ಕ್ರಿಸ್ಮಸ್ ಶಾಂತಿ ಸಹಬಾಳ್ವೆ ನೆಮ್ಮದಿ ತರಲಿ

ಕಿನ್ನಿಗೋಳಿ: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರುವ ಈ ಕ್ರಿಸ್ಮಸ್ ಹಬ್ಬ ನಾಡಿನ ಸಮಸ್ತ ಜನರಿಗೆ ಶಾಂತಿ ಸಹಬಾಳ್ವೆ ನೆಮ್ಮದಿ ತರುವಂತಾಗಲಿ ಎಂದು ಪೊಂಪೈ ಕಾಲೇಜು ಉಪನ್ಯಾಸಕ ಜಗದೀಶ್ ಹೊಳ್ಳ ಹೇಳಿದರು.
ಬುಧವಾರ ರಂದು ಕಿರೆಂ ರೆಮೆದಿ ಅಮ್ಮನವರ ಧರ್ಮಕೇಂದ್ರದ ಆಶ್ರಯದಲ್ಲಿ ಮೂರು ಕಾವೇರಿ ಬಯಲಾಟ ವೇದಿಕೆಯಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.
ದಾಮಸ್ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ| ಪೌಲ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಕಿರೆಂ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ರಾಬರ್ಟ್ ರೊಡ್ರಿಗಸ್, ಕಾರ್ಯದರ್ಶಿ ಮಾರ್ಸಿಲಿನ್ ಸಲ್ದಾನಾ, ವಾಳೆಯ ಗುರಿಕಾರರಾದ ಅನಿತಾ ಫೆರ್ನಾಂಡಿಸ್, ಸುನೀತಾ ಡಿಸೋಜ, ಸೆವರಿನ್, ಅನಿತಾ ಡಿಸೋಜ ಮತ್ತಿತರು ಉಪಸ್ಥಿತರಿದ್ದರು.

Kinnigoli 26121303

Comments

comments

Comments are closed.

Read previous post:
Kinnigoli 26121302
ಕಿನ್ನಿಗೋಳಿ : ಅಂಗನವಾಡಿ ಕೇಂದ್ರ ಉದ್ಘಾಟನೆ

ಜನಪ್ರತಿನಿಧಿಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಮಹತ್ವದ ಹೊಣೆ ಇದೆ. ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದಂದು ಯಾವುದೇ ಸರ್ಕಾರಿ ಸೌಲಭ್ಯ ಪಡೆಯದೆ...

Close