ಆಧ್ಯಾತ್ಮ ಚಿಂತನೆಗಳಿಂದ ಶಾಂತಿ, ನೆಮ್ಮದಿ

ಕಿನ್ನಿಗೋಳಿ: ಆಧ್ಯಾತ್ಮ ಚಿಂತನೆಗಳಿಂದ ಮಾತ್ರ ಶಾಂತಿ, ನೆಮ್ಮದಿ ಪಡೆಯಲು ಸಾಧ್ಯ ತಿಂಗಳ ಪರ್ಯಂತ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರು ಒತ್ತಡದ ಜೀವನದಿಂದ ಹೊರಬಂದು ಬದುಕಿನಲ್ಲಿ ಹೊಸ ಚೈತನ್ಯ ಪಡೆಯಲು ಸಾಧ್ಯ ಎಂದು ಕಟೀಲು ಸಂತ ಜಾಕೋಬ ಚಚ್ ಧರ್ಮಗುರು ಫಾ| ರೋನಾಲ್ಡ್ ಕುಟಿನ್ಹೊ ಹೇಳಿದರು.
ಶನಿವಾರ ಕಿನ್ನಿಗೋಳಿಯ ಮಾರಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ದಶಮಾನೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭ ಕುಮಾರ ಗುರು ಸ್ವಾಮಿ ಪಾಂಗಳ ಮತ್ತು ಸುನಿಲ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಪಳನಿ ಗುರು ಸ್ವಾಮಿ, ವಿಠಲ ಮೇಸ್ತ್ರಿ, ಸುಧಾಕರ್ ಬನ್ನಂಜೆ ಉಪಸ್ಥಿತರಿದ್ದರು
ಹರೀಶ್ ಕೆ. ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli1011402

Comments

comments

Comments are closed.

Read previous post:
ಬಿಜೆಪಿ, ಜೆಡಿಎಸ್ ಪ್ರಾಯೋಜಿತ ಪ್ರತಿಭಟನೆಯ ನಾಟಕ

ಮುಲ್ಕಿ; ಕಾಂಗ್ರೇಸ್ ಪಕ್ಷವನ್ನು ಧಮನಿಸಲು ಹಾಗೂ ಸಚಿವ ಅಭಯಚಂದ್ರ ಜೈನ್‌ರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡಿಸಲು ಮೂಲ್ಕಿ ನಾಗರಿಕರು ಎಂಬ ನಕಲಿ ಹೆಸರಿನಲ್ಲಿ ಬಿಜೆಪಿ ಮತ್ತು...

Close