ಮೂಲ್ಕಿ : ಬಿಲ್ಲವ ಸಂಗಮ-2013 ಕ್ರೀಡೋತ್ಸವ

Bhayavan Sanil
ಮೂಲ್ಕಿ: ಗ್ರಾಮೀಣ ವಿದ್ಯಾರ್ಥಿಗಳು ಯಾವುದೇ ಡೊನೇಷನ್ ರಹಿತವಾಗಿ ಆಂಗ್ಲ ಮಾದ್ಯಮದಲ್ಲಿ ಕಲಿತು ಪಟ್ಟಣದ ಮಕ್ಕಳಿಗೆ ಸರಿಸಾಟಿಯಾಗುವಂತೆ ಮೂಲ್ಕಿಯಲ್ಲಿ ಶಾಲೆ ಸ್ಥಾಪಿಸಿ ಮೂಲ್ಕಿ ಜನರ ಸಂಘಟನೆಗಾಗಿ ಸಂಘವನ್ನು ಉತ್ತುಂಗಕ್ಕೇರಿಸುವ ಕಾರ್ಯಗಳನ್ನು ರುಕ್ಕರಾಮ ಸಾಲ್ಯಾನ್ ರವರು ಸ್ಥಾಪಿಸಿ ಬೆಳೆಯುವಂತೆ ಮಾಡಿದ್ದಾರೆ
ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಯ್ಯೋಟ್ಟು ಸದಾಶಿವ ಸಾಲ್ಯಾನ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಿಲ್ಲವ ಸಂಗಮ-2013 ಪ್ರಯುಕ್ತ ಭಾನುವಾರ ನಡೆದ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಕ್ರಿಡಾ ಜ್ಯೋತಿ ಬೆಳಗಿಸಿದ ಅಂತರಾಷ್ಟ್ರೀಯ ಕ್ರೀಡಾಪಟು ನಾಗೇಶ್ ಪ್ರಸಾದ್ ಮಾತನಾಡಿ ಗ್ರಾಮೀಣ ಪ್ರದೇಶ ಮೂಲ್ಕಿ ಬಿಲ್ಲವ ಸಂಘದಲ್ಲಿ ವ್ಯಾಯಾಮ ಶಾಲೆ ಸ್ಥಾಪಿಸಿ ಬಡ ಕ್ರೀಡಾರ್ಥಿಗಳಿಗೆ ಕ್ರೀಡೆಗೆ ಉತ್ತಮ ಅವಕಾಶ ಕಲ್ಪಿಸಿ ಈ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತಾಗಿದೆ ಯುವಕರು ಇನ್ನೂ ಹೆಚ್ಚಿನ ಸಾಧನೆಯೊಂದಿಗೆ ಮುಂದೆ ಬರಬೇಕು ಎಂದರು. ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ನಾಗೇಶ್ ಪ್ರಸಾದ್‌ರವರನ್ನು ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆಯನ್ನು ಮೂಲ್ಕಿ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್ ವಹಿಸಿದ್ದರು.
ಸಂಘದ ಗೌ.ಪ್ರಧಾನ ಕಾರ್ಯದರ್ಶಿ ಗೋಪೀನಾಥ ಪಡಂಗ, ಕೋಶಾಧಿಕಾರಿ ಉದಯ ಅಮೀನ್ ಮಟ್ಟು,ಉದ್ಯಮಿ ಲೋಕನಾಥ,ರವಿ ಪೂಜಾರಿ ಸೂರಿಂಜೆ,ಕೆ.ಎಸ್.ರಾವ್ ನಗರ ಬಿಲ್ಲವ ಸಂಘದ ಅಧ್ಯಕ್ಷ ರಾಘವ ಸುವರ್ಣ,ಮಟ್ಟು ಸಂಘದ ಅಧ್ಯಕ್ಷ ಸದಾನಂದ ಸುವರ್ಣ,ಚಿತ್ರಾಪು ಬಾಲಲೀಲಾ ಭಜನಾ ಮಂದಿರದ ಅಧ್ಯಕ್ಷ ಯೋಗೀಶ್ ಕೋಟ್ಯಾನ್,ಸೇವಾದಳದ ಅಧ್ಯಕ್ಷ ಮೋಹನ್ ಕೋಟ್ಯಾನ್ ,ಮಹಿಳಾ ಮಂಡಳದ ಗೌ ಅದ್ಯಕ್ಷೆ ಸರೋಜಿನಿ ಸುವರ್ಣ, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಪ್ರಕಾಶ್ ಸುವರ್ಣ,ಬಾರತ್ ಬ್ಯಾಂಕ್ ನಿರ್ದೇಶಕ ಸಿ.ಟಿ.ಸಾಲ್ಯಾನ್,ನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ಎಚ್.ವಿ.ಕೋಟ್ಯಾನ್,ಕ್ರೀಡಾ ಸಂಚಾಲಕ ವಾಸು ಪೂಜಾರಿ ಮತ್ತಿತರರು ಅತಿಥಿಗಳಾಗಿದ್ದರು.
ಯದೀಶ್ ಅಮೀನ್ ಸ್ವಾಗತಿಸಿದರು,ನರೇಂದ್ರ ಕೆರೆಕಾಡು ನಿರೂಪಿಸಿದರು. ಗೋಪೀನಾಥ ಪಡಂಗ ವಂದಿಸಿದರು.

Kinnigoli 31121302

 

Comments

comments

Comments are closed.