ರಿಕ್ಷಾ ಯೂನಿಯನ್ : ಕಪ್ಪು ಬಾವುಟ ಪ್ರದರ್ಶನ

Narendra Kerekad
ಮೂಲ್ಕಿ: ಕಾಂಗ್ರೇಸ್ ಪಕ್ಷದ ನಾಯಕರು ಮೂಲ್ಕಿ ರಿಕ್ಷಾ ಯೂನಿಯನ್‌ನ ಅಧ್ಯಕ್ಷರ ವಿರುದ್ಧ ಅವಮಾನಕಾರಿ ಹೇಳಿಕೆಯನ್ನು ನೀಡಿದ್ದು ಅದನ್ನು ಖಂಡಿಸಿ ಇಂದು ಬೆಳಿಗ್ಗೆಯಿಂದ ಮೂಲ್ಕಿಯಲ್ಲಿನ ಎಲ್ಲಾ ರಿಕ್ಷಾ ಚಾಲಕರು ಕಪ್ಪು ಬಾವುಟವನ್ನು ಪ್ರದರ್ಶಿಸಿ ರಸ್ತೆಗೆ ಇಳಿದಿದ್ದಾರೆ.
ಕಳೆದ ಸೋಮವಾರದಂದು ರಸ್ತೆ ದುರಸ್ಥಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ಸಚಿವರು ಹಾಗೂ ಕಾಂಗ್ರೇಸ್ ಪಕ್ಷದ ನಾಯಕರು ರಿಕ್ಷಾ ಚಾಲಕ ಪ್ರಶಾಂತ್‌ರ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿ ಮಂಗಳವಾರ ಮೂಲ್ಕಿ ಹೋಬಳಿಯ ಕಾರ್ನಾಡು, ಕಿನ್ನಿಗೋಳಿ, ಹಳೆಯಂಗಡಿ, ಕೊಲ್ನಾಡು, ಬಳ್ಕುಂಜೆ, ಮೂರುಕಾವೇರಿ, ಪಕ್ಷಿಕೆರೆ ಪ್ರದೇಶದ ರಿಕ್ಷಾ ಚಾಲಕರು ರಿಕ್ಷಾವನ್ನು ರಸ್ತೆಗೆ ಇಳಿಸದೇ ಹರತಾಳ ನಡೆಸಿದ್ದು ಈ ಸಂದರ್ಭದಲ್ಲಿ ಕಾಂಗ್ರೇಸ್ಸಿನ ನಾಯಕರು ಪ್ರತಿಭಟನಾ ಸಭೆಯಲ್ಲಿ ನಡೆದ ಘರ್ಷಣೆಗೆ ಯೂನಿಯನ್‌ನ ಅಧ್ಯಕ್ಷರೇ ನೇರಹೊಣೆ ಎಂದು ಹೇಳಿಕೆ ನೀಡಿದ್ದು ಇದನ್ನು ತೀವ್ರವಾಗಿ ಖಂಡಿಸಿರುವ ಮೂಲ್ಕಿ ಯೂನಿಯನ್‌ನ ರಿಕ್ಷಾ ಚಾಲಕರು ದಿನವಡೀ ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ದೈನಂದಿನ ಕೆಲಸವನ್ನು ನಿರ್ವಹಿಸಿದ್ದಾರೆ.
ಯೂನಿಯನ್‌ನ ಅಧ್ಯಕ್ಷರು ಯಾವುದೇ ಪಕ್ಷದ ಅಡಿಯಾಳಲ್ಲ ಅವರು ರಾಜಕೀಯ ರಹಿತವಾಗಿ ಯೂನಿಯನ್ ಅಧ್ಯಕ್ಷರನ್ನಾಗಿ ಚಾಲಕರೇ ಆಯ್ಕೆ ಮಾಡಿದ್ದು ರಾಜಕೀಯ ಪಕ್ಷದ ನಾಯಕರು ತಮ್ಮ ತಪ್ಪನ್ನು ಮರೆಮಾಚಲು ಬಡ ರಿಕ್ಷಾ ಚಾಲಕರ ಮೇಲೆ ಗಧಾ ಪ್ರಹಾರ ನಡೆಸುತ್ತಿರುವುದು ಖಂಡನೀಯ ಇಂತಹ ಘಟನೆಗಳನ್ನು ಶಾಂತ ರೀತಿಯಲ್ಲಿ ನಿರ್ವಹಿಸಬೇಕಾದ ನೇತಾರರು ರಿಕ್ಷಾ ಚಾಲಕರನ್ನೇ ಬಲಿಪಶುಮಾಡುತ್ತಿದ್ದು. ಅಧ್ಯಕ್ಷರ ವಿರುದ್ಧ ಸುಳ್ಳು ಆರೋಪ ಮಾಡಿದ್ದನ್ನು ಖಂಡಿಸಿ ಇಂದು ಕಪ್ಪು ಬಾವುಟ ಪ್ರದರ್ಶನ ನಡೆಸಿ ಎಚ್ಚರಿಸಿದ್ದೇವೆ ಇದು ಇನ್ನೂ ಮುಂದುವರಿದಲ್ಲಿ ಜಿಲ್ಲೆಯಾದ್ಯಂತ ರಿಕ್ಷಾ ಚಾಲಕರು ಬೀದಿಗಿಳಿದು ಹೋರಾಟ ಮಾಡುವ ನಿರ್ಧಾರಕ್ಕೆ ಯೋಚನೆ ಮಾಡಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇಂದು ಸಂಜೆ ರಿಕ್ಷಾ ಯೂನಿಯನ್ ಹಾಗೂ ವಿವಿಧ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿ ಹೋರಾಟದ ವಿವರವನ್ನು ನೀಡಲಿದೆ ಎಂದು ತಿಳಿದು ಬಂದಿದೆ.

OLYMPUS DIGITAL CAMERA

Comments

comments

Comments are closed.

Read previous post:
Kinnigoli1011405
ಫೇಮಸ್ ಯೂತ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಊರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಯುವಕ ಮಂಡಲ, ಸಾರ್ವಜನಿಕ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖ. ಪ್ರಜಾ ಪ್ರಭುತ್ವದಲ್ಲಿ ಸಮಾಜದ ಸಮಸ್ಯೆಗಳನ್ನು ತಿಳಿದು ಅದರ ಪರಿಹಾರ ಅಲ್ಲದೆ ಶಿಕ್ಷಣ ಮತ್ತು ಆರೋಗ್ಯದ...

Close