ಮುಲ್ಕಿ : ರಿಕ್ಷಾ ಸಂಚಾರ ಸ್ಥಗಿತ

ಮುಲ್ಕಿ; ಮುಲ್ಕಿ ಕಾರ್ನಾಡು ಚರಂತಿ ಪೇಟೆ ರಸ್ತೆಯ ಅವ್ಯವಸ್ಥೆಯ ವಿರುದ್ಧ ಸೋಮವಾರ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮೂಲ್ಕಿ ರಿಕ್ಷಾ ಚಾಲಕನಿಗೆ ಸಚಿವರು ಹಲ್ಲೆ ನಡೆಸಿದರು ಎಂದು ಆರೋಪಿಸಿ ಮಂಗಳವಾರ ಘಟನೆಯನ್ನು ಖಂಡಿಸಿ ಮೂಲ್ಕಿ ಹೋಬಳಿಯ ಸುಮಾರು 600 ರಿಕ್ಷಾಗಳು ರಸ್ತೆಗೆ ಇಳಿಯದೇ ಹರತಾಳ ನಡೆಸಿದ್ದಾರೆ. ಈ ನಡುವೆ ಚರಂತಿಪೇಟೆ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭವಾಗಿದೆ.

ಮೂಲ್ಕಿ ನಾಗರಿಕ ಸಮಿತಿಯೊಂದಿಗೆ ರಿಕ್ಷಾ ಚಾಲಕರು, ಕಾರು ಇನ್ನಿತರ ವಾಹನದ ಚಾಲಕರು ಕಾರ್ನಾಡು ಚರಂತಿ ಪೇಟೆ ರಸ್ತೆಯ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ರಿಕ್ಷಾ ಚಾಲಕ ಪ್ರಶಾಂತ್ ಎಂಬುವರ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿದ್ದು ಈ ಬಗ್ಗೆ ಸಚಿವರು ಸಹಿತ ಕಾಂಗ್ರೇಸ್ ನಾಯಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟವನ್ನು ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಿಪಿನ್ ಪ್ರಸಾದ್ ಹೇಳಿದ್ದಾರೆ.
ಮೂಲ್ಕಿ, ಕಿನ್ನಿಗೋಳಿ, ಕೊಲ್ನಾಡು, ಹಳೆಯಂಗಡಿ, ಕಾರ್ನಾಡು, ಬಳ್ಕುಂಜೆ, ಕಟೀಲು, ಎಸ್.ಕೋಡಿ, ಕೆಂಚನಕೆರೆ, ಮೂರುಕಾವೇರಿ ಪ್ರದೇಶದಲ್ಲಿರುವ ರಿಕ್ಷಾ ನಿಲ್ದಾಣದ ರಿಕ್ಷಾಗಳು ರಸ್ತೆಗೆ ಇಳಿಯದೇ ಹರತಾಳ ನಡೆಸಿದ್ದು ಶಾಲಾ ಮಕ್ಕಳ ಸಹಿತ ಅನೇಕ ನಾಗರಿಕರು ನಿತ್ಯ ರಿಕ್ಷಾವನ್ನು ಅವಲಂಬಿಸುವವರು ತೀವ್ರ ಪರದಾಡಿದರು. ಸಹೋದ್ಯೋಗಿ ರಿಕ್ಷಾ ಚಾಲಕನ ಹಲ್ಲೆ ಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮೂಲ್ಕಿ ಹೋಬಳಿಯ ರಿಕ್ಷಾ ಚಾಲಕರು ಈ ಘಟನೆಯ ಬಗ್ಗೆ ತೀವ್ರ ಆಕ್ಷೇಪವನ್ನು ಸಹ ವ್ಯಕ್ತಪಡಿಸಿದ್ದಾರೆ.
ರಿಕ್ಷಾ ಚಾಲಕನ ವಿರುದ್ಧ ಹಲ್ಲೆ ನಡೆಸಿದ ಘಟನೆಗೆ ಮೂಲ್ಕಿಯ ಕಾರು, ಟೆಂಪೋ ಮಾಲಕರು ಸಹ ಬೆಂಬಲ ವ್ಯಕ್ತಪಡಿಸಿ ವಾಹನಗಳನ್ನು ರಸ್ತೆಗೆ ಇಳಿಸದೇ ಹರತಾಳ ನಡೆಸಿದರು. ಈ ವಿವಾದಕ್ಕೆ ಕಾರಣವಾದ ಮೂಲ್ಕಿ ಕಾರ್ನಾಡು ಚರಂತಿ ಪೇಟೆಯ ಸುಮಾರು 150  ಮೀಟರ್ ಉದ್ದದ ರಸ್ತೆಯ ಕಾಮಗಾರಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡಿದ್ದು ಡಾಮರೀಕರಣವನ್ನು ನಡೆಸಲಾಗುತ್ತಿದೆ.

OLYMPUS DIGITAL CAMERA

Comments

comments

Comments are closed.

Read previous post:
Kinnigoli 31121303
ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾ ಪೀಠ ವಾರ್ಷಿಕೋತ್ಸವ

Bhagyawan Sanil ಮೂಲ್ಕಿ: ಶಿಕ್ಷಣ ಕಾಶಿ ಎನಿಸಿಕೊಂಡ ಅವಿಭಜಿತ ದಕ್ಷಿಣಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮ ಸಂಸ್ಕಾರಯುಕ್ತ ಶಿಕ್ಷಣ ವ್ಯಾಸಮಹರ್ಷಿ ವಿದ್ಯಾಪೀಠದಿಂದ ಲಭ್ಯವಾಗತ್ತಿರುವುದು ಶ್ಲಾಘನೀಯ ಎಂದು ಸಂಸದ ನಳಿನ್...

Close