ಬೃಹತ್ ಪ್ರತಿಭಟನೆಯ ಎಚ್ಚರಿಕೆ

Auto

ಮುಲ್ಕಿ; ಮುಲ್ಕಿಯ ಚರಂತಿಪೇಟೆ ರಸ್ತೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ರಿಕ್ಷಾ ಚಾಲಕರ ಮೇಲೆ ದೌರ್ಜನ್ಯ ನಡೆಸಿದ್ದ ಸಚಿವರ ಸಹಿತ ಕಾಂಗ್ರೇಸ್ ನಾಯಕರ ದುರ್ವರ್ತನೆಯನ್ನು ಖಂಡಿಸಿದ್ದನ್ನೇ ರಿಕ್ಷಾ ಯೂನಿಯನ್ ಅಧ್ಯಕ್ಷನಾದ ನನ್ನ ಮೇಲೆ ಘಟನೆಯ ಹೊಣೆಗಾರನನ್ನಾಗಿ ಮಾಡುತ್ತಿರುವುದು ಹತಾಶೆಯ ಪ್ರತೀಕವಾಗಿದ್ದು ಇದರ ವಿರುದ್ಧ ರಿಕ್ಷಾ ಚಾಲಕರು ಮುಂದಿನ ದಿನಗಳನ್ನು ಬೃಹತ್ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದು ಮೂಲ್ಕಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಬಿಪಿನ್ ಪ್ರಸಾದ್ ಎಚ್ಚರಿಸಿದ್ದಾರೆ.
ಮುಲ್ಕಿಯಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಭಟನೆಯನ್ನು ಸಾಮಾಜಿಕ ಹಿತದೃಷ್ಟಿಯಿಂದ ನಾಗರಿಕರ ಹೋರಾಟಕ್ಕೆ ರಿಕ್ಷಾ ಚಾಲಕರು ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದರಲ್ಲದೇ ಮುಲ್ಕಿಯ ವಿಜಯಾ ಕಾಲೇಜಿನಿಂದ ಅತಿಕಾರಿ ಬೆಟ್ಟು ಕೊಲ್ಲೂರು ಕುಕ್ಕಟ್ಟೆ ರಸ್ತೆ ಸಹಿತ ಸುಮಾರು ಒಂಭತ್ತು ವಿವಿಧ ಬೇಡಿಕೆಯ ಬಗ್ಗೆಯು ಗಮನ ಸೆಳೆದಿದ್ದರು ತಾನು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಯತ್ನ ನಡೆದಿದ್ದು ಮಾಧ್ಯಮದ ಮೂಲಕ ತಿಳಿದು ಘಟನೆಯನ್ನು ಖಂಡಿಸಿದ್ದೇನೆ ಎಂದು ವಿವರಿಸಿದರು.
ಬ್ಲಾಕ್ ಕಾಂಗ್ರೇಸ್ ನಾಯಕರ ಆರೋಪದಂತೆ ತಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ ಆದರೆ ಅಭಯಚಂದ್ರರನ್ನು ಕಳೆದ ಚುನಾವಣೆಯಲ್ಲಿ ವೈಯುಕ್ತಿಕ ನೆಲೆಯಲ್ಲಿ ಬೆಂಬಲಿಸಿದ್ದೇನೆ, ಆದರೆ ಯೂನಿಯನ್‌ನ ಅಧ್ಯಕ್ಷನ ನೆಲೆಯಲ್ಲಿ ವಸ್ತುಸ್ಥಿತಿ ಅರಿತು ಹಾಗೂ ಸದಸ್ಯರ ಪರವಾಗಿರುವುದು ನನ್ನ ಜವಾಬ್ದಾರಿ ಎಂದು ಹೇಳಿದ ಬಿಪಿನ್ ಪ್ರಸಾದ್ ಪ್ರತಿಭಟನೆಯ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರು ಸ್ಥಳದಲ್ಲಿದ್ದರೂ ಅವರು ತಮ್ಮ ರಾಜಕೀಯ ಪಕ್ಷದ ಹಿತಾಸಕ್ತಿ ನೋಡಿದರೇ ವಿನಹ ರಿಕ್ಷಾ ಚಾಲಕನ ಪರವಾಗಿ ನಿಲ್ಲದಿರುವುದು ಖಂಡನೀಯ ಅವರಿಗೆ ಈಗಲೂ ಸಂಘವು ಗೌರವಿಸುತ್ತದೆ ಹುದ್ದೆಯಿಂದ ನಿರ್ಗಮಿಸುವ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಚಿತ್ರಾಪು ಮಾತನಾಡಿ ಸಂಘದ ಅಧ್ಯಕ್ಷರ ಬಗ್ಗೆ ಅವಹೇಳನಕಾರಿ ಹೇಳಿಕೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಜಿಲ್ಲಾ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ರಿಕ್ಷಾ ಚಾಲಕರ ಸಂಘಟನೆಯನ್ನು ಇಬ್ಬಾಗ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಸಂಘದ ಗೌರವಾಧ್ಯಕ್ಷ ಭಾಸ್ಕರ ಹೆಗ್ಡೆ ಮಾತನಾಡಿ ಕಾನೂನಿನ ಪರಿಧಿಯಲ್ಲಿ ಅನುಮತಿ ಪಡೆದು ಹೋರಾಟ ಮಾಡಬೇಕೆ ವಿನಹ ಮೂರನೆ ವೈಕ್ತಿಗಳ ಅನುಮತಿ ಬೇಕಾಗಿಲ್ಲ, ಮೂಲ್ಕಿ ನಾಗರಿಕರು ನರ ಸತ್ತವರಲ್ಲ, ಸರ್ಕಾರಿ ಆಸ್ಪತ್ರೆ, ರಿಜಿಸ್ಟ್ರೇಶನ್ ಕಚೇರಿ, ನಾಡ ಕಚೇರಿಯ ಅವ್ಯವಸ್ಥೆಯನ್ನು ಕೇಳುವವರಿಲ್ಲ, ಜನಪ್ರತಿನಿಧಿಗಳಿಗೆ ನಾಗರಿಕರ ಮೇಲೆ ಯಾವ ಭಾವನೆ ಇದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ತಿಳಿಸಿದರು.
ನಾಗರಿಕ ವೇದಿಕೆಯ ಹರೀಶ್ ಪುತ್ರನ್, ಮಾರ್ಕ್ ಮಾಟ್ರೀಸ್, ಸತೀಶ್ ಮಾನಂಪಾಡಿ, ಕೃಷ್ಣಪ್ಪ ಸನಿಲ್ ಉಪಸ್ಥಿತರಿದ್ದರು.

Comments

comments

Comments are closed.

Read previous post:
OLYMPUS DIGITAL CAMERA
ರಿಕ್ಷಾ ಯೂನಿಯನ್ : ಕಪ್ಪು ಬಾವುಟ ಪ್ರದರ್ಶನ

Narendra Kerekad ಮೂಲ್ಕಿ: ಕಾಂಗ್ರೇಸ್ ಪಕ್ಷದ ನಾಯಕರು ಮೂಲ್ಕಿ ರಿಕ್ಷಾ ಯೂನಿಯನ್‌ನ ಅಧ್ಯಕ್ಷರ ವಿರುದ್ಧ ಅವಮಾನಕಾರಿ ಹೇಳಿಕೆಯನ್ನು ನೀಡಿದ್ದು ಅದನ್ನು ಖಂಡಿಸಿ ಇಂದು ಬೆಳಿಗ್ಗೆಯಿಂದ ಮೂಲ್ಕಿಯಲ್ಲಿನ ಎಲ್ಲಾ...

Close