ಬಪ್ಪನಾಡು; ಭಜನಾ ಮಂಗಲೋತ್ಸವ

ಮೂಲ್ಕಿ: ಧಾರ್ಮಿಕ ಭಾವನೆ ಸಂಘಟನಾತ್ಮಕವಾಗಿ ಸಧೃಢವಾಗಿ ಯುವಜನರಲ್ಲಿ ಮೂಡಬೇಕು ಎಂದು ಮೂಲ್ಕಿಯ ಪ್ರತಿಷ್ಠಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದ ಸಂಯೋಜನೆಯಲ್ಲಿ ಏಕಾದಶ ಭಜನಾ ಮಂಗಲೋತ್ಸವವು ಜನವರಿ 23ರಿಂದ ಆರಂಭವಾಗಿ ನಿರಂತರ 10 ದಿನಗಳ ಕಾಲದಲ್ಲಿ 264 ಗಂಟೆಗಳ ಕಾಲ ನಡೆದು ಫೆಬ್ರವರಿ 3ರಂದು ಸಮಾಪ್ತಿಯಾಗಲಿದೆ ಎಂದು ಯುವಕ ವೃಂದದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಾರ್ನಾಡು ಹೇಳಿದರು.
ಅವರು ಸೇವಾ ಯುವಕ ವೃಂದದ ಕಟ್ಟಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯುವಕ ವೃಂದದ ಅಧಿಕೃತ ವೆಬ್‌ಸೈಟನ್ನು ಅನಾವರಣಗೊಳಿಸಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ದೇವಾಡಿಗ ಏಕಾದಶ ಭಜನಾ ಮಂಗಲೋತ್ಸವದ ಬಗ್ಗೆ ಮಾಹಿತಿ ನೀಡಿ ಭಜನಾ ಸಂಕೀರ್ತನೆಗೆ ಒಟ್ಟು 124 ಭಜನಾ ಮಂಡಳಿಯ ಅವಶ್ಯಕತೆ ಇದ್ದು ಈಗಾಗಲೇ 90 ಭಜನಾ ಮಂಡಳಿಯೂ ಹೆಸರನ್ನು ನೊಂದಾಯಿಸಿದೆ. ಫೆಬ್ರವರಿ 2ರಂದು ಮೂಲ್ಕಿ ನಗರ ಸಂಕೀರ್ತನೆಯನ್ನು ನಡೆಸಲಾಗುವುದು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭಜನಾ ಗೋಪುರದಲ್ಲಿ ಪ್ರತಿ ದಿನ ಭಜನಾ ಸಂಕೀರ್ತನೆ ನಡೆಯಲಿದೆ ಎಂದರು.
ಭಜನಾ ಸಂಚಾಲಕ ಲಕ್ಷ್ಮೀಕಾಂತ್ ಮತನಾಡಿ ಭಜನೆಯು ಎಲ್ಲಾ ಸಂಕೀರ್ತನೆಗೆ ಮುಕ್ತ ಅವಕಾಶವಿದ್ದು ದೇವರ ನಾಮಾವಳಿ, ತಾಳ, ತಂಬೂರಿ, ತಬ್ಲದ ಸಾಥ್ ಮಾತ್ರ ನೀಡಲಿದೆ, ಪ್ರತಿದಿನ ಬೆಳಿಗ್ಗೆ ಸಗ್ರಿಯ ಭಜನಾ ಮಂಡಳಿಯು 10ದಿನವೂ ಸಂಕೀರ್ತನೆಯಲ್ಲಿ ವಿಶೇಷವಾಗಿ ಭಾಗವಹಿಸಲಿದೆ, ಕೋಟೇಶ್ವರದಿಂದ ಮಂಜೇಶ್ವರದವರೆಗಿನ ವಿವಿಧ ಭಜನಾ ಮಂಡಳಿಯು ಭಾಗಿಯಾಗಲಿದೆ. ವಿಶೇಷವಾಗಿ ಯುವಜನತೆಯನ್ನು ಭಜನೆಯಲ್ಲಿ ತೊಡಗಿಸಬೇಕು ಟಿವಿ ಎಂಬ ಮಾಯಾಪೆಟ್ಟಿಗೆಯ ದಾಸರಾಗಬಾರದು ಎಂದು ಚಿಂತನೆ ಇದೆ. ಹೆಚ್ಚಿನ ಮಾಹಿತಿಗಾಗಿ 9964680005 ಹಾಗೂ 9035579009ನ್ನು ಹಾಗೂ www.bsdpsyv.webs.com ಸಂಪರ್ಕಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೆಬ್‌ಸೈಟ್ ಸಂಯೋಜಕ ವಿಶ್ವನಾಥರಾವ್ ಇನ್ನಿತರರು ಹಾಜರಿದ್ದರು.

Kinnigoli 04011401 Kinnigoli 04011402 Kinnigoli 04011403

 

Comments

comments

Comments are closed.

Read previous post:
Kinnigoli 04011411
ಮಂಗಳೂರು ವಿಮಾನ ನಿಲ್ದಾಣ :ಶ್ವಾನ ದಳ ಸೇರ್ಪಡೆ

Nishanth Kilenjoor ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವಂತೆಯೇ ಭದ್ರತಾ ವ್ಯವಸ್ಥೆಯನ್ನೂ ಮೇಲ್ದರ್ಜೆಗೇರಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ಧಾಣದಲ್ಲಿ ಈ...

Close