ಧರ್ಮವನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು

ಕಿನ್ನಿಗೋಳಿ : ಇಂದಿನ ವಾಸ್ತವ ಪರಿಸ್ಥಿತಿ ಅರಿತು ಧರ್ಮವನ್ನು ಮಿತಿಯಲ್ಲಿ ಆಚರಿಸಿ ಇನ್ನೊಂದು ಧರ್ಮವನ್ನು ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಅಲ್ಲಿ ಶಾಂತಿ ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಬಿ. ಹೇಳಿದರು.
ಕಟೀಲು ಸಂತ ಜಾಕೋಬರ ಚರ್ಚ್ ಆಶ್ರಯದಲ್ಲಿ ಬುಧವಾರ ಚರ್ಚ್ ಆವರಣದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.
ಈ ಸಂದರ್ಭ ಕೊಂಕಣಿ ಕವಿ, ಬರಹಗಾರ ವಿಲ್ಸನ್ ಕಟೀಲು ಅವರನ್ನು ಸನ್ಮಾನಿಸಲಾಯಿತು..
ಕಟೀಲು ಸಂತ ಜಾಕೋಬರ ಚರ್ಚ್ ಧರ್ಮಗುರು ರೊನಾಲ್ಡ್ ಕುಟಿನ್ಹೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲೈನಲ್ ಲೋಬೊ, ಕಾರ್ಯದರ್ಶಿ ಆಂಡ್ರ್ಯೂ ಮಿಸ್ಕಿತ್, ವೀಡಾ ಮರಿಯಾ, ಮತ್ತಿತರರು ಉಪಸ್ಥಿತರಿದ್ದರು.
ಅಲೆಕ್ಸ್ ತಾವ್ರೊ ಸ್ವಾಗತಿಸಿ, ಶಾಂತಿ ಸಲ್ಡಾನ್ಹಾ ವಂದಿಸಿದರು. ಹೆಲೆನ್ ತಾವ್ರೊ ಕಾರ್ಯಕ್ರಮ ನಿರೂಪಿಸಿದರು.

Kinnigoli 27121301 Kinnigoli 27121302

Comments

comments

Comments are closed.

Read previous post:
Kinnigoli 27121303
ಯೇಸು ಕ್ರಿಸ್ತ ಶಾಂತಿ, ಸೌಹಾರ್ದ ಹಾಗೂ ಏಕತೆಯ ಹರಿಕಾರ

 ಕಿನ್ನಿಗೋಳಿ : ಶಾಂತಿ, ಸೌಹಾರ್ದ ಹಾಗೂ ಏಕತೆಯ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬವನ್ನು ವಿಶ್ವಕ್ಕೆ ಪಸರಿಸಿದ ಯೇಸು ದೇವರು ಪ್ರತಿಯೊಬ್ಬರ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ದಾಮಸ್ಕಟ್ಟೆ...

Close