ತುಳು ಸಂಸ್ಕೃತಿಗಳನ್ನು ತಿಳಿ ಹೇಳುವ ಕಾರ್ಯ ಆಗಬೇಕು

ಕಿನ್ನಿಗೋಳಿ: ಪಾಶ್ಚತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಗೆ ತುಳು ಭಾಷೆ ಆಚಾರ ವಿಚಾರಗಳು ಸಂಸ್ಕೃತಿಗಳನ್ನು ತಿಳಿ ಹೇಳುವ ಕಾರ್ಯ ಹಾಗೂ ತುಳು ಭಾಷೆಯನ್ನು ಉಳಿಸಿ ಬೆಳೆಸುವ ಜಾಗೃತಿಯನ್ನು ಸಮಾಜದಲ್ಲಿ ಮೂಡಿಸಬೇಕಾಗಿದೆ ಎಂದು ಬಡಕ್ಕಾಯಿ ತೇರ ಕೊಟೊ ಗುರಿಕಾರ ಹರಿಪ್ರಸಾದ್ ರೈ ಬೆಳ್ಳಿಪಾಡಿ ಹೇಳಿದರು. 
ಶನಿವಾರ ಒಡಿಯೂರು ಸಂಸ್ಥಾನಮ್‌ನ ವಿಜಯ ರಥ ಕಿನ್ನಿಗೋಳಿಗೆ ಬಂದ ಸಂದರ್ಭ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ನಡೆದ ತುಳುನಾಡ್ದ ಜಾತ್ರೆ ಬಲೇ ತೇರ್ ಒಯಿಪುಗ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ ಆಶೀರ್ವಚನಗೈದರು. ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜಾ, ಹಿರಿಯ ಸಾಹಿತಿಗಳಾದ ಕೆ. ಜಿ. ಮಲ್ಯ, ಎನ್. ಪಿ. ಶೆಟ್ಟಿ ಮುಲ್ಕಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್, ನಾರಾಯಣ ಗುರು ಶಾಲಾ ಶಿಕ್ಷಕಿ ಯಶೋದಾ ಉಪಸ್ಥಿತರಿದ್ದರು.
ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಸ್ವಾಗತಿಸಿ ಪ್ರಸ್ತಾವನೆಗೈದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 04011413 Kinnigoli 04011414 Kinnigoli 04011415 Kinnigoli 04011416

Comments

comments

Comments are closed.

Read previous post:
Kinnigoli 04011406
ಅಜಾರು: ಬೆಳ್ಳಿ ಪ್ರಭಾವಳಿ ಸಮರ್ಪಣೆ

ಕಿನ್ನಿಗೋಳಿ : ಕಟೀಲು ಅಜಾರು ಶ್ರೀ ಧೂಮಾವತೀ ದೈವಸ್ಥಾನದ ಧೂಮಾವತೀ ದೈವದ ಬಿಂಬಕ್ಕೆ ಊರ-ಪರವೂರ ಭಕ್ತಾಭಿಮಾನಿಗಳು ನೀಡಿದ ಬೆಳ್ಳಿ ಪ್ರಭಾವಳಿಯ ಸಮರ್ಪಣಾ ಸಮಾರಂಭದ ಮೆರವಣಿಗೆಗೆ ಕಟೀಲು ದೇವಳದಿಂದ ದೈವಸ್ಥಾನದ...

Close