ಬಿಜೆಪಿ, ಜೆಡಿಎಸ್ ಪ್ರಾಯೋಜಿತ ಪ್ರತಿಭಟನೆಯ ನಾಟಕ

ಮುಲ್ಕಿ; ಕಾಂಗ್ರೇಸ್ ಪಕ್ಷವನ್ನು ಧಮನಿಸಲು ಹಾಗೂ ಸಚಿವ ಅಭಯಚಂದ್ರ ಜೈನ್‌ರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡಿಸಲು ಮೂಲ್ಕಿ ನಾಗರಿಕರು ಎಂಬ ನಕಲಿ ಹೆಸರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ರಹಸ್ಯ ಅಜೆಂಡಾದಿಂದ ಪ್ರತಿಭಟನೆಯ ನಾಟಕ ನಡೆದಿದ್ದು ಇದರಲ್ಲಿ ಮೂಲ್ಕಿ ರಿಕ್ಷಾ ಯೂನಿಯನ್‌ನ ಅಧ್ಯಕ್ಷರು ಸಹ ನೇರ ಹೊಣೆಗಾರರು ಎಂದು ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್ ಹೇಳಿದರು.
ಮುಲ್ಕಿಯಲ್ಲಿ ಸೋಮವಾರ ನಡೆದ ಘಟನೆಯ ಬಗ್ಗೆ ಮಂಗಳವಾರ ಸಂಜೆ ಸ್ಪಷ್ಟನೆಯನ್ನು ನೀಡುತ್ತಾ ಮಾತನಾಡಿ ಮೂಲ್ಕಿಯ ಬಡ ರಿಕ್ಷಾ ಚಾಲಕರನ್ನು ಬಲಿಪಶು ಮಾಡಿದ ಯೂನಿಯನ್ ಅಧ್ಯಕ್ಷರು ಸ್ವಯಂ ಘೋಷಿತರಾಗಿ ಯೂನಿಯನ್‌ನ್ನು ದುರ್ಬಳಕೆ ಮಾಡಿಕೊಂಡಿದ್ದು ತಾನು ಗೌರವ ಅಧ್ಯಕ್ಷನಾಗಿದ್ದರು ತನಗೆ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡದೆ ಗೊಂದಲಕ್ಕೆ ಕಾರಣರಾಗಿದ್ದರಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದರು.
ಕಾಂಗ್ರೇಸ್ಸಿನ ಮುನೀರ್ ಕಾರ್ನಾಡು ಮಾತನಾಡಿ ರಿಕ್ಷಾ ಯೂನಿಯನ್ ಅಧ್ಯಕ್ಷ ಘಟನೆ ನಡೆದ ಸಂಜೆ ಮೂಲ್ಕಿ ಲಲಿತ್ ಮಹಲ್‌ನಲ್ಲಿ ಬಿಜೆಪಿಯೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದಾರೆ. ಇದರಿಂದ ಯೂನಿಯನ್ ಈಗ ಎರಡು ಹೋಳಾಗಲಿದೆ ಎಂದರು.
ಸಚಿವರಿಗೆ ಧಿಕ್ಕಾರ ಕೂಗಿ ಅವಮಾನಿಸಿದ್ದರಿಂದ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯರ್ತರ ನೆಲೆಯಲ್ಲಿ ನಾವು ಪ್ರತ್ಯುತ್ತರ ನೀಡಿದ್ದೇವೆ ಹೊರತು ಇದರಲ್ಲಿ ನಮ್ಮ ರಾಜಕೀಯವಿಲ್ಲ, ಸೋಮವಾರ ನಾಲ್ಕು ದಶಕದ ಹೋರಾಟದ ಫಲವಾಗಿ ಮೂಲ್ಕಿಗೆ ವಿಶೇಷ ತಹಶೀಲ್ದಾರರ ನೇಮಕದ ದಿನವನ್ನು ಸಂಭ್ರಮಿಸುವ ಬದಲು ಪ್ರತಿಭಟನೆ ನಡೆಸಿದ್ದು ತೀವ್ರ ದುರದೃಷ್ಟಕರ ಎಂದು ಬಿ.ಎಂ.ಆಸಿಫ್ ಹೇಳಿದರು.
