ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ ಹಲ್ಲೆಗೆ ಯತ್ನ

ಮೂಲ್ಕಿ :  ಮೂಲ್ಕಿ; ಮೂಲ್ಕಿ ಹೆದ್ದಾರಿಯಿಂದ ಕಾರ್ನಾಡು ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ಚರಂತಿಪೇಟೆಯ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು ಸ್ಥಳೀಯ ಪಂಚಾಯಿತಿ ಹಾಗೂ ಕ್ಷೇತ್ರದ ಜನಪ್ರತಿನಿಧಿಗಳ ನಿರ್ಲಕ್ಷವನ್ನು ವಿರೋಧಿಸಿ ಸ್ಥಳೀಯ ನಾಗರಿಕರು ರಸ್ತೆ ಬಂದ್ ಮಾಡಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಸಂಧರ್ಭ ಸಚಿವ ಅಭಯಚಂದ್ರರಿಗೆ ಘೇರಾವ್ ನಡೆಸಿದಾಗ ಮಾತಿಗೆ ಮಾತು ಬೆಳೆದು ರಿಕ್ಷಾ ಚಾಲಕರೋರ್ವರಿಗೆ ಸಚಿವರು ಹಲ್ಲೆಗೆ ಯತ್ನ ನಡೆಸಿದ ಘಟನೆ ನಡೆದಿದೆ.

