ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾ ಪೀಠ ವಾರ್ಷಿಕೋತ್ಸವ

Bhagyawan Sanil
ಮೂಲ್ಕಿ: ಶಿಕ್ಷಣ ಕಾಶಿ ಎನಿಸಿಕೊಂಡ ಅವಿಭಜಿತ ದಕ್ಷಿಣಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮ ಸಂಸ್ಕಾರಯುಕ್ತ ಶಿಕ್ಷಣ ವ್ಯಾಸಮಹರ್ಷಿ ವಿದ್ಯಾಪೀಠದಿಂದ ಲಭ್ಯವಾಗತ್ತಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಸೋಮವಾರ ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾ ಪೀಠ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಜ್ದಯ ಕೊಂಕಣಿ ಶಿಕ್ಷಣ ಕೇಂದ್ರಗಳ ಅಧ್ಯಕ್ಷ ಡಾ.ಕೆ.ಮೋಹನ್ ಪೈ ಮಾನಾಡಿ ಸಂಸ್ಕಾರ ರಹಿತ ಶಿಕ್ಷಣ ಯಾವುದೇ ಪ್ರಯೋಜನಕ್ಕೆ ಬಾರದು ವಿದ್ಯೆ ಹಾಗೂ ವಿನಯ ಜೀವನದ ಉನ್ನತಿಗೆ ಶ್ರೇಷ್ಠ ಸಾಧನವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ್ ವಹಿಸಿ ಸುಭ ಹಾರೈಸಿದರು.
ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್,ಮೂಲ್ಕಿ ಸಭಾಗ್ರಹ ಸಮಿತಿ ಅಧ್ಯಕ್ಷ ವಿ.ವಿಶ್ವನಾಥ ಕಾಮತ್,ವ್ಯಾಸ ಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ವೇದವ್ಯಾಸ ಶೆಣೈ, ಉಪಾಧ್ಯಕ್ಷ ಪ್ರೊ.ಯು ನಾಗೇಶ್ ಶೆಣೈ,ಸದಸ್ಯರಾದ ರಾಮದಾಸ್ ಕಾಮತ್ ದೃವ ಕಾಮತ್, ಸಂಚಾಲಕ ಕೆ.ನರಸಿಂಹ ಪೈ.ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಅತಿಥಿಗಳಾಗಿದ್ದರು.
ಶ್ರೀಷ ಸ್ವಾಗತಿಸಿದರು, ಚಂದ್ರಕಾ ಭಂಡಾರಿ ವರದಿ ಮಂಡಿಸಿದರು,ನಿಶ್ಚಿತ್ ಮತ್ತು ರಕ್ಷಿತಾ ನಿರೂಪಿಸಿದರುಆಶೀರ್ ವಂದಿಸಿದರು. ಚಿತ್ರ:ಎಂಯುಎಲ್_ಡಿಇಸಿ೩೦_೪ ಎಂದು ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡುತ್ತಿದ್ದಾರೆ.

Kinnigoli 31121303

Comments

comments

Comments are closed.

Read previous post:
Kinnigoli 31121302
ಮೂಲ್ಕಿ : ಬಿಲ್ಲವ ಸಂಗಮ-2013 ಕ್ರೀಡೋತ್ಸವ

Bhayavan Sanil ಮೂಲ್ಕಿ: ಗ್ರಾಮೀಣ ವಿದ್ಯಾರ್ಥಿಗಳು ಯಾವುದೇ ಡೊನೇಷನ್ ರಹಿತವಾಗಿ ಆಂಗ್ಲ ಮಾದ್ಯಮದಲ್ಲಿ ಕಲಿತು ಪಟ್ಟಣದ ಮಕ್ಕಳಿಗೆ ಸರಿಸಾಟಿಯಾಗುವಂತೆ ಮೂಲ್ಕಿಯಲ್ಲಿ ಶಾಲೆ ಸ್ಥಾಪಿಸಿ ಮೂಲ್ಕಿ ಜನರ ಸಂಘಟನೆಗಾಗಿ...

Close