ಮಂಗಳೂರು ವಿಮಾನ ನಿಲ್ದಾಣ :ಶ್ವಾನ ದಳ ಸೇರ್ಪಡೆ

Nishanth Kilenjoor

ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವಂತೆಯೇ ಭದ್ರತಾ ವ್ಯವಸ್ಥೆಯನ್ನೂ ಮೇಲ್ದರ್ಜೆಗೇರಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ಧಾಣದಲ್ಲಿ ಈ ಶ್ವಾನ ದಳ ಕೂಡ ಸೇರ್ಪಡೆಯಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ. 24 ಗಂಟೆಗಳ ಕಾಲವೂ ಸ್ಟೈನ್ ಗನ್ ಹಿಡಿದುಕೊಂಡ ಬಿಗಿ ಭದ್ರತಾ ವ್ಯವಸ್ಥೆ ವಿಮಾನ ನಿಲ್ದಾಣದ ಮೇಲೆ ಕಣ್ಗಾವಲು ಇಟ್ಟಿದೆ. ಈ ಬಿಗಿ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಿಷ್ಟಗೊಂಡಿರುವುದು ಈ ಶ್ವಾನದಳದಿಂದ. ಗ್ವಾಲಿಯರ್ ನಲ್ಲಿ ವಿಶ್ವಮಟ್ಟದ ತರಬೇತಿ ಪಡೆದ ಲ್ಯಾಬ್ರಡಾರ್ ಶ್ವಾನಗಳ ಆಗಮನ ಭದ್ರತಾ ಪಡೆಗಳಿಗೆ ಬಲ ಬಂದಿದೆ.
ಭಯೋತ್ಪಾದನಾ ಕೃತ್ಯಗಳ ಮೇಲೆ ನಿಗಾ ಇಡಲು ಹಾಗೂ ಸ್ಫೋಟಕಗಳ ಪತ್ತೆಗೆ ಶ್ವಾನ ದಳ ನೆರವಾಲಿದೆ. ಗ್ವಾಲಿಯರ್ ನ ಗಡಿಭದ್ರತಾ ಪಡೆಯ ಕ್ಯಾಂಪಸ್ ನಲ್ಲಿ ಆರು ತಿಂಗಳು ಅಂತಾರಾಷ್ಟ್ರೀಯ ಮಟ್ಟದ ತರಬೇತು ಪಡೆದು ಇದೀಗ ಮಂಗಳೂರಿಗೆ ಆಗಮಿಸಿದೆ.
ಡಾಲಿ, ಬ್ರೂನೋ, ಜಾಕಿ ಹಾಗೂ ಅಲೆಕ್ಸ್  ಹೆಸರಿನ ನಾಲ್ಕು ಶ್ವಾನಗಳು ಸಿಐಎಸ್ ಎಫ್  ಪಡೆಗಳ ಜೊತೆ ಭದ್ರತಾ ಕಾರ್ಯದಲ್ಲಿ ನೆರವಾಗಿದೆ. ಈ ಶ್ವಾನಗಳಿಗೆ ಸುಮಾರು 200ಕ್ಕೂ ಅಧಿಕ ಬಗೆಯ ಸ್ಫೋಟಕಗಳನ್ನು ಗ್ರಹಿಸುವ, ಅದರ ವಾಸನೆ ಹಿಡಿಯುವ ಸಾಮರ್ಥ್ಯ ಹೊಂದಿದೆ.
ಈ ಶ್ವಾನಗಳಿಗೆಂದೇ ಭವ್ಯವಾದ ಬಂಗಲೆಯನ್ನು ನಿರ್ಮಿಸಲಾಗಿದೆ. ಎರಡು ಕೋಣೆಗಳು, ಅಡುಗೆ ಕೋಣೆ, ಈಜುಕೊಳ ಮೊದಲಾದ ವ್ಯವಸ್ಥೆ ಇಲ್ಲಿದೆ. ಪ್ರತಿನಿತ್ಯ ನಿಗದಿತ ಪ್ರಮಾಣದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ನೀಡಲಾಗುತ್ತಿದೆ. ಇದರ ತಿಂಗಳ ನಿರ್ವಹಣಾ ವೆಚ್ಚ ಐದು ಲಕ್ಷ ರೂಪಾಯಿ. ಶ್ವಾನದ ಮೇಲುಸ್ತುವಾರಿಗೆ ಆರು ಮಂದಿ ಯೋಧರನ್ನು ನಿಯೋಜಿಸಲಾಗಿದೆ. ಗೋವಾ, ಪುಣೆ, ಕೊಯಮತ್ತೂರು ಸೇರಿದಂತೆ 8 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಈ ವ್ಯವಸ್ಥೆ ಪರಿಚಯಿಸಲಾಗಿದೆ.

Kinnigoli 04011407 Kinnigoli 04011408 Kinnigoli 04011409 Kinnigoli 04011410 Kinnigoli 04011411

Comments

comments

Comments are closed.

Read previous post:
Kinnigoli 02011411
ದೊಡ್ಡ ಗಾತ್ರದ ಜಲ್ಲಿಕ್ರಷರ್ ವಿರುದ್ಧ ಆಕ್ರೋಶ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ಸಂಜಯ್ ಎಂಬವರ ಕಲ್ಲಿಕೊರೆಗೆ ಕಳೆದ ಎರಡು ದಿನಗಳ ಹಿಂದೆ ಬೃಹತ್ ಗಾತ್ರದ ಮೊಬಲ್ ಕ್ರಷರ್ ಹೇರಿದ ವಾಹನವೊಂದು...

Close