ಎನ್.ಸಿ.ಸಿ ವಾರ್ಷಿಕ ಶಿಬಿರ

ಕಿನ್ನಿಗೋಳಿ: 5ನೇ ಕರ್ನಾಟಕ ನೇವಲ್ ವಿಂಗ್‌ನ ವತಿಯಿಂದ 10 ದಿನಗಳ ವಾರ್ಷಿಕ ಎನ್.ಸಿ.ಸಿ ಶಿಬಿರ ಕಿನ್ನಿಗೋಳಿ ಸಮೀಪದ ಪೊಂಪೈ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಡಿಸೆಂಬರ್ 31ರ ತನಕ ಹಮ್ಮಿಕೊಳ್ಳಲಾಗಿದೆ.
ಶಿಸ್ತುಬದ್ಧ, ಸಾಮರ್ಥ್ಯವುಳ್ಳ ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಉಪಯುಕ್ತವಾಗುವ ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳ 540 ಫ್ರೌಢಶಾಲೆ, 34 ಕಾಲೇಜು ಹಾಗೂ 11 ಕಾಲೇಜು ಹುಡುಗಿಯರು ಒಟ್ಟು 600 ಕೆಡೆಟ್‌ಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 15 ಎನ್.ಐ.ಟಿ.ಕೆ. ಇಂಜೀನಿಯರಿಂಗ್ ಕಾಲೇಜು ಕೆಡೆಟ್ ಗಳು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಕ್ಕಳಿಂದಲೇ ತರಬೇತಿ ನೀಡುತ್ತಿರುವುದು ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಐಕಳ ಪೊಂಪೈ ಕಾಲೇಜಿನ ಉಪನ್ಯಾಸಕ ಹಾಗೂ ಶಿಬಿರದ ಅಸಿಸ್ಟೆಂಟ್ ಕಮಾಂಡೆಂಟ್ ಸಬ್ ಲೆಪ್ಟಿನೆಂಟ್ ಪುರುಷೋತ್ತಮ ಕೆ. ವಿ ಹೇಳುತ್ತಾರೆ.

ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಅವರಿಗೆ ವಿವಿಧ ಧೈಹಿಕ ಸಾಮರ್ಥ್ಯ ಸ್ಪರ್ಧೆಗಳು, ಫೈರಿಂಗ್, ಮ್ಯಾಪ್ ರೀಡಿಂಗ್, ಪ್ರೋತ್ಸಾಹಕರ ಉಪನ್ಯಾಸಗಳು, ಟ್ರಾಫಿಕ್ ನಿಯಮಗಳು, ಪ್ರಕೃತಿ ವಿಕೋಪ ನಿರ್ವಹಣೆ, ಗುಡ್ಡಗಾಡು ಓಟ, ವಿವಿಧ ಕ್ರೀಡಾ ಸ್ಪರ್ಧೆ, ಚರ್ಚಾಸ್ಪರ್ಧೆ, ಆತ್ಮವಿಶ್ವಾಸದ ಜೀವನ ರೂಪಿಸಿಕೊಳ್ಳುವ ಅವಶ್ಯಕ ಮಾಹಿತಿ, ಆರೋಗ್ಯದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಳ ಫ್ರೌಢ ಶಾಲಾ ಶಿಕ್ಷಕ ಪಸ್ಟ್ ಆಫೀಸರ್ ಸಾಯಿನಾಥ ಶೆಟ್ಟಿ ಮಾಹಿತಿ ನೀಡುತ್ತಾರೆ.

