್ಲಿ ನೀರು ಬಾರದೆ ಇರದು. ಕಟೀಲು ಸಮೀಪದ ಅಜಾರುವಿನ ಸುಲೋಚನ ಎಂಬ ದುರ್ದೈವಿ ಮಹಿಳೆಯ ಚಿಂತಾಜನಕ ಸ್ಥಿತಿ ಇದಾಗಿದೆ.
ಪತಿಯಿಂದಲೇ ಪತ್ನಿಯ ದೌರ್ಜನ್ಯ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಅರಿತ ಮಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಕಾರಿಗಳು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರು, ಮೂಲ್ಕಿ ಪೊಲೀಸರು ಹಾಗೂ ಮಾಧ್ಯಮ ಮಿತ್ರರ ತಂಡವು ಅಜಾರಿನ ಮನೆಗೆ ಭೇಟಿ ನೀಡಿದಾಗ ಆ ಮನೆಯ ಮಾಲಕ ಮಾಧವ ಪೂಜಾರಿ(55) ತನ್ನ ಪತ್ನಿ ಸುಲೋಚನಳನ್ನು (48) ಅಮಾನುಷ ರೀತಿಯಲ್ಲಿ ಮನೆಯ ಕೋಣೆಯಲ್ಲಿ ಕೂಡಿ ಹಾಕಿದ ದೃಶ್ಯ ಕಂಡು ಬಂತು.

ಉಡುಪಿ ಜಿಲ್ಲೆಯ ಕಲ್ಯಾಣಪುರ ಮೂಲದ ಸುಲೋಚನಳನ್ನು ಕಳೆದ 23ವರ್ಷದ ಹಿಂದೆ ಮುಂಬೈಯಲ್ಲಿ ಮದುವೆಯಾಗಿತ್ತು. ಅವರ ದಾಂಪತ್ಯ ಜೀವನ ಮೊದಲಿಗೆ ಸರಿಯಾಗಿತ್ತು. ಮುಂಬಯಿಯ ಕೆಲಸವನ್ನು ಬಿಟ್ಟು ಕಟೀಲು ಬಳಿಯ ಅಜಾರಿಗೆ ಬಂದು ನೆಲೆಸಿದ ನಂತರ ಆತನ ನಡವಳಿಕೆ ಬದಲಾಯಿತು ಎಂದು ತನ್ನ ಆರಂಭದ ದಿನಗಳ ಬಗ್ಗೆ ಸುಲೋಚನ ಹೇಳಿಕೊಂಡಳು
ಆತ ಊರಿಗೆ ಸಭ್ಯನಂತೆ ಕಂಡು ಬಂದರೂ ಹೆತ್ತ ತಾಯಿ ಒಡಹುಟ್ಟಿದ ತಂಗಿಯನ್ನು ಸಹ ಕಿರುಕುಳ ನೀಡಿ ಓಡಿಸಿದ್ದ. ಪಕ್ಕದಲ್ಲಿದ್ದ ತುಂಡು ಜಮೀನನ್ನು ಸಹ ಮಾರಾಟ ಮಾಡಿದ್ದಾನೆ ಎಂದು ಅಲ್ಲಿನ ಸ್ಥಳಿಯರು ತಿಳಿಸಿದ್ದಾರೆ.

ಕಳೆದ ೨೦ ವರ್ಷಗಳಿಂದ ಇಲ್ಲಸಲ್ಲದ ಆರೋಪ ಮಾಡಿ ಕಿರುಕುಳ ನೀಡುವುದು, ಹೊಡೆಯುವುದು ಮಾಮೂಲಿಯಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಹೊರಗೆಲ್ಲೂ ಹೋಗಬಾರದು ಎಂದು ಕಾಲಿನ ಮಣಿ ಗಂಟುಗಳಿಗೆ ಹೊಡೆದು ನಡೆದಾಡುದ ಸ್ಥಿತಿಯಲ್ಲಿ ಇಲ್ಲ. ಕೆಲಸಕ್ಕೆ ಹೋಗುವಾಗ ಪತ್ನಿ ಹೊರಗೆ ಎಲ್ಲೂ ಹೋಗಬಾರದು ಎಂದು ಮನೆಗೆ ಬೀಗ ಹಾಕಿ ಕಿಟಕಿಗಳನ್ನು ಮುಚ್ಚಿ ಹೋಗುತ್ತಾರೆ ತಿನ್ನಲು ನೀಡುತ್ತಿಲ್ಲ ನೆರೆ ಮನೆಯವರು ಗಂಡ ಇಲ್ಲದ ಸಮಯದಲ್ಲಿ ಊಟ ನೀಡಿದ್ದಾರೆ ಎಂದು ಸುಲೋಚನ ತಿಳಿಸಿದ್ದಾರೆ. ಅಲ್ಲದೇ ಸಮೀಪದ ಒಂದೆರಡು ಮನೆಯವರು ಆತನ ಕೃತ್ಯಗಳಿಗೆ ಸಾಥ್ ನೀಡಿದ ಗುಮಾನಿ ಸುಲೋಚನ ಅವರಿಗೆ ಇದೆ.
ಸ್ಥಳಕ್ಕೆ ಮಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಕಾರಿಗಳಾದ ಶ್ಯಾಮಲ, ಕಲ್ಪನಾ, ಆಶಾ ಕಾರ್ಯಕರ್ತೆಯರು ಮುಲ್ಕಿ ಪೋಲಿಸರು ಭೇಟಿ ನೀಡಿ ಸುಲೋಚನರನ್ನು ಮೂಲ್ಕಿಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ

Kinnigoli 19121303

Kinnigoli 19121304

Kinnigoli 19121305Kinnigoli 19121306

Comments

comments

Comments are closed.

Read previous post:
Kinnigoli 19121303
very happy merry christmas

  Jingle bells Jingle bells what fun it is to wish our friends  Christmas Bells Are Gladly Ringing. Let The...

Close