ಕಿರುಕಳಕ್ಕೆ ಒಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚೇತರಿಕೆ

Kinnigoli 21121301

ಕಿನ್ನಿಗೋಳಿ : ಕಳೆದ 23 ವರ್ಷಗಳಿಂದ ಪತಿಯಿಂದಲೇ ಕಿರುಕಳಕ್ಕೆ ಒಳಗಾದ ಮಹಿಳೆ ಕಟೀಲು ಸಮೀಪದ ಅಜಾರು ನಿವಾಸಿ ಸುಲೋಚನ ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ.
ಕಳೆದ 23 ವರ್ಷಗಳಿಂದಲೂ ಪತಿ ಮಾಧವ ಪೂಜಾರಿಯಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿದ ಸುಲೋಚನಳನ್ನು ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾರವರ ನೇತೃತ್ವದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆರು ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರು ಮೂಲ್ಕಿ ಪೊಲೀಸರ ಸಹಕಾರದಿಂದ ಗೃಹ ಬಂಧನದಿಂದ ಮುಕ್ತಿಗೊಳಿಸಿ ಗುರುವಾರ ಮೂಲ್ಕಿಯ ಕಾರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು.
ಆಸ್ಪತ್ರೆಯ ವೈದ್ಯಾಧಿಕಾರಿ ತಪಾಸಣೆ ನಡೆಸಿ ಸುಲೋಚನರವರ ದೇಹದ ಮೊಣಕಾಲಿಗೆ ಬಲವಾದ ವಸ್ತುವಿನಿಂದ ಹೊಡೆದಿರುವುದರಿಂದ ಒಳಭಾಗದಲ್ಲಿ ಎಲುಬಿಗೆ ಹಾನಿ ಆಗಿದೆ. ನಿಗದಿತ ಸಮಯದ ಆಹಾರ ಸೇವನೆ ಇಲ್ಲದೆ ದೇಹ ತುಂಬಾ ಬಲಹೀನವಾಗಿರುವುದರಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲು ಶಿಫಾರಸ್ಸು ಮಾಡಿದ್ದಾರೆ. ಮಂಗಳೂರಿನಲ್ಲಿ ಚಿಕಿತ್ಸೆಗೆ ಮಹಿಳೆ ಸ್ಪಂದಿಸುತ್ತಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ ಎಂದು ತಿಳಿದು ಬಂದಿದೆ.
ಈ ನಡುವೆ ದೌರ್ಜನ್ಯ ನಡೆಸಿರುವ ಮಾಧವ ಪೂಜಾರಿಯನ್ನು ವಶಕ್ಕೆ ಪಡೆದ ಮೂಲ್ಕಿ ಪೊಲೀಸರು ಮೂಲ್ಕಿ ಠಾಣೆಯಲ್ಲಿ ಶುಕ್ರವಾರವೂ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ವರೆಗೆ ಅಧಿಕೃತವಾಗಿ ಆರೋಪಿ ಸ್ಥಾನದಲ್ಲಿರುವ ಮಾಧವನ ವಿರುದ್ಧ ಯಾರೂ ದೂರು ನೀಡಿಲ್ಲದ ಕಾರಣ ಮುಂದಿನ ತನಿಖೆಗೆ ತೊಡಕಾಗಿದೆ ಎನ್ನಲಾಗಿದೆ.

Comments

comments

Comments are closed.

Read previous post:
Kinnigoli 20121301
ಕಿನ್ನಿಗೋಳಿ : ಸಾವಯವ ಗೊಬ್ಬರ ವಿತರಣೆ

ಕಿನ್ನಿಗೋಳಿ: ಪ್ರತಿಯೊಂದು ಬೆಳೆಗೆ ಬೇವಿನ ಗೊಬ್ಬರ ಉತ್ತಮ ಪೋಷಕಾಂಶ ಸರಕಾರದಿಂದ ದೊರಕುವ ಯೋಜನೆಗಳ ಸದ್ವಿನಿಯೋಗ ಪಡೆಯಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್ ಹೇಳಿದರು. ಮಂಗಳೂರು...

Close