ಮುಲ್ಕಿ ಅರಸು ಕಂಬಳ

ಮುಲ್ಕಿ: ಜಾನಪದ ಕಂಬಳ ಕ್ರೀಡೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸರಕಾರ ಗ್ರಾಮೀಣ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶನಿವಾರ ಪಡುಪಣಂಬೂರಿನಲ್ಲಿ ನಡೆದ ಮುಲ್ಕಿ ಅರಸು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜನಪ್ರಿಯ ಕಂಬಳ ಕ್ರೀಡೆಯನ್ನು ಬೆಳಿಗ್ಗೆ ಪ್ರಗತಿಪರ ಕೃಷಿಕರಾದ ಸುರತ್ಕಲ್ ಮಾಧವ ನಗರ ಕೆ.ಗೋಪಾಲಕೃಷ್ಣ ಪ್ರಭು ಉದ್ಘಾಟಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮುಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಬಳ್ಳಾರಿ ಉದ್ಯಮಿ ಸುರೇಶ್ ಪಿ.ಶೆಟ್ಟಿ ಗುರ್ಮೆ, ಮುಂಬಯಿ ಮೀರಾ ದಹಾನು ಬಂಟ್ಸ್ ಸಂಘದ ಗೌರವಾಧ್ಯಕ್ಷ ಬಳಕುಂಜೆ ವಿರಾರ್ ಶಂಕರ ಬಿ.ಶೆಟ್ಟಿ, ಮುಂಬಯಿ ಉದ್ಯಮಿ ಯದು ನಾರಾಯಣ ಎಂ. ಶೆಟ್ಟಿ, ಮುಂಬಯಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸದಾಶಿವ ಬಿ. ಶೆಟ್ಟಿ, ಮೂಲ್ಕಿ ಕಂಬಳ ಸಮಿತಿ ಗೌರವಾಧ್ಯಕ್ಷ ಎಂ.ಎಚ್.ಅರವಿಂದ ಪೂಂಜಾ, ಅಧ್ಯಕ್ಷ ಕೊಲ್ನಾಡು ಗುತ್ತು ರಾಮಚಂದ್ರ ನಾಯ್ಕ್, ಕೊಲ್ನಾಡು ಪಾದೆಮನೆ ಅಜಿತ್ ರೈ, ಮನೋಹರ್ ಸುಂದರ ಶೆಟ್ಟಿ, ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಎಸ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Mulki 21121301 Mulki 21121302 Mulki 21121303 Mulki 21121304 Mulki 21121305 Mulki 21121306 Mulki 21121307 Mulki 21121308 Mulki 21121309 Mulki 21121310R

Comments

comments

Comments are closed.

Read previous post:
Kinnigoli 21121323
ಸುಮಂಗಳಾ ವಿ. ದೇವಾಡಿಗ-ಡಾಕ್ಟರೇಟ್ ಪದವಿ

ಮೂಲ್ಕಿ : ಪಾವಂಜೆಯ ಸುಮಂಗಳಾ ವಿ. ದೇವಾಡಿಗ ಅವರು, ಸಿಂತೆಸಿಸ್ ಆಂಡ್ ಬಯೋಲಾಜಿಕಲ್ ಇವೇಲ್ಯುವೇಶನ್ ಆಫ್ ಸಮ್‌ಹೆಟರೋಸೈಕ್ಲಕ್ ಕಾಂಪೌಂಡ್ಸ್ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿರುವ ಮಹಾ...

Close