ರಸ್ತೆ ಸಾರ್ವಜನಿಕರಿಂದ ದುರಸ್ತಿ

Puneethakrishna Sk
ಮುಲ್ಕಿ; ಕಳೆದ ಹಲವಾರು ವರ್ಷಗಳಿಂದ ದುರಸ್ತಿಯಾಗದೆ ಹೊಂಡ ಗುಂಡಿಗಳಿಂದ ಕೂಡಿದ ಪಂಜಿನಡ್ಕದಿಂದ ಎಳತ್ತೂರು-ನೆಲಗುಡ್ಡೆ ರಸ್ತೆಯನ್ನು ಸ್ಥಳಿಯರೇ ದುರಸ್ತಿಪಡಿಸಿದ ಘಟನೆ ಎಳತ್ತೂರಿನಲ್ಲಿ ನಡೆದಿದೆ.
ಕಿನ್ನಿಗೋಳಿಯಿಂದ ಗೋಳಿಜೋರವಾಗಿ ಪಂಜಿನಡ್ಕಕ್ಕೆ ಹೋಗುವರಸ್ತೆ ಕಳೆದ ಹಲವಾರು ವರ್ಷಗಳಿಂದ ನಾದುರಸ್ತಿಯಲ್ಲಿದ್ದು ಇದನ್ನು ಮನಗಂಡ ಜಿಲ್ಲಾಪಂಚಾಯತ್ ಸಡಕ್ ಯೋಜನೆಯಡಿ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಿದ್ದು ಆದರೆ ಈ ಕೆಲಸ ಗೋಳಿಜೋರದವರೆಗೆ ಮಾತ್ರ ನಡೆದಿದ್ದು ಬಳಿಕ ರಸ್ತೆಗೆ ಫೇವರ್ ಫಿನಿಶ್ ಕಾಮಗಾರಿ ನಡೆಸುವುದು,ವರ್ಷಂಪ್ರತಿ ರಸ್ತೆಯನ್ನು ದುರಸ್ತಿ ಮಾಡಲು ಕಿನ್ನಿಗೋಳಿಯ ಗುತ್ತಿಗೆದಾರರು ಒಪ್ಪಿಕೊಂಡಿದ್ದದಕ್ಕೆ ಅವರ ಸಂಬಂದಿಕರ ಹೆಸರನ್ನು ನಾಮಫಲಕದಲ್ಲಿ ಹಾಕುವುದನ್ನು ಬಿಟ್ಟರೆ ರಸ್ತೆ ಮಾತ್ರ ದುರಸ್ಥಿಯಾಗಲೇ ಇಲ್ಲ. ಗುತ್ತಿಗೆದಾರರ ಬಳಿ ಈ ಬಗ್ಗೆ ಕೇಳಿದರೆ ಹಣ ಬಿಡುಗಡೆಯಾಗಲಿಲ್ಲ ಎಂದು ಸಬೂಬು ಹೇಳುವುದು ಮಾಮೂಲಿಯಾಗಿಬಿಟ್ಟಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಚುನಾವಣೆ ರಾಜಕೀಯ
ಕಳೆದ ಚುನಾವಣೆ ಬರುವಾಗ ಪ್ರಮುಖ ಪಕ್ಷದ ರಾಜಕೀಯ ನಾಯಕರೊಬ್ಬರ ಅಣತಿಯ ಮೇರೆಗೆ ಇದೇ ಗುತ್ತಿಗೆದಾರರು ಈ ರಸ್ತೆಗೆ ತೇಪೆ ಕಾರ‍್ಯಕ್ರಮ ನಡೆಸಲು ಮುಂದಾಗುತ್ತಿದ್ದಂತೆ ವಿಪಕ್ಷ ನಾಯಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಚುನಾವಣೆ ನೀತಿಸಂಹಿತೆ ಉಲ್ಲಘನೆ ದೂರು ನೀಡಿದ ಕಾರಣ ಯಾವುದೇ ಕಾಮಗಾರಿ ನಡೆಯದೆ ರಸ್ತೆ ಹೊಂಡಮಯವಾಗಿಯೇ ಉಳಿಯಿತು.
ಎಲ್ಲ ರಾಜಕೀಯ ನಾಯಕರಿಗೆ ಹೇಳಿ ಹೇಳಿ ಸಾಕಾಗಿ ಕೊನೆಗೆ ಸಂತ ನಿರಂಕಾರಿ ಸತ್ಸಂಗ ನೆಲಗುಡ್ಡೆ ಎಳತ್ತೂರು ಇದರ ವತಿಯಿಂದ ಸತತ ಎರಡನೆಯ ಬಾರಿ ಉದ್ಯಮಿ ಸದಾಶಿವ ದೇವಾಡಿಗ ನೇತೃತ್ವದಲ್ಲಿ ಸುಮಾರು 12 ಸಾವಿರ ವೆಚ್ಚದಲ್ಲಿ ಸ್ಥಳೀಯರೇ ದುರಸ್ಥಿ ಮಾಡಿ ಸರಕಾರಕ್ಕೆ ,ಜನಪ್ರತಿನಿಧಿಗಳಿಗೆ ಸಡ್ಡು ಹೊಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Kinnigoli 19121301ನೆಡಲಗುಡ್ಡೆ ಮೊದಲು ಇದ್ದ ರಸ್ತೆ

Kinnigoli 19121302 ಈಗ ದುರಸ್ತಿಯಾದ ರಸ್ತೆ

 

Comments

comments

Comments are closed.

Read previous post:
Kinnigoli 18122013
ನಿಧನ : ಪೇರು ಶೆಡ್ತಿ ( 96ವರ್ಷ)

ಕಿನ್ನಿಗೋಳಿ : ಕಿನ್ನಿಗೋಳಿ ಕೊಡೆತ್ತೂರು ನಿವಾಸಿ ದಿ| ಜಾರಪ್ಪ ಶೆಟ್ಟಿ ಅವರ ಪತ್ನಿ ಪೇರು ಶೆಡ್ತಿ (96ವರ್ಷ) ಮಂಗಳವಾರ 17 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಕಿನ್ನಿಗೋಳಿ...

Close