ರೆ|ಗೋಡ್ವಿನ್ ಪ್ರಮೋದನ್(76)

ಮೂಲ್ಕಿ: ಮೂಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಾಜಿ ವಾರ್ಡನ್ ರೆ.ಗೋಡ್ವಿನ್ ಪ್ರಮೋದನ್(76) ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಮೂಲ್ಕಿ ಬಾಲಿಕಾಶ್ರಮದ ಸರ್ವ ಅಭಿವೃದ್ಧಿಯಲ್ಲಿ ಮುಖ್ಯ ಕಾರಣಕರ್ತರಾಗಿ ಮೂಲ್ಕಿ ಪರಿಸರದ ಜನತೆಯ ಮೆಚ್ಚುಗೆ ಗಳಿಸಿದ್ದರು. ಅವರು ಕಾಂಜಂಗಾಡು,ಮೂಳೂರು ,ಹಳೆಯಂಗಡಿ, ಉಚ್ಚಿಲ.ಗುಡ್ಡೆ ಚರ್ಚುಗಳಲ್ಲಿ ಸಭಾ ಪಾಲಕರಾಗಿ ತಮ್ಮ ಅವಧಿಯಲ್ಲಿ 3 ಕಡೆಯಲ್ಲಿ ಚರ್ಚು ಕಟ್ಡಡವನ್ನು ನೂತನವಾಗಿ ನಿರ್ಮಿಸಿದ ಕೀರ್ತಿಗಳಿಸಿದ್ದರು. ಉಡುಪಿ ಬಾಲಕರ ಆಶ್ರಮ ಹಾಗೂ ಮೂಲ್ಕಿ ಬಾಲಿಕಾಶ್ರಮದಲ್ಲಿ ವಾರ್ಡನ್‌ಆಗಿ ಉತ್ತಮ ಸೇವೆ ಸಲ್ಲಿಸಿದ್ದರು.ಅವರು ಪತ್ನಿ, ಎರಡು ಗಂಡು ಹಾಗೂ 2ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅಂತಿಮ ಕ್ರಿಯೆ: ಕಾರ್ನಾಡು ಚರ್ಚು ಮುಂಬಾಗದಲ್ಲಿರುವ ಸಂಮೃದ್ಧಿ ಮನೆಯಿಂದ ಮಂಗಳವಾರ ಸಂಜೆ 3ರಿಂದ ಪ್ರಾರ್ಥನೆ ನಡೆಸಿ ಬಳಿಕ ಕಾರ್ನಾಡು ಸಿಎಸ್‌ಐ ಧಫನ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

Kinnigoli 06011405

Comments

comments

Comments are closed.

Read previous post:
Kinnigoli 06011404
ಮೂಲ್ಕಿ: ನಾಗರೀಕ ಸೇವಾ ಕೇಂದ್ರಕ್ಕೆ ಚಾಲನೆ

Bhagyavan Sanil ಮೂಲ್ಕಿ: ಅನ್ಯರ ಬಣ್ಣದ ಮಾತುಗಳಿಗೆ ಮರುಳಾಗದೆ ಮೂಲ್ಕಿ ಸಮಗ್ರ ಅಭಿವೃದ್ಧಿಯನ್ನು ಮಾಡಿ ಇನ್ನೂ ಹತ್ತು ಹಲವು ಯೋಜನೆಗಳನ್ನು ರೂಪಿಸಿದ ಕಾಂಗ್ರೆಸ್ ಪಕ್ಷಕ್ಕೆ ನಗರ ಪಂಚಾಯತ್...

Close