ಗುತ್ತಕಾಡು: ಸೌಹರ್ದ ಕ್ರಿಕೆಟ್ ಟ್ರೋಫಿ -2014

ಕಿನ್ನಿಗೋಳಿ: ಭಾನುವಾರ ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಎಸೋಸಿಯೇಶನ್ ಹಾಗೂ ಗುತ್ತಕಾಡು ರೋಟರಿ ಸಮುದಾಯ ದಳದ ಜಂಟೀ ಆಶ್ರಯದಲ್ಲಿ 7 ನೇ ವರ್ಷದ ಸೌಹರ್ದ ಕ್ರಿಕೆಟ್ ಟ್ರೋಫಿ -2014 ಗುತ್ತಕಾಡು ಸರಕಾರಿ ಶಾಲಾ ಮೈದಾನದಲ್ಲಿ ನಡೆಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ರೋಬರ್ಟ್ ರೋಸಾರಿಯೋ ಕ್ರೀಡಾ ಕೂಟ ಉದ್ಘಾಟಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿ ಮಾಜಿ ಅಧ್ಯಕ್ಷ ಟಿ. ಎಚ್. ಮಯ್ಯದ್ದಿ, ಮೂಕಾಂಬಿಕಾ ದೇವಳದ ಅರ್ಚಕ ವಿವೇಕಾನಂದ, ರೋಟರಿ ಗ್ರಾಮೀಣದಳದ ಜಗದೀಶ ಆಚಾರ‍್ಯ, ಶಾಂತಿನಗರ ಮಸೀದಿ ಅಧ್ಯಕ್ಷ ಹಸನಬ್ಬ , ಗುಲಾಂ ಹುಸೈನ್, ಉದ್ಯಮಿ ಸೈಯ್ಯದ್, ಗ್ರಾಮ ಪಂಚಾಯಿತಿ ಸದಸ್ಯೆ ಶಾಂತ, ನಾಗರಿಕ ಸಮಿತಿ ಅಧ್ಯಕ್ಷ ಚಂದ್ರಶೇಖರ್, ನೂರುಲ್ ಹುದಾ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಸಂದೇಶ್, ಅಸ್ಗರ್ ಅಲಿ, ಟಿ. ಕೆ. ಅಬ್ದುಲ್‌ಖಾದರ್ ಮತ್ತಿತರರಿದ್ದರು.

Kinnigoli 07011402

Comments

comments

Comments are closed.

Read previous post:
Kinnigoli 07011401
ಐಕಳದಲ್ಲಿ ಕ್ರಶರ್‌ನಿಂದಾಗಿ ಜನರಿಗೆ ಪ್ರೆಶರ್

ಕಿನ್ನಿಗೋಳಿ : ಭಾನುವಾರ ಐಕಳ ಕಂಬಳದ ಕಟ್ಟೆಯಲ್ಲಿ ಕ್ರಶರ್‌ನ ವಿರುದ್ಧ ಗ್ರಾಮಸ್ಥರು ಹೋರಾಟದ ಬಗ್ಗೆ ಪೂರ್ವಬಾವಿ ಸಭೆ ನಡೆಸಿದರು. ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆಯಲ್ಲಿ ಕಳೆದ ವಾರ...

Close