ಮೂಲ್ಕಿ ವಿಜಯಾ ಕಾಲೇಜು ಸುವರ್ಣ ಮಹೋತ್ಸವ

Bhagyavan Sanil
ಮೂಲ್ಕಿ: ತಾಯಿಗೆ ಸಮಾನವಾದ ಶಿಕ್ಷಣ ಸಂಸ್ಥೆಯನ್ನು ಯಾವತ್ತೂ ಮರೆಯದೆ ಸಹಕಾರ ನೀಡುವುದು ಹಳೆ ವಿದ್ಯಾರ್ಥಿಗಳ ಕರ್ತವ್ಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಭಾನುವಾರ ಮೂಲ್ಕಿ ವಿಜಯಾ ಕಾಲೇಜು ಸುವರ್ಣ ಮಹೋತ್ಸವದ ಪ್ರಯುಕ್ತ ಹಳೆ ವಿದ್ಯಾರ್ಥಿಗಳು ಮತ್ತು ಕಾಲೇಜು ಸಿಬ್ಬಂದಿಗಳ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
ಪ್ರಾಪಂಚಿಕ ಮತ್ತು ಶೈಕ್ಷಣಿಕ ಜ್ಞಾನ ನೀಡಿ ಜೀವನದಲ್ಲಿ ಉನ್ನತ ಸ್ಥಾನ ಮಾನಗಳಿಸಲು ಸಹಕರಿಸಿದ ಶಿಕ್ಷಣ ಸಂಸ್ಥೆ ಮೊದಲ ಗುರುವಾದ ತಾಯಿಯಂತೆ ಪೂಜ್ಯ ಸ್ಥಾನದಲ್ಲಿರುವುವ ಸಂಸ್ಥೆಗೆ ಸಹಕರಿಸಿದಾಗ ಸಂಸ್ಥೆ ಬೆಳೆದು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು.
ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ.ಪಮೀದಾ ಬೇಗಂ,ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಡಾ.ಬಿಎಚ್.ರಾಘವರಾವ್, ಹಳೆ ವಿದ್ಯಾರ್ಥಿಗಳಾದ ಸರ್ವೋತ್ತಮ ಅಂಚನ್,ಹರೀಶ್ ಪುತ್ರನ್,ಶಮೀನಾ ಆಳ್ವಾ,ಪ್ರೊ ಸ್ಯಾಮ್ ಮಾಬೆನ್,ಪ್ರೊ ನಾಗೇಶ್ ಶೆಣೈ,ಎಚ್.ರಾಮದಾಸ್ ಕಾಮತ್,ಅತಿಥಿಗಳಾಗಿದ್ದರು.
ಡಾ.ಬಿಎಚ್ ರಾಘವರಾವ್ ಸ್ವಾಗತಿಸಿದರು.ನಿವೇದಿತಾ ಎನ್ ಬಿ ನಿರೂಪಿಸಿದರು.ನಾಗೇಶ್ ಶೆಣೈ ವಂದಿಸಿದರು.

Kinnigoli 23121301

Comments

comments

Comments are closed.

Read previous post:
Kallamundkur 21121303
ನಾರಾಯಣ ಗುರು ಮೂರ್ತಿಯ ಮೆರವಣಿಗೆ

ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಮುಂಡ್ಕೂರು ಇದರ ಬ್ರಹ್ಮಶ್ರಿ ನಾರಾಯಣ ಗುರು ಬಿಂಬ ಪ್ರತಿಷ್ಠೆಯ ಅಂಗವಾಗಿ ಕಿನ್ನಿಗೋಳಿಯ ವಸಂತ ಮಂಟಪದಿಂದ ಕಲ್ಲಮುಂಡ್ಕೂರುವರೆಗೆ ನಾರಾಯಣ ಗುರುಗಳ ಮೂರ್ತಿಯ ಭವ್ಯ...

Close