ಯೇಸು ಕ್ರಿಸ್ತ ಶಾಂತಿ, ಸೌಹಾರ್ದ ಹಾಗೂ ಏಕತೆಯ ಹರಿಕಾರ

 ಕಿನ್ನಿಗೋಳಿ : ಶಾಂತಿ, ಸೌಹಾರ್ದ ಹಾಗೂ ಏಕತೆಯ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬವನ್ನು ವಿಶ್ವಕ್ಕೆ ಪಸರಿಸಿದ ಯೇಸು ದೇವರು ಪ್ರತಿಯೊಬ್ಬರ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ದಾಮಸ್ಕಟ್ಟೆ ಕಿರೆಂ ಧರ್ಮ ಗುರು ಫಾ| ಪೌಲ್ ಪಿಂಟೋ ಹೇಳಿದರು
ದಾಮಸ್ಕಟ್ಟೆ ಕಿರೆಂ ರೆಮೆದಿ ಅಮ್ಮನವರ ಚರ್ಚ್ ಆಶ್ರಯದಲ್ಲಿ ಬುಧವಾರ ದಾಮಸಕಟ್ಟೆ ಸಾರ್ವಜನಿಕ ರಂಗಮಂಟಪದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ವಿವಿಧ ವೃತ್ತಿಯಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಿದ ಸಾಧಕರಾದ ಅಣ್ಣಪ್ಪ ಪ್ರಭು, ರವಿದಾಸ ಶೆಣೈ, ರಾಜಕುಮಾರ್ ಭಟ್, ಗಣಪತಿ ಆಚಾರ್ಯ, ಭೋಜ ಪೂಜಾರಿ, ರುದ್ರಗೌಡರನ್ನು ಸನ್ಮಾನಿಸಲಾಯಿತು..
ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ| ಜೊರೊಮ್ ಡಿಸೋಜ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಟಿ. ಎಚ್. ಮಯ್ಯದ್ದಿ , ಧಾರ್ಮಿಕ ಮುಖಂಡ ನಾರಾಯಣ ಅಂಚನ್, ದಾಮಸ್ಕಟ್ಟೆ ಕಿರೆಂ ಚರ್ಚ್ ವಾಳೆಯ ಗುರಿಕಾರರಾದ ಬರ್ಟನ್ ಸಿಕ್ವೇರಾ, ವಿಕ್ಟರ್ ನಜರತ್, ವಿಕ್ಟರ್ ಲೋಬೋ, ಸಂತಾನ್ ಡಿಸೋಜ, ಮನೋಜ್ ಫೆರ್ನಾಂಡಿಸ್ ಮತ್ತಿತgರು ಉಪಸ್ಥಿತರಿದ್ದರು.

Kinnigoli 27121303

Comments

comments

Comments are closed.

Read previous post:
Kinnigoli 26121308
ಶ್ರೀ ಅರಸು ಕುಂಜರಾಯ- ಕೆಂಡಸೇವೆ

Close