ಫೇಮಸ್ ಯೂತ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಊರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಯುವಕ ಮಂಡಲ, ಸಾರ್ವಜನಿಕ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖ. ಪ್ರಜಾ ಪ್ರಭುತ್ವದಲ್ಲಿ ಸಮಾಜದ ಸಮಸ್ಯೆಗಳನ್ನು ತಿಳಿದು ಅದರ ಪರಿಹಾರ ಅಲ್ಲದೆ ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಯುವ ಜನಾಂಗ ಸಹಾಯ ಹಸ್ತ ನೀಡುವಲ್ಲಿ ಆಸಕ್ತಿ ವಹಿಸಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಮಂಗಳವಾರ ಹಳೆಯಂಗಡಿ 10ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ 26ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂಧರ್ಭ ರಾಜ್ಯ ಪ್ರಶಸ್ತಿ ವಿಜೇತ ಸದಾಶಿವ ಸಾಲ್ಯಾನ್ ಪಯ್ಯೊಟ್ಟು, ಅಬ್ಬಕ್ಕ ರಾಣಿ ಪ್ರಶಸ್ತಿ ವಿಜೇತೆ ಪ್ರಮೀಳ ದೀಪಕ್ ಪೆರ್ಮುದೆ, ಮತ್ತು ಬಾಲ ಪ್ರತಿಭೆ ಹೃತಿಕಾ ಹರೀಶ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಯುವ ಜನ ಮತ್ತು ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್, ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ವಿಶ್ವನಾಥ ಭಟ್ ಎಮ್., ಸೌತ್ ಕೆನರಾ ಫೋಟೊ ಗ್ರಾಫರ್ ಎಸೋಸಿಯೇಶನ್ ಅಧ್ಯಕ್ಷ ವಾಸುದೇವ ರಾವ್, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ತೋಕೂರು ಗುತ್ತು ಹೊಸಮನೆ ಗುಣಪಾಲ ಶೆಟ್ಟಿ, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಾನಂದ ಸುವರ್ಣ, ಫೇಮಸ್ ಯೂತ್ ಕ್ಲಬ್ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಕಾರ್ಯದರ್ಶಿ ವಿಶ್ವಜೀತ್, ಕೋಶಾಕಾರಿ ನವೀನ್‌ಚಂದ್ರ, ಅರುಣ್ ಕುಮಾರ್, ಮೋಹನ್ ಕುಮಾರ್, ಉಪಸ್ಥಿತರಿದ್ದರು
ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಕೆ. ಪ್ರಮೋದ್ ಕುಮಾರ್ ಸ್ವಾಗತಿಸಿದರು. ಸಂಪತ್ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli1011406Kinnigoli1011405Kinnigoli1011407 Kinnigoli1011408

Comments

comments

Comments are closed.

Read previous post:
Kinnigoli1011404
ಉಲ್ಲಂಜೆ ಸರಕಾರಿ ಶಾಲೆ : ವಾರ್ಷಿಕೋತ್ಸವದ

ಕಿನ್ನಿಗೋಳಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳು ಮೌಲ್ಯಧಾರಿತ ಶಿಸ್ತು ಸಂಸ್ಕಾರದ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ...

Close