ಮೂಲ್ಕಿ ನಗರ ಬಿಜೆಪಿ : ಪ್ರತಿಭಟನಾ ಸಭೆ

ಮೂಲ್ಕಿ: ಮಹಿಳೆಯರ ಅಪಹರಣ, ಭಯೋತ್ಪಾದನೆ,ದನ ಕಳ್ಳತನ ಮುಂತಾದ ಅಫರಾಧಿಗಳ ವಿರುದ್ದ ರಾಜ್ಯ ಸಚಿವರಾಗಿ ಕೈ ಎತ್ತದ ನೀವು ಮೂಲಭೂತ ಸೌಕರ್ಯವಾದ ರಸ್ತೆ ರಿಪೇರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರಿಕ್ಷಾ ಚಾಲಕನ ಮೇಲೆ ಕೈಎತ್ತಿರುವುದು ಅಹಂಕಾರದ ಪರಮಾವಧಿಯಾಗಿದೆ ಎಂದು ಬಿಜೆಪಿ ನಾಯಕ ಜಗದೀಶ ಅಧಿಕಾರಿ ಹೇಳಿದರು.
ಶನಿವಾರ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಮೂಲ್ಕಿ ನಗರ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ತುಳು ಅಕಾಡಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ, ಸಾಮಾಜಿಕ ಜೀವನದಲ್ಲಿ ಹೊಗಳಿಕೆಗಿಂತ ದಿಕ್ಕಾರ ಹೇಳುವವರು ಜಾಸ್ತಿಯಾಗಿದ್ದು ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಆತ್ಮ ವಿಶ್ವಾಸದಿಂದ ಸೇವೆ ಮಾಡುವುದನ್ನು ಬಿಟ್ಟು 15ವರ್ಷದಿಂದ ರಸ್ತೆ ರಿಪೇರಿಯ ಬೇಡಿಕೆ ಇಟ್ಟಿರುವ ಜನತೆಗೆ ನೀವು ಕೈ ಎತ್ತಿರುವುದು ವಿನಾಶಕ್ಕೆ ಹಾದಿಯಾಗಿದೆ ಎಂದರು.
ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಬಿಜೆಪಿ ಅಧ್ಯಕ್ಷ ಸುಚರಿತ ಶೆಟ್ಟಿ, ಭುವನಾಭಿರಾಮ ಉಡುಪ, ಈಶ್ವರ ಕಟೀಲು ಉಪಸ್ಥಿತರಿದ್ದರು. ಮೂಲ್ಕಿ ನಗರ ಬಿಜೆಪಿ ಕಾರ್ಯದರ್ಶಿ ನವೀನ್ ರಾಜ್ ಸ್ವಾಗತಿಸಿದರು. ಉಮೇಶ್ ಮಾನಂಪಾಡಿ ನಿರೂಪಿಸಿದರು.

 Kinnigoli 05011401 Kinnigoli 05011402

Comments

comments

Comments are closed.