ಬೆಂಕಿಗೆ ಕ್ಯಾಂಟಿನ್ ಭಸ್ಮ

ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯ ಮುಖ್ಯ ರಸ್ತೆಯಲ್ಲಿರುವ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪಕ್ಕದ ಕ್ಯಾಂಟಿನ್ ಹಾಗೂ ಬೇಕರಿಗೆ ಗುರುವಾರ ಮುಂಜಾನೆ 4ಗಂಟೆಯ ಹೊತ್ತಿಗೆ ಬೆಂಕಿ ತಗುಲಿ ಕ್ಯಾಂಟಿನ್ ಪೂರ್ಣ ಸುಟ್ಟುಹೋಗಿದ್ದು ಬೇಕರಿಗೂ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಪಕ್ಷಿಕೆರೆ ದೇಜಪ್ಪ ಕೊಯಿಕುಡೆ ಎಂಬುವವರ ಮಾಲಕತ್ವದ ಈ ಕ್ಯಾಂಟಿನ್ ಬೆಂಕಿಗೆ ಆಹುತಿ ಆಗಿದ್ದು ಇದರೊಂದಿಗೆ ಹತ್ತಿರದಲ್ಲಿರುವ ಪ್ರಕಾಶ್ ಶೆಟ್ಟಿ ಎಂಬುವವರ ಶ್ರೀ ದೇವಿ ಬೇಕರಿಗೂ ಬೆಂಕಿ ವ್ಯಾಪಿಸಿ ಅದರ ಮೇಲ್ಛಾವಣಿಗೆ ಹಾನಿ ಉಂಟಾಗಿದೆ.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಕಟ್ಟಡದ ಬಾಡಿಗೆ ಅಂಗಡಿ ಹೊಂದಿರುವ ದೇಜುರವರು ಕ್ಯಾಂಟಿನ್ ಹಾಗೂ ನೈಲಾನ್ ಚೀಲಗಳ ರಖಂ ಹಾಗೂ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದರು. ಕ್ಯಾಂಟಿನಿಲ್ಲಿ ದಾಸ್ತ್ತಾನು ಇದ್ದ ನೈಲಾನ್ ಚೀಲಗಳು ಸಹಿತ ಕ್ಯಾಂಟಿನಿನಲ್ಲಿದ್ದ ಎಲ್ಲಾ ಸಾಮಾನುಗಳು ಪೂರ್ತಿಯಾಗಿ ಸುಟ್ಟು ಹೋಗಿವೆ. ಪ್ರಕಾಶ್ ಶೆಟಿ ಅವರ ಬೇಕರಿ ಬೆಂಕಿಯಿಂದ ಅಂಗಡಿಯ ಮಾಡು ಪಕ್ಕಾಸುಗಳು ಉರಿದು ಹೋಗಿವೆ, ಅಂಗಡಿಯಲ್ಲಿದ್ದ ಕಪಾಟು, ಪ್ರೀಡ್ಜು , ಬೇಕರಿ ತಿಂಡಿಗಳು ಬೆಂಕಿಯ ಜ್ವಾಲೆಗೆ ಹಾಳಾಗಿವೆ.

