ಕಿನ್ನಿಗೋಳಿ : ಅಂಗನವಾಡಿ ಕೇಂದ್ರ ಉದ್ಘಾಟನೆ

ಜನಪ್ರತಿನಿಧಿಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಮಹತ್ವದ ಹೊಣೆ ಇದೆ. ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದಂದು ಯಾವುದೇ ಸರ್ಕಾರಿ ಸೌಲಭ್ಯ ಪಡೆಯದೆ ಊರಿನ ನಾಗರೀಕರೇ ಅಂಗನವಾಡಿ ಕಟ್ಟಡ ನಿರ್ಮಿಸಿರುವುದು ಸರ್ವರಿಗೂ ಸ್ಪೂರ್ತಿದಾಯಕ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬುಧವಾರ ಕಿನ್ನಿಗೋಳಿಯ ರಾಜರತ್ನಪುರದಲ್ಲಿ ಸುಮಾರು ೧೫ ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಟಲ್ ಬಿಹಾರಿ ವಾಜಪೇಯಿ ಕಟ್ಟಡ ಹಾಗೂ ಅಂಗನವಾಡಿ ಕೇಂದ್ರ ಉದ್ಘಾಟನೆ ನಡೆಸಿ ಮಾತನಾಡಿದರು.
ದ.ಕ. ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್. ಮಂಗಳೂರು ಜಿ.ಪಂ ಅಧ್ಯಕ್ಷ ಕೊರಗಪ್ಪ ನಾಯ್ಕ್, ಮಂಗಳೂರು ಜಿ.ಪಂ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡತ್ತೂರು ಭುವನಾಭಿರಾಮ ಉಡುಪ, ದ.ಕ. ಜಿ.ಪಂ ಸದಸ್ಯ ಈಶ್ವರ ಕಟೀಲು, ದ.ಕ. ಜಿ.ಪಂ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ.ಪಂ. ಅಧ್ಯಕ್ಷ ಹರೀಶ್ ಕುಮಾರ್, ಮೆನ್ನಬೆಟ್ಟು ಗ್ರಾ.ಪಂ ಅಧ್ಯಕ್ಷ ಜನಾರ್ದನ ಕಿಲೆಂಜೂರು, ತಾ.ಪಂ. ಸದಸ್ಯೆರಾದ ಬೇಬಿ ಎಸ್. ಕೋಟ್ಯಾನ್, ಸಾವಿತ್ರಿ ಸುವರ್ಣ, ವಿದ್ಯುತ್ ಗುತ್ತಿಗೆದಾರರ ಸಂಘದ ಶೈಲೇಶ್ ಕುಮಾರ್, ಕಿನ್ನಿಗೋಳಿ ರಾಜರತ್ನಪುರ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸರೋಜಿನಿ, ಭ್ರಾಮರಿ ಮಹಿಳಾ ಮಂಡಳಿಯ ರೇವತಿ ಪುರುಷೋತ್ತಮ್, ಕಿನ್ನಿಗೋಳಿ ರಾಜರತ್ನಪುರ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಕಿನ್ನಿಗೋಳಿ ರಾಜರತ್ನಪುರ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ್ ಆಚಾರ್ಯ ಉದ್ಯಮಿ ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.

Kinnigoli 26121302ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ ಕಟೀಲು ಸ್ವಾಗತಿಸಿ ಕೇಶವ ಕರ್ಕೆರ ವಂದಿಸಿದರು. ನಿತೇಶ್ ಕಾರ್ಯಕ್ರಮ ನಿರೂಪಿಸಿದರು.

 

Comments

comments

Comments are closed.

Read previous post:
Kinnigoli 25121306
ಕಿನ್ನಿಗೋಳಿ ಪರಿಸರದಲ್ಲಿ ಮೂಡಿ ಬಂದ ಕ್ರಿಸ್ಮಸ್ ಗೋದಲಿ

ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ ಗೋದಲಿ ದಾಮಸ್ಕಟ್ಟೆ (ಕಿರೆಂ) ರೆಮದಿ ಅಮ್ಮನವರ ಇಗರ್ಜಿ ಗೋದಲಿ ಕಟೀಲು ಸಂತ ಜಾಕೋಬರ ಇಗರ್ಜಿ ಗೋದಲಿ ಪಕ್ಷಿಕೆರೆ ಸಂತ ಜೂಡರ ಇಗರ್ಜಿ...

Close