ನೆಲ್ಲಿಗುಡ್ಡೆ : ಜಲ್ಲಿಕ್ರಶರ್ ವಿರುದ್ದ ಪ್ರತಿಭಟನೆ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆಯಲ್ಲಿ ಸಂಜಯ್ ಕಲ್ಲಿನ ಕೋರೆ ಕಾರ್ಯನಿರ್ವಹಿಸುತ್ತಿದ್ದು ಈದೀಗ ಕೋರೆಗೆ ಹೊಸದಾಗಿ ಬೃಹತ್ ಗಾತ್ರದ ಮೊಬಲ್ ಕ್ರಶರ್ ಹೇರಿದ ವಾಹನ ಕಿನ್ನಿಗೋಳಿ ಮೂಡಬಿದ್ರಿ ರಾಜ್ಯ ಹೆದ್ದಾರಿಯ ಮೂರುಕಾವೇರಿ ಸಮೀಪದ ಐಕಳ ನೆಲ್ಲಿಗುಡ್ಡೆ ಸಮೀಪ ಬರುತ್ತಿರುವ ಸಂದರ್ಭ ಅಲ್ಲಿನ ಗ್ರಾಮಸ್ಥರು ಕೋರೆಗೆ
ವಾಹನ ಹೋಗದಂತೆ ತಡೆಹಿಡಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಐಕಳ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ರೀತಿಯ ಆರು ಕೋರೆಗಳು ಇದ್ದು ಸಣ್ಣ ಪ್ರಮಾಣದ ಸ್ಪೋಟ ನಡೆಸಿ ಜಲ್ಲಿ ಮಾಡಲಾಗುತ್ತಿತ್ತು. ಮಂಗಳವಾರ ಸಂಜೆ ಬಂದ ಮೊಬಲ್ ಕ್ರಷರ್ ಯಂತ್ರದಿಂದ ನಿತ್ಯ ತ್ವರಿತ ಪ್ರಮಾಣದಲ್ಲಿ ಲೋಡ್‌ಗಟ್ಟಲೆ ಜಲ್ಲಿ , ಕಲ್ಲು ತಯಾರಿಸಲಾಗುವುದು ಇದರಿಂದ ಲಾರಿಗಳ ಅಕ ಸಂಚಾರದಿಂದ ಈಗಾಗಲೇ ಹಾಳಾದ ರಸ್ತೆ ಸಂಪೂರ್ಣ ಹಾಳಾಗಲಿದೆ ಹಾಗೂ ಈಗಾಗಲೇ ಪರಿಸರದ ಬಾವಿಗಳ ನೀರಿನ ಅಂರ್ತಜಲ ಮಟ್ಟ ಕುಗ್ಗಿಹೋಗಿದ್ದು ಮುಂದೆ ನೀರಿನ ಮೂಲಗಳು ಬತ್ತಿ ಹೋಗಲಿದೆ. ಅಲ್ಲದೆ ಮನೆಗಳು ಸಣ್ಣ ಪ್ರಮಾಣದ ಸ್ಪೋಟದಿಂದಲೇ ಹಾನಿಯಾಗಿದೆ ಎಂದು ಅಲ್ಲಿನ ಗ್ರಾಮಸ್ಥ ನೋಟರಿ ನ್ಯಾಯವಾದಿ ಐಕಳ ಮುರಳೀಧರ ಶೆಟ್ಟಿ ತಿಳಿಸಿದ್ದಾರೆ.
ನೆಲ್ಲಿಗುಡ್ಡ ಪರಿಸರದಲ್ಲಿ ಸುಮಾರು ೩೦ ಎಕರೆ ಪ್ರದೇಶದಲ್ಲಿ ಕಲ್ಲಿನ ಕೋರೆಗಳು ಹರಡಿದ್ದು ಸ್ಪೋಟದಿಂದಾಗಿ ಕಲ್ಲು ಸಿಡಿತದಿಂದ ಪಕ್ಕದಲ್ಲಿ ಸುಮಾರು ೫೦ಕ್ಕೂ ಮಿಕ್ಕಿ ಮನೆಗಳಿದ್ದು ಹೆಚ್ಚಿನ ಮನೆಗಳಿಗೆ ಹಾನಿಯಾಗಿ ಕೆಲವು ತಾರಸಿ ಮನೆಗಳು ಬಿರುಕು ಬಿಟ್ಟಿದ್ದು ಈ ಬಗ್ಗೆ ಕೋರೆ ಮಾಲಿಕರಿಗೆ ಹಾಗೂ ಪಂಚಾಯತ್‌ಗೆ ಮನವಿ ನೀಡಿದರು ಪ್ರಯೋಜನವಾಗಿಲ್ಲ ನಮ್ಮ ಮನೆಗೂ ಹಾನಿಯಾಗಿದೆ ಎಂದು ಅಲ್ಲಿನ ನಿವಾಸಿ ಲೀಲಾಧರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಸ್ವರಾಜ್ ಶೆಟ್ಟಿ , ತಿಳಿಸಿದ್ದಾರೆ.
ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ಕೋರೆಗೆ ಪರವಾನಿಗೆ ಮಾತ್ರ ನೀಡಿದ್ದು ದೊಡ್ಡ ಕ್ರಶರ್‌ಗೆ ಪರವಾನಿಗೆ ಈ ವರೆಗೆ ನೀಡಿಲ್ಲ, ಜನರಿಗೆ ತೊಂದರೆಯಾಗುವ ಇಂತಹ ಉದ್ದಿಮೆಗಳಿಗೆ ಖಂಡಿತ ಪರವಾನಿಗೆ ನೀಡುವುದಿಲ್ಲ ಗುರುವಾರ ಐಕಳ ಪಂಚಾಯಿತಿಯಲ್ಲಿ ಸಭೆ ನಡೆಸಿ ವಿಚಾರ ಪರಾಮರ್ಶಿಸಿ ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತೇವೆ ಎಂದು ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ತಿಳಿಸಿದ್ದಾರೆ.
ಇದೊಂದು ಮೊಬೈಲ್ ಮಾದರಿಯ ಕ್ರಶರ್ ಆಗಿದ್ದು ಬಂಡೆಗಳನ್ನು ತೋಡುವುದರ ಜೊತೆಗೆ ಜಲ್ಲಿ ಹುಡಿಮಾಡುವ ಸಮೇತ ಲಾರಿಗಳಿಗೆ ಲೋಡುಮಾಡುವ ಎಲ್ಲಾ ಸೌಲಭ್ಯಗಳು ಇದರಲ್ಲಿದೆ. ಈ ಹಿಂದೆ ಸಣ್ಣ ಜಲ್ಲಿ ಕ್ರಶರ್‌ನಿಂದ ಅನೇಕ ಮನೆಗಳು ಹಾನಿಯಾಗಿದ್ದು ಜಲ್ಲಿ ಹುಡಿಯ ಧೂಳಿನಿಂದ ಹಳ್ಳಿಗರ ಆರೋಗ್ಯ ಏರುಪಾರಾಗಿದ್ದು ಕೃಷಿಕರ ತೋಟಕ್ಕೆ,ಹಾಗೂ ರಸ್ತೆ ಕೂಡ ನಾಶವಾಗುತ್ತಿದೆ. ಎಂದು ಸ್ಥಳೀಯ ಐಕಳ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಹೇಳಿದ್ದಾರೆ.
ಕೂಡಲೇ ಐಕಳ ಹ್ರಾಮ ಪಂಚಾಯಿತ ಆಡಳಿತ ಹಾಗೂ ಗಣಿ ಭೂವಿಜ್ಞಾನ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ನೆಲ್ಲಿಗುಡ್ಡೆ ಪರಿಸರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Kinnigoli1011401

Comments

comments

Comments are closed.

Read previous post:
1
HAPPY NEW YEAR 2014

Close