ಪ್ರೀತಿ, ಶಾಂತಿ ಭರಿತ ಸಮಾಜ ಕಟ್ಟಬೇಕು.

ಕಿನ್ನಿಗೋಳಿ: ಪ್ರತಿಯೊಬ್ಬರೂ ನಿಸ್ವಾರ್ಥ ಪ್ರೀತಿಯ ಪ್ರತಿನಿಧಿಗಳಾಗಿ ಸಮಾಜದ ಇತರರಿಗೂ ಕಲಿಸುವ ಮೂಲಕ ಪ್ರೀತಿ, ಶಾಂತಿ ಭರಿತ ಸಮಾಜವನ್ನು ಕಟ್ಟಬೇಕು. ಪ್ರೀತಿ ಮತ್ತು ತ್ಯಾಗದಿಂದ ವೈಯುಕ್ತಿಕವಾಗಿ ತಾನು ಉದ್ಧಾರವಾಗುವುದು ಮಾತ್ರವಲ್ಲದೆ, ಸಮಾಜವನ್ನು ಉದ್ಧರಿಸಬಹುದು ಎಂದು ಕಿನ್ನಿಗೋಳಿ ಚರ್ಚ್ ಧರ್ಮ ಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ ಹೇಳಿದರು
ಕಿನ್ನಿಗೋಳಿ ಚರ್ಚ್ ಹಾಗೂ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಕಿನ್ನಿಗೋಳಿ ಘಟಕದ ಜಂಟೀ ಆಶ್ರಯದಲ್ಲಿ ಬುಧವಾರ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮಂಟಪದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಚಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ವಲೇರಿಯನ್ ಸಿಕ್ವೇರಾ, ಹೆನ್ರಿ ಮಥಾಯಸ್, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉಪನ್ಯಾಸಕಿ ಫಮೀದಾ ಬೇಗಂ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ, ಕಿನ್ನಿಗೋಳಿ ಕೆಥೊಲಿಕ್ ಯುವ ಸಂಚಾಲನದ ಅಧ್ಯಕ್ಷ ಲಾಯ್ಡ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli 27121304
ಐಕಳ : ಕ್ರಿಸ್ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ : ಉದಾತ್ತ, ವಿಶ್ವ ಭಾತೃತ್ವ ಸಂದೇಶ ನೀಡಿದ ಮಹಾನ್ ಸಂತ, ದೈವಿ ಪುರುಷ ಯೇಸು ಕ್ರಿಸ್ತರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು...

Close