ಸ್ಥಳೀಯ ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಯನ್ನು ನಾಗರಿಕರ ನೆಲೆಯಲ್ಲಿ ವಿರೋಧಿಸಿ ಕಳೆದ ಹಲವಾರು ವರ್ಷಗಳಿಂದ ಚರಂತಿ ಪೇಟೆಯ ರಸ್ತೆಯು ಮೂಡಬಿದಿರೆ, ಕಿನ್ನಿಗೋಳಿ ಪ್ರದೇಶಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದ ಅದರಲ್ಲೂ ವಿಶೇಷವಾಗಿ ಕಟೀಲು ಪುಣ್ಯ ಕ್ಷೇತ್ರ, ಹೆದ್ದಾರಿ 66ರ ಸಂಪರ್ಕ ಹಾಗೂ ಸರ್ಕಾರಿ ಆಸ್ಪತ್ರೆ, ಕಾರ್ನಾಡು ಪೇಟೆಗೆ ಸಾಗುವ ಪ್ರಧಾನ ರಸ್ತೆಯನ್ನು ಜನರು ಅವಲಂಬಿಸಿದ್ದು ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ಕೂಡಿದೆ ಅಲ್ಲದೆ ಇನ್ನಿತರ ರಸ್ತೆಗಳನ್ನು ಸಹ ದುರಸ್ಥಿ ಮಾಡಬೇಕೆಂದು ರಿಕ್ಷಾ, ಕಾರು, ಟೆಂಪೋ ಚಾಲಕರು, ಸಂಘ ಸಂಸ್ಥೆಗಳ ಪ್ರಮುಖರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಸಚಿವರು ಬಂದು ಮನವಿಯನ್ನು ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದಾಗ ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರೂ ಪ್ರತಿಭಟನೆಗೆ ಸ್ಪಂದಿಸದೆ ನೇರವಾಗಿ ಪಂಚಾಯಿತಿ ಕಚೇರಿಗೆ ತೆರಳುವ ಹಂತದಲ್ಲಿ ಕಾರ್ನಾಡು ತಲುಪಿದಾಗ ಸಚಿವರು ಮೂಲ್ಕಿ ನಾಡಕಚೇರಿಗೆ ಒಳರಸ್ತೆಯಲ್ಲಿ ತೆರಳಿದ್ದು ಆಕ್ರೋಶಕ್ಕೆ ಕಾರಣವಾಯಿತು. ಮತ್ತೆ ನೇರವಾಗಿ ನಾಡಕಚೇರಿಗೆ ತೆರಳುವ ಎಂದು ಹಿಂದುರುಗಿದ ನಾಗರಿಕರಿಗೆ ಮೂಲ್ಕಿ ಬಿಲ್ಲವ ಸಂಘದ ಹತ್ತಿರ ಸಚಿವರು ಮುಖಾಮುಖಿಯಾದರು ಇಲ್ಲಿ ಸಚಿವರನ್ನು ಘೇರಾವ್ ನಡೆಸಿದಾಗ ಸಚಿವರೊಂದಿಗೆ ಇದ್ದ ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಸದಾಶಿವ ಸಾಲ್ಯಾನ್ ಇನ್ನಿತರ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಪರಸ್ಪರ ಮಾತಿನ ಚಕಮಕಿ ನಡೆದು ಕೆಲವರು ಈ ಸಂದರ್ಭ ಸಚಿವರಿಗೆ ಜೈಕಾರ ಕೂಗಿದರೆ ವಿರೋಧಿಗಳು ಧಿಕ್ಕಾರ ಕೂಗತೊಡಗಿದರು ಆಗ ರೊಚ್ಚಿಗೆದ್ದ ಸಚಿವರು ನೇರವಾಗಿ ಪ್ರತಿಭಟನೆಯಲ್ಲಿದ್ದ ರಿಕ್ಷಾ ಚಾಲಕರೊರ್ವರಿಗೆ ಹಲ್ಲೆ ಮಾಡಲು ಮುಂದಾದಾಗ ತಕ್ಷಣ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಧು ಆಚಾರ್ಯ, ಹರೀಶ್ ಪುತ್ರನ್, ಹರ್ಷರಾಜ್ ಶೆಟ್ಟಿ ಇನ್ನಿತರರು ಸಮಾಧಾನಿಸಿ ಕಾರಿನಲ್ಲಿ ಸಚಿವರನ್ನು ಕಳುಹಿಸಿದರು. ಸಚಿವರ ಪರವಾಗಿ ಕಾಂಗ್ರೇಸ್ ಪಕ್ಷದವರು ವಾದಕ್ಕಿಳಿದು ಸಂಸದ ನಳಿನ್‌ಕುಮಾರ್ ಕಟೀಲ್‌ರ ವಿರುದ್ಧ ಪ್ರತಿಭಟಿಸಿ ಎಂದು ಹೇಳಿದ್ದು ಸಹ ಪ್ರತಿಭಟನೆಯಲ್ಲಿ ಸೇರಿದ್ದ ಬಿಜೆಪಿಗರನ್ನು ಕೆರಳಿಸಿದ್ದು ಮತ್ತೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವವರೆಗೆ ಹೋದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಸಮಾಧಾನಿಸಿದರು. ಈ ಬಗ್ಗೆ ಮೂಲ್ಕಿ ರಿಕ್ಷಾ ಚಾಲಕ ಮಾಲಕರ ಯೂನಿಯನ್‌ನ ಅಧ್ಯಕ್ಷ ಬಿಪಿನ್ ಪ್ರಸಾದ್ ಪ್ರತಿಕ್ರಿಯಿಸಿ ಸಚಿವರು ಹಾಗೂ ಅವರ ಬೆಂಬಲಿಗರು ರಿಕ್ಷಾ ಚಾಲಕರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿರುವುದು ಖಂಡನೀಯ ಜನರ ಬೇಡಿಕೆಗೆ ಸ್ಪಂದಿಸಬೇಕಾಗಿತ್ತು ಈ ಬಗ್ಗೆ ರಿಕ್ಷಾ ಚಾಲಕರ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ನಾಯಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಪತ್ರಿಕೆಗೆ ಪ್ರತಿಕ್ರಿಯಿಸಿ ಸಚಿವರನ್ನು ಘೇರಾವ್‌ಗೊಳಿಸಿ ಅವರ ವಿರುದ್ಧ ಘೋಷಣೆ ಕೂಗಿರುವುದು ಸರಿಯಲ್ಲ ಮಾತಿನ ಚಕಮಕಿ ನಡೆದಾಗ ಸಮಾಧಾನಿಸಬೇಕಾಗಿತ್ತು ಕಾಂಗ್ರೇಸ್ಸಿನ ಕೆಲವು ನಾಯಕರ ಅಸಭ್ಯವರ್ತನೆಯಿಂದ ಈ ಘಟನೆ ನಡೆದಿದೆ ಎಂದರು. ಮೂಲ್ಕಿ ನಾಗರಿಕ ವೇದಿಕೆಯ ಸುನಿಲ್ ಆಳ್ವಾ, ಬಿಜೆಪಿಯ ಉಮೇಶ್ ಮಾನಂಪಾಡಿ, ನವೀನ್ ಬಪ್ಪನಾಡು, ಸತೀಶ್ ಅಂಚನ್ ರಿಕ್ಷಾ ಚಾಲಕನ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ.

Kinnigoli 30121307 Kinnigoli 30121308 Kinnigoli 30121309 Kinnigoli 30121310 Kinnigoli 30121311 Kinnigoli 30121312 Kinnigoli 30121313

Comments

comments

Comments are closed.

Read previous post:
Kinnigoli 30121306
ರಿಕ್ಷಾ ಅಪಘಾತ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಕೊಯಿಕುಡೆಯಲ್ಲಿ ಪಕ್ಷಿಕೆರೆಯಿಂದ ಹಳೆಯಂಗಡಿ ಕಡೆಗೆ ಹೋಗುವ ರಿಕ್ಷಾ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಭಾನುವಾರ...

Close