ಮೂಲ್ಕಿ: ನಾಗರೀಕ ಸೇವಾ ಕೇಂದ್ರಕ್ಕೆ ಚಾಲನೆ

Bhagyavan Sanil

ಮೂಲ್ಕಿ: ಅನ್ಯರ ಬಣ್ಣದ ಮಾತುಗಳಿಗೆ ಮರುಳಾಗದೆ ಮೂಲ್ಕಿ ಸಮಗ್ರ ಅಭಿವೃದ್ಧಿಯನ್ನು ಮಾಡಿ ಇನ್ನೂ ಹತ್ತು ಹಲವು ಯೋಜನೆಗಳನ್ನು ರೂಪಿಸಿದ ಕಾಂಗ್ರೆಸ್ ಪಕ್ಷಕ್ಕೆ ನಗರ ಪಂಚಾಯತ್ ಚುಣಾವಣೆಯಲ್ಲಿ ಸಂಪೂರ್ಣ ಬೆಂಬಲ ನೀಡಿ ಎಂದು ಸಚಿವ ಅಭಯಚಂದ್ರ ಜೈನ್ ಹೇಳಿದರು.

ಮೂಲ್ಕಿ ಕೆ.ಎಸ್.ರಾವ್ ನಗರದಲ್ಲಿ ಭಾನುವಾರ ನಡೆದ ವಿವಿಧ ಕಾಮಾಗಾರಿಗಳ ಉದ್ಘಾಟನೆ ಹಾಗೂ ನಾಗರೀಕ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೂಲ್ಕಿ ಜನತೆಯ ಬಹುದಿನಗಳ ಬೇಡಿಕೆಯಾದ ಸ್ಪಷಲ್ ತಹಶೀಲ್ದಾರ್ ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಕೆ.ಎಸ್.ರಾವ್ ನಗರದ ಹೈಸ್ಕೂಲ್ ಕಟ್ಟಡ ನಿರ್ಮಾಣಕ್ಕೆ 77ಲಕ್ಷ, ಮೂಲ್ಕಿ ಬಪ್ಪನಾಡಿನಿಂದ ಏಳಿಂಜೆ ವರೆಗಿನ ರಸ್ತೆ ರಿಪೇರಿ ಮರು ಡಾಮರೀಕರಣಕ್ಕಾಗಿ ಸಿ.ಆರ್.ಎಫ್ ಯೋಜನೆಯಡಿ 2ಕೋಟಿ, ನಗರಾಭಿವೃದ್ಧಿ ಸಚಿವ ಸೊರಕೆಯವರ ಸಹಕಾರದಿಂದ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 12ಕೋಟಿ ವೆಚ್ಚದ ಒಳಚರಂಡಿ ವ್ಯವಸ್ಥೆ. ಮೀನುಗಾರಿಕಾ ಸಚಿವನಾಗಿ ಮೂಲ್ಕಿ ನಗರದ ಸಮಗ್ರ ರಸ್ತೆ ಅಭಿವೃದ್ಧಿಗಾಗಿ 5ಕೋಟಿ ಯೋಜನೆಗಳು ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಸ್ಪೆಷಲ್ ತಹಶೀಲ್ದಾರ್ ಮುಖೇನ ಹಕ್ಕು ಪತ್ರ ನೀಡಿಕೆ ರೇಶನ್ ಕಾರ್ಡು ಮೂಲ್ಕಿಯಲ್ಲಿ ನೀಡುವ ವ್ಯವಸ್ಥೆ ಹಾಗೂ ಮುಂದಿನ ತಿಂಗಳಲ್ಲಿ ಕೆ.ಎಸ್.ರಾವ್ ನಗರ ನಿವಾಸಿಗಳಿಗೆ 1ರೂ ಬೆಳ್ತಿಗೆ ಅಕ್ಕಿ ನೀಡಲಾಗುವುದು ಎಂದರು. ಮೂಲ್ಕಿ ಪರಿಸರದ ಅಡುಗೆ ಅನಿಲ ವಿತರಕರು ಸಪ್ಸಿಡಿ ಗ್ಯಾಸ್ 9ಸಿಲಿಂಡರ್ ನೀಡದೆ ವಂಚಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಎಲ್ಲಿಯಾದರೂ ಅಧೀಕೃತ ದೂರು ದಾಖಲಾದಲ್ಲಿ ಅವರ ಏಜನ್ಸಿಯನ್ನು ರದ್ದುಗೊಳಿಸಲಾಗುವುದು ಎಂದ ಅವರು ಅಭಯಚಂದ್ರ ಜೈನ್ ಎಂದಿಗೂ ಬಡವರ ಪರ ಬಡವರಿಗಾಗಿ ಎಂತಹಾ ಹೋರಾಟಮಾಡಲು ಸಿದ್ದ ಎಂದರು.
