ಶಿಕ್ಷಣ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು

Bhagyavan Sanil
ಮೂಲ್ಕಿ: ಮೌಲ್ಯಾಧಾರಿತ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಯುವ ಶಕ್ತಿಯನ್ನು ಸಂಘಟಿತರನ್ನಾಗಿಸಿ ಉನ್ನತ ಆರ್ಥಿಕ ಶಕ್ತಿಯಾಗಿ ಬೆಳೆಯುವಂತೆ ಮಾಡಬಹುದು ಎಂದು ಮೂಲ್ಕಿ ನಗರಪಂ.ಮಾಜಿ ಸದಸ್ಯ ಸತೀಶ್ ಅಂಚನ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಿಲ್ಲವ ಸಂಗಮ-2014 ಪ್ರಯುಕ್ತ ಭಾನುವಾರ ಗ್ರಾಮ ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ವಲಯದ ವಿದ್ಯಾರ್ಥಿಗಳಿಗೆ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೆ ಸಹಕಾರ ನೀಡುತ್ತಾ ಬಂದಿರುವ ಬಿಲ್ಲವ ಸಮಾಜ ಸೇವಾ ಸಂಘ ಕ್ರೀಡೆಗಳನ್ನು ಸಂಘಟಿಸಿ ಯುವ ಪೀಳಿಗೆಯ ಉನ್ನತಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್ ವಹಿಸಿದ್ದರು
ಅತಿಥಿಗಳಾಗಿ ಸಂಘದ ಪೂರ್ವಾಧ್ಯಕ್ಷ ರಾಘು ಸುವರ್ಣ, ನ್ಯಾಯವಾದಿ ಬಿಪಿನ್ ಪ್ರಸಾದ್, ಅನಿವಾಸಿ ಉದ್ಯಮಿ ರಮೇಶ್ ಕರ್ಕೇರಾ,ನಾರಾಯಣ ಗುರು ಸೇವಾದಳದ ಅಧ್ಯಕ್ಷ ಮೋಹನ್ ಕೋಟ್ಯಾನ್,ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ್,ಮಹಿಳಾ ಮಂಡಲದ ಗೌ.ಅಧ್ಯಕ್ಷೆ ಸರೋಜಿನಿ ಸುವರ್ಣ,ಉದಯ ಅಮೀನ್ ಮಟ್ಟು, ಗೌ.ಕಾರ್ಯದರ್ಶಿ ಗೋಪೀನಾಥ ಪಡಂಗ,ರಮಾನಾಥ ಸುವರ್ಣ ಅತಿಥಿಗಳಾಗಿದ್ದರು.
ಯದೀಶ್ ಅಮೀನ್ ಸ್ವಾಗತಿಸಿದರು,ಉದಯ ಅಮೀನ್ ನಿರೂಪಿಸಿದರು, ಗೋಪೀನಾಥ ಪಡಂಗ ವಂದಿಸಿದರು.

OLYMPUS DIGITAL CAMERA

Comments

comments

Comments are closed.

Read previous post:
Kinnigoli 06011401
ಮೂಲ್ಕಿ: (ಎಸ್‌ಡಿಪಿಐ) ಮೆರವಣಿಗೆ

Bhagyavan Sanil ಮೂಲ್ಕಿ: ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ(ಎಸ್‌ಡಿಪಿಐ)ಮೂಲ್ಕಿ ನಗರ ಸಮಿತಿಯ ವತಿಯಿಂದ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ದ ಶನಿವಾರ ಕಾರ್ನಾಡು ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆ ನಡೆದು...

Close