ತಪ್ಪಿದ ಅನಾಹುತ
ಬೆಂಕಿಗೆ ಕೆನ್ನಾಲಿಗೆಗೆ ಕ್ಯಾಂಟಿನ್‌ನಲ್ಲಿದ್ದ ಗ್ಯಾಸ್ ಸಿಲಿಂಡರ್‌ನ ಅನಿಲ ಸೋರಿಕೆಯಾಗಿ ಬೆಂಕಿ ವಿಸ್ತರಿಸಿದ್ದರೂ ಅದು ಸ್ಪೋಟಗೊಳ್ಳದೇ ಇದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಆದರೆ ಸಿಲಿಂಡರ್ ಸ್ಟೋಟಗೊಂಡಿದ್ದರೆ ಪಕ್ಕದ ಸಹಕಾರಿ ಬ್ಯಾಂಕ್ ಹಾಗೂ ಮಾರ್ಕೆಟ್‌ನ ಕಟ್ಟಡಗಳಿಗೆ ಹಾನಿಯಾಗುತಿತ್ತು ಸಿಲಿಂಡರ್ ಬಿರುಕು ಬಿಟ್ಟು ಸ್ಟೋಟಗೊಳ್ಳದೆ ಖಾಲಿಯಾಗಿದೆ. ಬೆಂಕಿ ಹತ್ತಿಕೊಂಡ ತಕ್ಷಣ ಸ್ಥಳೀಯರು ಹಾಗೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಕಳೆದ ವರ್ಷ ಸಹಕಾರಿ ಬ್ಯಾಂಕ್‌ನ ಸಮೀಪದ ತರಕಾರಿ ಹಾಗೂ ಹಣ್ಣು ಹಂಪಲು ಅಂಗಡಿಗಳು ಸಹ ಶಾರ್ಟ್ ಸರ್ಕ್ಯೂಟ್‌ನಿಂದ ಭಸ್ಮವಾಗಿದ್ದನ್ನು ಇಲ್ಲಿ ನೆನಪಿಸಬಹುದು.

ಬುಧವಾರ ರಾತ್ರಿ ಬೇಕರಿಯ ಮಾಲಕ ಪ್ರಕಾಶ್ ಶೆಟ್ಟಿ ಅಂಗಡಿ ಬಾಗಿಲು ಮುಚ್ಚುವ ಹೊತ್ತಿಗೆ ಈ ಹಿಂದೆ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದು ಪ್ರಸ್ತುತ ಸುರತ್ಕಲ್‌ನ ಕೋಳಿ ಅಂಗಡಿಯಲ್ಲಿ ದುಡಿಯುತ್ತಿರುವ ಶಿವಕುಮಾರ್ ಎಂಬಾತ ಕುಡಿತದ ಅಮಲಿನಲ್ಲಿ ಬಂದು ಮಾತನಾಡಿ ನಾನು ಈ ಹಿಂದೆ ಬೇರೆ ಅಂಗಡಿಗೆ ಬೆಂಕಿ ಕೊಟಿದ್ದೆ ಎಂಬ ವಿಷಯ ಹೇಳಿದ್ದ ಎಂದು ಪರಿಸರದವರು ಗಮನಿಸಿದ್ದರು. ಮುಂಜಾನೆ 4 ಗಂಟೆಗೆ ಅಂಗಡಿ ಬೆಂಕಿ ಬಿದ್ದ ಬಗ್ಗೆ ವಿಷಯ ತಿಳಿದು ಬರುವಾಗ ಈ ವ್ಯಕ್ತಿಯ ನನೆಪು ಬಂದು ಶಿವನನ್ನು ಹುಡುಕಾಡಿದಾಗ ಬಲವಿನ ಗುಡ್ಡ ರಸ್ತೆಯಲ್ಲಿ ಬಳಿ ನಡೆದು ಹೋಗುತ್ತಿದ್ದ ಅವನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಲಾಗಿದೆ.

Kinnigoli 02011401 Kinnigoli 02011402 Kinnigoli 02011403 Kinnigoli 02011407 Kinnigoli 02011404 Kinnigoli 02011405

Comments

comments

Comments are closed.

Read previous post:
Kinnigoli 02011406
ಐಕಳ ದುರ್ಗಾ ಪ್ರಸಾದ್ ಹೆಗ್ಡೆ ಆಯ್ಕೆ

ಕಿನ್ನಿಗೋಳಿ ವಲಯದ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಐಕಳ ದುರ್ಗಾ ಪ್ರಸಾದ್ ಹೆಗ್ಡೆ ಆಯ್ಕೆಯಾಗಿದ್ದಾರೆ.

Close