ಗಳಿಕೆಯ ಬಗ್ಗೆ ಸಂತೃಪ್ತಿ ಸಮಾಧಾನ ಲಭಿಸುತ್ತದೆ

Bhagyavan Sanil
ಮೂಲ್ಕಿ: ದೇವರಿಗೆ ಸಮರ್ಪಿಸುವ ಕೃತಜ್ಞತಾ ಭಾವದ ಕಾರ್ಯಗಳಿಂದ ಜೀವನದ ಸಾಧನೆ ಹಾಗೂ ಗಳಿಕೆಯ ಬಗ್ಗೆ ಸಂತೃಪ್ತಿ ಸಮಾಧಾನಗಳು ಲಭಿಸುತ್ತದೆ ಎಂದು ಕಾಣಿಯೂರು ಮಠಾದೀಶ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಸರ್ವಜ್ಞ ಪೀಠ ವೇರಲಿರುವ ಪ್ರಯುಕ್ತ ಶ್ರೀಗಳು ಭಾನುವಾರ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿನೀಡಿ ಆಶೀರ್ವಚನ ನೀಡಿದರು.
ಸಾತ್ವಿಕತೆ ಶಾಂತಿ ಸಮಾಧಾನಗಳು ನಮ್ಮಲ್ಲಿ ನೆಲೆಸಲು ದೇವರ ದರ್ಶನ ಸೇವೆ ಬಹಳ ಮುಖ್ಯ ಎಂದು ಪೂರ್ವಜರು ದೇವರುಗಳನ್ನು ಸ್ಥಾಪಿಸಿದ್ದಾರೆ ನಮ್ಮಸಮಾಧಾನ ಮತ್ತು ಶಾಂತಿಗಾಗಿ ದೇವರನ್ನು ಅಲಂಕರಿಸಿ ಪೂಜಾ ಪುನಸ್ಕಾರ ಮಾಡುತ್ತೇವೆ ವಿನಹ ಎಲ್ಲವನ್ನೂ ಕೊಡುವ ದೇವರಿಗೆ ಇದರ ಅವಶ್ಯಕತೆ ಇರುವುದಿಲ್ಲ ಎಂದರು,
ಈ ಸಂದರ್ಭ ದೇವಸ್ಥಾನದ ಅರ್ಚಕ ವರ್ಗ ಮತ್ತು ಆಡಳಿತ ಮಂಡಳಿಯಿಂದ ಶ್ರೀಗಳಿಗೆ ಸ್ವಾಗತ ಹಾಗೂ ಪಾದಪೂಜೆ ಜರುಗಿತು. ವೇ.ಪೂ.ಪದ್ಮನಾಭ ಭಟ್ ಸ್ವಾಗತಿಸಿದರು. ದೇವಳದ ಅರ್ಛಕ ವರ್ಗ ,ಆಡಳಿತ ಮಂಡಿಳಿ ಹಾಗೂ ಭಜಕರು ಉಪಸ್ಥಿತರಿದ್ದರು.

Kinnigoli 31121301

Comments

comments

Comments are closed.

Read previous post:
Kinnigoli 30121313
ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ ಹಲ್ಲೆಗೆ ಯತ್ನ

ಮೂಲ್ಕಿ :  ಮೂಲ್ಕಿ; ಮೂಲ್ಕಿ ಹೆದ್ದಾರಿಯಿಂದ ಕಾರ್ನಾಡು ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ಚರಂತಿಪೇಟೆಯ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು ಸ್ಥಳೀಯ ಪಂಚಾಯಿತಿ ಹಾಗೂ ಕ್ಷೇತ್ರದ ಜನಪ್ರತಿನಿಧಿಗಳ...

Close