ವಿದ್ಯಾ ಸಾಧನೆ ದೇಶದ ಅಭಿವೃದ್ಧಿಗೆ ಪೂರಕ

ಕಿನ್ನಿಗೋಳಿ: ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಸಲ್ಲದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ವಿದ್ಯಾ ಸಾಧನೆ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಪೂರಕ. ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಶುಕ್ರವಾರ ಪುನರೂರು ಭಾರತಮಾತಾ ಹಿರಿಯ ಹಾಗೂ ಪ್ರೌಢಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಘುರಾಮ್ ಪುನರೂರು, ಮಾಧವ ಬಂಗೇರ, ಉದ್ಯಮಿ ಸುರೇಶ್ ರಾವ್, ಶಾಲಾ ಪೋಷಕ ಸಮಿತಿಯ ವಿಮಲ ಬಂಗೇರ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸಿಲಿಯಾ ಕ್ಯಾಸ್ತಲಿನೊ ಶಾಲಾ ವರದಿ ವಾಚಿಸಿದರು. ಶಾಲಾ ಸಂಚಾಲಕ ವಿನೋಭನಾಥ್ ಐಕಳ ಪ್ರಸ್ತಾವನೆಗೈದರು. ಕೃಷ್ಣಮೂರ್ತಿ ರಾವ್ ಸ್ವಾಗತಿಸಿದರು. ಪೂರಪ್ಪ ಚೌಹಣ್ ಕಾರ್ಯಕ್ರಮ ನಿರೂಪಿಸಿದರು.

Kinnigoli 28121301

Comments

comments

Comments are closed.

Read previous post:
ಪ್ರೀತಿ, ಶಾಂತಿ ಭರಿತ ಸಮಾಜ ಕಟ್ಟಬೇಕು.

ಕಿನ್ನಿಗೋಳಿ: ಪ್ರತಿಯೊಬ್ಬರೂ ನಿಸ್ವಾರ್ಥ ಪ್ರೀತಿಯ ಪ್ರತಿನಿಧಿಗಳಾಗಿ ಸಮಾಜದ ಇತರರಿಗೂ ಕಲಿಸುವ ಮೂಲಕ ಪ್ರೀತಿ, ಶಾಂತಿ ಭರಿತ ಸಮಾಜವನ್ನು ಕಟ್ಟಬೇಕು. ಪ್ರೀತಿ ಮತ್ತು ತ್ಯಾಗದಿಂದ ವೈಯುಕ್ತಿಕವಾಗಿ ತಾನು ಉದ್ಧಾರವಾಗುವುದು ಮಾತ್ರವಲ್ಲದೆ,...

Close