ಶಿಸ್ತು ಸಂಸ್ಕಾರದ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು

ಕಿನ್ನಿಗೋಳಿ : ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಸ್ತು ಸಂಸ್ಕಾರದ ಮೌಲ್ಯಾಧಾರಿತಭರಿತ ಹಾಗೂ ಮಕ್ಕಳ ಆಸಕ್ತಿ ಅರಿತು ಸೂಕ್ತ ಶಿಕ್ಷಣ ನೀಡುವುದು ಹೆತ್ತವರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ ಎಂದು ಶಾರದ ಸೊಸೈಟಿ ಕಾರ್ಯದರ್ಶಿ ಧರ್ಮಾನಂದ ಕೆ.ಕುಂದರ್ ಹೇಳಿದರು.
ಶನಿವಾರ ಶಿಮಂತೂರು ಶ್ರೀ ಶಾರದ ಪ್ರಾಥಮಿಕ, ಫ್ರೌಢಶಾಲೆ ಆಂಗ್ಲ ಮಾಧ್ಯಮ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಮಂತೂರು ಶಾರದ ಸೊಸೈಟಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೋಶಾಧಿಕಾರಿ ಭುವನಾಭಿರಾಮ ಉಡುಪ, ನಿರ್ದೇಶಕ ಪುರಂದರ ಡಿ. ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯೆ ವನಿತ ಅಮೀನ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದ ವಸಂತ್, ಪದ್ಮನೂರು ಸಿ.ಆರ್.ಪಿ ಜಗದೀಶ ನಾವಡ, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷೆ ಹೇಮಲತಾ ಬಿ. ಅಮೀನ್, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ. ಜಿ. ಶಿವರುದ್ರಪ್ಪ, ಫ್ರೌಢ ಶಾಲಾ ಮುಖ್ಯ ಶಿಕ್ಷಕ ಪ್ರಥ್ವೀಶ್ ಎಸ್. ಕರಿಕೆ. ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸುಚಿತ್ರಾ ಉಪಸ್ಥಿತರಿದ್ದರು. ಶಿಕ್ಷಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli 28121302

Comments

comments

Comments are closed.

Read previous post:
Kinnigoli 28121301
ವಿದ್ಯಾ ಸಾಧನೆ ದೇಶದ ಅಭಿವೃದ್ಧಿಗೆ ಪೂರಕ

ಕಿನ್ನಿಗೋಳಿ: ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಸಲ್ಲದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ವಿದ್ಯಾ ಸಾಧನೆ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಪೂರಕ. ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ...

Close