ಪ್ರತಿ ದಿನ ಸಂಜೆ ವಿದ್ಯಾರ್ಥಿಗಳಿಂದ ಸಾಮೂಹಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಶಿಬಿರಾರ್ಥಿಗಳಲ್ಲಿ ಒಗ್ಗಟ್ಟು ವ್ಯಕ್ತಿತ್ವ ವಿಕಸನ ನಾಯಕತ್ವ ಶಿಸ್ತು ಪರಿಪಾಲನೆ ಬೆಳೆಯುತ್ತದೆ. ದೇಶದ ಬಗ್ಗೆ ಪರಿಕಲ್ಪನೆ ಹಾಗೂ ಭವಿಷ್ಯದ ಉತ್ತಮ ಪ್ರಜೆ, ಸೈನಿಕನನ್ನಾಗಿಸುವ ಪ್ರಯತ್ನ ಈ ಶಿಬಿರದಿಂದಾಗಲಿದೆ ಎಂದು ಪೊಂಪೈ ಫ್ರೌಢ ಶಾಲಾ ಶಿಕ್ಷಕ ಪಸ್ಟ್ ಆಫೀಸರ್ ಲಕ್ಷ್ಮೀಶ ಎನ್, ಶಾಸ್ತ್ರಿಯವರ ಅಭಿಮತ.
ಕಟೀಲು ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜಿನಲ್ಲಿ ರೈಫಲ್‌ಗಳ ಬಗ್ಗೆ ಸವಿಸ್ರಾರ ಮಾಹಿತಿ ಫಯರಿಂಗ್ ತರಬೇತಿ, ಪೋಲೀಸ್ ಕಾರ್ಯ ವೈಖರಿಗಳು ರಸ್ತೆ ಸುರಕ್ಷತಾ ನಿಯಮಗಳು, ಪ್ರಾಥಮಿಕ ಚಿಕಿತ್ಸೆ ಹಾಗೂ ಅವಘಡದ ಸಂದರ್ಭದಲ್ಲಿ ಮಾಡಬೇಕಾದ ರಕ್ಷಣಾ ಕಾರ್ಯಗಳು ಹಾಗೂ ಎತ್ತರದ ಕಟ್ಟಡದಿಂದ ಗಾಯಾಳುಗಳನ್ನು ರಕ್ಷಿಸುವ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಎನ್.ಸಿ.ಸಿ.ಯ ಶಿಸ್ತು ಬದ್ದ ಜೀವನದಲ್ಲಿ ಮೈಗೂಡಿತು. ಕವಾಯತು ರೈಫಲ್‌ಗಳ ಬಗ್ಗೆ ಅರಿವು, ಗುರಿ ಹಿಡಿಯುವಿಕೆ ಮತ್ತು ಫಯರಿಂಗ್, ಫಯರ್ ಕಂಟ್ರೋಲ್ ಹಾಗೂ ಸಮಯ ಪಾಲನೆ, ಸ್ವಚ್ಚತೆ ಬಗ್ಗೆ ನಿಗಾವಹಿಸುವುದು ಈ ಶಿಬಿರದಿಂದ ದೊರಕಿದೆ
ತರಬೇತಿ ಪಡೆದ ವಿದ್ಯಾರ್ಥಿಗಳು

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಯಂ ಶಿಸ್ತು, ಆರೋಗ್ಯ ರಕ್ಷಣೆ ಮೊದಲಾದ ಜೀವನ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಬೆಳಗ್ಗೆ 5ರಿಂದ ರಾತ್ರಿ 9 ರವರೆಗೆ ನಿರಂತರವಾಗಿ ವಿದ್ಯಾರ್ಥಿಗಳಿಗೆ ವ್ಯಾಯಾಮ, ವೇಗದ ನಡಿಗೆ, ಓಟ, ಮ್ಯಾಪ್ ರೀಡಿಂಗ್, ಡ್ರಿಲ್, ಬಂದೂಕು ಹಿಡಿದು ಗುರಿ ಸಾಧಿಸುವ ಬಗೆಗಳನ್ನು ಹೇಳಿಕೊಡಲಾಗುವುದು. ವಿದ್ಯಾರ್ಥಿಗಳು ಪ್ರತಿದಿನವೂ ನವೋತ್ಸಾಹದೊಂದಿಗೆ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಮಾಂಡರ್ ಎನ್. ರಾಮಚಂದ್ರನ್
ಶಿಬಿರದ ಕ್ಯಾಂಪ್ ಕಮಾಂಡೆಂಟ್

Kinnigoli 30121302

Kinnigoli 30121303 Kinnigoli 30121304 Kinnigoli 30121305

Comments

comments

Comments are closed.

Read previous post:
Kinnigoli 30121301
ಏಳಿಂಜೆ ಶ್ರಮದಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರಿ ಲಕ್ಷ್ಮೀಜನಾರ್ಧನ ಮಹಾಗಣಪತಿ ದೇವಳದಲ್ಲಿ 2014 ಫೆಬ್ರವರಿ 18 ಅಂಗಾರಿಕಾ ಸಂಕಷ್ಟಿಯಂದು ನಡೆಯುವ 1008 ಕಾಯಿ ಗಣ ಹೋಮ ಲಕ್ಷ ಮೋದಕ...

Close