ಈ ಸಂದರ್ಭ ಇತ್ತೀಚೆಗೆ ರಿಕ್ಷಾ ಅವಘಡದಲ್ಲಿ ಮೃತಪಟ್ಟ ರಿಕ್ಷಾಚಾಲಕ ಲಕ್ಷ್ಮಣ ಬೆಳ್ಚಡ ರವರ ಕುಟುಂಬಕ್ಕೆ ಸಹಾಯವಾಗಿ ಕಾಂಗ್ರೆಸ್ ಕಾರ್ಯಕರ್ತರು ಸಂಗ್ರಹಿಸಿದ 25ಸಾವಿರ ರೂಗೆ ಹೆಚ್ಚುವರಿಯಾಗಿ 10ಸಾವಿರ ರೂ ಸಚಿವ ಅಭಯಚಂದ್ರ ಜೈನ್ ರವರು ಸೇರಿಸಿ ಒಟ್ಟು 35ಸಾವಿರ ರೂ ಮೃತರ ತಾಯಿ ಮೀನ ಬೆಳ್ಚಡ ರವರಿಗೆ ನೀಡಿದರು.
ಈಸಂದರ್ಭ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಲಕ್ಷ್ಮಣ ಪೂಜಾರಿ, ಜೀವನ್ ಕೋಟ್ಯಾನ್ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷ ಸೇರಿದರು.
ಸಚಿವ ಅಭಯಚಂದ್ರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೈಯೊಟ್ಟು ಸದಾಶಿವ ಸಾಲ್ಯಾನ್, ಮೂಲ್ಕಿ ನಪಂ.ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷೆ ಯೋಗೀಶ್ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ಹರಿಣಿ ಸುಂದರ್, ರವರು ಮೂಲ್ಕಿಗೆ ನೀಡಿದ ಸೇವೆಗಾಗಿ ಗೌರವಿಸಲಾಯಿತು.
ನಪಂ.ಮಾಜಿ ಅಧ್ಯಕ್ಷ ಬಿ.ಎಂ.ಆಸೀಪ್ ಪ್ರಸ್ತಾವಿಸಿದರು.ಗುಣಪಾಲ ಶೆಟ್ಟಿ,ಸರೋಜಿನಿ ಸುವರ್ಣ,ಮೈಯದ್ದಿ,ವಸಂತ ಬೆರ್ನಾಡ್,ಅಶೋಕ್ ಪೂಜಾರ್,ರಿಚಾರ್ಡ್ ಡಿಸೋಜಾ, ಮತ್ತಿತರರು ವೇದಿಕೆಯಲ್ಲಿದ್ದರು.

Kinnigoli 06011404

Comments

comments

Comments are closed.

Read previous post:
OLYMPUS DIGITAL CAMERA
ಶಿಕ್ಷಣ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು

Bhagyavan Sanil ಮೂಲ್ಕಿ: ಮೌಲ್ಯಾಧಾರಿತ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಯುವ ಶಕ್ತಿಯನ್ನು ಸಂಘಟಿತರನ್ನಾಗಿಸಿ ಉನ್ನತ ಆರ್ಥಿಕ ಶಕ್ತಿಯಾಗಿ ಬೆಳೆಯುವಂತೆ...

Close