ಐಕಳದಲ್ಲಿ ಕ್ರಶರ್‌ನಿಂದಾಗಿ ಜನರಿಗೆ ಪ್ರೆಶರ್

ಕಿನ್ನಿಗೋಳಿ : ಭಾನುವಾರ ಐಕಳ ಕಂಬಳದ ಕಟ್ಟೆಯಲ್ಲಿ ಕ್ರಶರ್‌ನ ವಿರುದ್ಧ ಗ್ರಾಮಸ್ಥರು ಹೋರಾಟದ ಬಗ್ಗೆ ಪೂರ್ವಬಾವಿ ಸಭೆ ನಡೆಸಿದರು.
ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆಯಲ್ಲಿ ಕಳೆದ ವಾರ ಬಂದಿಳಿದ ಹೊಸ ಬೃಹತ್ ಗಾತ್ರದ ಮೊಬಲ್ ಕ್ರಶರ್‌ನಿಂದ ಐಕಳ ಗ್ರಾಮಸ್ಥರ ನೆಮ್ಮದಿ ಹಾಳಾಗಿದ್ದು ಇದರ ವಿರುದ್ಧ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದರು. ಐಕಳ ಪಂಚಾಯಿತಿ ಆಡಳಿತವು ಗ್ರಾಮ ವ್ಯಾಪ್ತಿಯ ಕೋರೆ ಮಾಲಕರ ಹಾಗೂ ಸ್ಥಳೀಯ ಗ್ರಾಮಸ್ಥರ ತುರ್ತು ಸಭೆ ಕರೆದು ಸಭೆಯಲ್ಲಿ ಐಕಳ ಗ್ರಾಮ ಪಂಚಾಯಿತಿ ಕೋರೆಗಳ ಉದ್ಯಮ ಪರವಾನಿಗೆಯನ್ನು ತತ್ಕಾಲಿಕ ನೆಲೆಯಲ್ಲಿ ತೆಡೆಹಿಡಿಯುವ ನಿರ್ಣಯ ಮಾಡಿತ್ತು.
ಗ್ರಾಮ ಪಂಚಾಯತ್ ಪರವಾನಿಗೆ ದೊರಕದೆ ಯಾವುದೇ ಕಾರಣಕ್ಕೂ ಜಲ್ಲಿ ಕ್ರಶರ್ ನಿರ್ಮಾಣ ಸಾಧ್ಯವಿಲ್ಲ ಎಂದು ಬಲ್ಲವರ ಅನಿಸಿಕೆಯಾದರೂ ದೊಡ್ಡ ಜಲ್ಲಿ ಕ್ರಶರ್ ಪ್ರಾರಂಭಗೊಂಡರೆ ಇತಿಹಾಸ ಪ್ರಸಿದ್ಧ ಐಕಳದ ಕೃಷಿ ಪ್ರಧಾನ ಭೂಮಿ ಪೂರ್ಣ ನಾಶವಾಗುತ್ತದೆ. ಸ್ಥಳೀಯರಲ್ಲಿ ಅಸ್ತಮಾ, ಟಿಬಿ ಸಹಿತ ವಿವಿಧ ಶ್ವಾಸಕೋಶ ಸಂಬಂಧಿ ರೋಗಗಳ ಭೀತಿಯಿದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಬೃಹತ್ ಗಾತ್ರದ ಮೊಬಲ್ ಕ್ರಶರ್ ಸ್ಥಾಪನೆ ಆಗಕೂಡದು ಎಂಬುದು ಜನರ ಆಶಯ. ಇಂದಿನ ರಾಜಕೀಯ ಒತ್ತಡದಿಂದಾಗಿ ಮುಂದೆ ಏನು ಸಂಭವಿಸ ಬಹುದೆಂದು ಗ್ರಾಮಸ್ಥರ ಆತಂಕ ಹೆಚ್ಚಾಗಿದೆ.
ಐಕಳ ಬಾವದ ದೇವಿಪ್ರಸಾದ್ ಶೆಟ್ಟಿ ಬೆಳಪು ಸಭೆಯಲ್ಲಿ ಮಾತನಾಡಿ, ಸ್ಥಳೀಯರನ್ನು ಅಭದ್ರತೆಗೆ ದೂಡಿ ಒಂದು ಕೋರೆಯಲ್ಲಿ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಾಗಿರುವ ಮೊಬಲ್ ಕ್ರಶರ್ ಸ್ಥಾಪಿಸುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಮುಂದೆ ಕ್ರಶರ್‌ಗಳಿಗೆ ಅವಕಾಶ ನೀಡುವುದೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಲ್ಲಿ ಕ್ರಶರ್ ನಿರ್ಮಾಣದ ವಿರುದ್ಧ ರಾಜಕೀಯ ರಹಿತ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದ್ದು ಐಕಳ ಗ್ರಾಮ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು. ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಹೋರಾಟ ಮಾಡಲಾಗುವುದು. ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಚಿತ್ತರಂಜನ್ ಭಂಡಾರಿ, ಐಕಳ ಗ್ರಾಮಸ್ಥರಾದ ನ್ಯಾಯವಾದಿ ಐಕಳ ಮುರಳೀಧರ ಶೆಟ್ಟಿ, ಸ್ವರಾಜ್ ಶೆಟ್ಟಿ , ಐಕಳ ದೇವಿ ಪ್ರಸಾದ್ ಶೆಟ್ಟಿ , ಕೃಷ್ಣ ಮಾರ್ಲ, ಐಕಳ ಜಯಪಾಲ ಶೆಟ್ಟಿ, ರಾಬರ್ಟ್ ರೋಸಾರಿಯೋ, ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು.

Kinnigoli 07011401

Comments

comments

Comments are closed.

Read previous post:
Kinnigoli 06011405
ರೆ|ಗೋಡ್ವಿನ್ ಪ್ರಮೋದನ್(76)

ಮೂಲ್ಕಿ: ಮೂಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಾಜಿ ವಾರ್ಡನ್ ರೆ.ಗೋಡ್ವಿನ್ ಪ್ರಮೋದನ್(76) ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೂಲ್ಕಿ ಬಾಲಿಕಾಶ್ರಮದ ಸರ್ವ ಅಭಿವೃದ್ಧಿಯಲ್ಲಿ...

Close