ಕಿನ್ನಿಗೋಳಿ : ಸಾವಯವ ಗೊಬ್ಬರ ವಿತರಣೆ

ಕಿನ್ನಿಗೋಳಿ: ಪ್ರತಿಯೊಂದು ಬೆಳೆಗೆ ಬೇವಿನ ಗೊಬ್ಬರ ಉತ್ತಮ ಪೋಷಕಾಂಶ ಸರಕಾರದಿಂದ ದೊರಕುವ ಯೋಜನೆಗಳ ಸದ್ವಿನಿಯೋಗ ಪಡೆಯಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್ ಹೇಳಿದರು.
ಮಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದ.ಕ. ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಸಾವಯವ ಗ್ರಾಮ, ಸ್ಥಳ ಯೋಜನೆ ಮೆನ್ನಬೆಟ್ಟು ಜಂಟೀ ಆಶ್ರಯದಲ್ಲಿ ಇತ್ತೀಚೆಗೆ ಮೆನ್ನಬೆಟ್ಟು ಗ್ರಾಮದ ಮೂರುಕಾವೇರಿ ಲಲಿತಾ ಅವರ ಕೃಷಿ ಭೂಮಿಯಲ್ಲಿ ನಡೆದ ಸಾವಯವ ಕೃಷಿ ಫಲಾನುಭವಿಗೆ ಬೇವಿನ ಗೊಬ್ಬರ ವಿತರಿಸಿ ಸಮಾರಂಭದಲ್ಲಿ ಮಾತನಾಡಿದರು.
ಯುಗಪುರುಷ ಸಂಪಾದಕರಾದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಕಿಲೆಂಜೂರು ಗ್ರಾಮ ಪಂಚಾಯಿತಿ ವತಿಯಿಂದ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಾವಯವ ಕೃಷಿ ಸದಸ್ಯ ಗೋಪಾಲ ಕೊಡೆತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ, ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಬಿ.ಎ. ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟ ಅಧ್ಯಕ್ಷೆ ನಯನ ಶೆಟ್ಟಿ, ಪ್ರಭಾ, ಶುಭಲತಾ ಉಪಸ್ಥಿತರಿದ್ದರು.

Kinnigoli 20121301

Comments

comments

Comments are closed.

Read previous post:
Kinnigoli 19121308
ಬ್ಯಾನರ್ ವಿವಾದ ಪಂಚಾಯತ್‌ಗೆ ಘೇರಾವು

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರೂರು ಹಾಗೂ ಗುತ್ತಕಾಡು ಪರಿಸರದಲ್ಲಿ ಹಾಕಿದ ಬ್ಯಾನರ್‌ನ್ನು ಬ್ಯಾನರು ಹಾಕಿದವರಿಗೆ ಮಾಹಿತಿ ನೀಡದೆ ಪಂಚಾಯಿತಿ ಆಡಳಿತ ಮಂಡಳಿ ತೆಗೆದು ಹಾಕಿದ್ದು...

Close