ಧನಂಜಯ ಕೋಟ್ಯಾನ್ ಮಾತನಾಡಿ ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೂ ಶಾಮೀಲಾಗಿದ್ದು, ಅವರ ವಿರುದ್ಧವು ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದು, ಅಮಾಯಕ ರಿಕ್ಷಾ ಚಾಲಕರನ್ನು ಬಲಿಪಶು ಮಾಡಿದ್ದಾರಲ್ಲದೇ ಪೊಲೀಸ್ ಠಾಣೆಯಲ್ಲಿ ನಾಗರಿಕ ವೇದಿಕೆ ಎಂಬ ನಕಲಿ ಪತ್ರದೊಂದಿಗೆ ಹರ್ಷರಾಜ್ ಶೆಟ್ಟಿಯವರ ಹೆಸರಿನಲ್ಲಿ ಅನುಮತಿ ಪಡೆಯಲಾಗಿದೆ ವೇದಿಕೆಯಲ್ಲಿ ನಾವು ಸದಸ್ಯರಾಗಿದ್ದು ನಮಗೂ ತಿಳಿದಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಏಕಾಏಕಿ ಕಾಂಗ್ರೇಸ್ಸಿನ ಸ್ವಯಂ ಘೋಷಿತ ನಾಯಕ ಬಾಲಾದಿತ್ಯ ಆಳ್ವಾರವರು ಈ ಗಲಭೆಗೆ ಮಾದ್ಯಮವರು ಘಟನೆಯ ಮೊದಲೇ ಬಂದು ಚಿತ್ರೀಕರಣದಲ್ಲಿ ತೊಡಗಿದ್ದು ಆಶ್ಚರ್ಯ ತಂದಿದೆ ಅವರಿಗೂ ಈ ಗಲಾಟೆ ಆಗುತ್ತದೆ ಎಂಬ ಅರಿವು ಇತ್ತು ಎಂದು ಮಾಧ್ಯಮದವರ ಮೇಲೇಯ ಗೂಬೆ ಕೂರಿಸಲು ವಿಫಲಯತ್ನ ನಡೆದಾಗ ಸುದ್ದಿಗೋಷ್ಠಿಯಲ್ಲಿದ್ದ ಮಾದ್ಯಮವರೆಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿ ವಾದ ವಿವಾದ ಉಂಟಾಯಿತು. ಅಲ್ಲಿದ್ದ ಕಾಂಗ್ರೇಸ್ ನಾಯಕರೇ ಬಲಾದಿತ್ಯ ಆಳ್ವಾರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಆಳ್ವಾರ ದುಂಡಾವರ್ತನೆಗೆ ಕ್ಷಮೆಯಾಚಿಸಿದರು. ಪತ್ರಿಕಾಗೋಷ್ಠಿಯು ಚರ್ಚೆಗೆ ನಡೆದಂತೆ ಕಂಡು ಬಂದಿದ್ದು ಅದನ್ನು ಸಹ ಮಾದ್ಯಮದವರು ಖಂಡಿಸಿದರಲ್ಲದೇ ಕೊನೆಗೆ ಗೊಂದಲದಲ್ಲಿಯೇ ಗೋಷ್ಠಿಯನ್ನು ಮುಗಿಸಲಾಯಿತು.
ಎಂ.ಬಿ.ನೂರ್ ಮಹಮ್ಮದ್, ಗುಣಪಾಲ ಶೆಟ್ಟಿ, ವಸಂತ ಬೆರ್ನಾರ್ಡ್, ಗುರುರಾಜ್ ಪೂಜಾರಿ, ಶಾಲೆಟ್ ಪಿಂಟೋ, ಶಶಿಕಾಂತ ಶೆಟ್ಟಿ, ಜೊಸ್ಸಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು

Comments

comments

Comments are closed.

Read previous post:
OLYMPUS DIGITAL CAMERA
ಮುಲ್ಕಿ : ರಿಕ್ಷಾ ಸಂಚಾರ ಸ್ಥಗಿತ

ಮುಲ್ಕಿ; ಮುಲ್ಕಿ ಕಾರ್ನಾಡು ಚರಂತಿ ಪೇಟೆ ರಸ್ತೆಯ ಅವ್ಯವಸ್ಥೆಯ ವಿರುದ್ಧ ಸೋಮವಾರ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮೂಲ್ಕಿ ರಿಕ್ಷಾ ಚಾಲಕನಿಗೆ ಸಚಿವರು ಹಲ್ಲೆ ನಡೆಸಿದರು ಎಂದು ಆರೋಪಿಸಿ ಮಂಗಳವಾರ ಘಟನೆಯನ್ನು...

Close