ಕುದ್ರಿಪದವು ಬ್ಯಾನರ್ ವಿಶೇಷ

ಕಿನ್ನಿಗೋಳಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಗಿಮಿಕ್‌ಗಳನ್ನು ಮಾಡುತಿರುತ್ತದೆ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಪ್ರಕಟವಾದ ನಂತರ ರಾಜ್ಯಾದ್ಯಂತ ಮೋದಿ ಬ್ಯಾನರ್ ಗಳೇ ಕಂಗೊಳಿಸುತ್ತಿದೆ. ಕಿನ್ನಿಗೋಳಿ ಸಮೀಪದ ಕುದ್ರಿಪದವು ಎಂಬಲ್ಲಿ ನರೇಂದ್ರ ಮೋದಿ ಅವರಿಗೆ ಶುಭಕೊರುವ ಬ್ಯಾನರೊಂದು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ. ಅಂದು ಬಂದವರು ಪಿ.ವಿ. ನರಸಿಂಹರಾವ್, ಮತ್ತೆ ಬಂದವರು ಅಟಲ್ ಬಿಹಾರಿ ವಾಜ್ ಪೇಯಿ, ಇನ್ನು ಬರಬೇಕಾದವರು ನರೇಂದ್ರ ಮೋದಿ ಎಂಬ ವಾಕ್ಯ ಬರೆಯಲಾಗಿದೆ.
ಸದಾ ಒಂದಲ್ಲ ಒಂದು ವಿಷಯಗಳಿಗೆ ಬಿ.ಜೆ.ಪಿ, ಕಾಂಗ್ರೆಸ್ ನವರು ಕಚ್ಚಾಡುತ್ತಿದ್ದರೆ ಕಾಂಗ್ರೆಸಿನ ಮಾಜಿ ಪ್ರಧಾನಿ ನರಸಿಂಹರಾವ್ ಅವರನ್ನು ಹೊಗಳಿ ಬರೆದ ಈ ಬ್ಯಾನರ್ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ.

Kinnigoli 07011406

Comments

comments

Comments are closed.

Read previous post:
Kinnigoli 07011405
ಸೇವಾ ಸೌಹಾರ್ದದ ಮನೋಭಾವ ಬೆಳೆಸಬೇಕು

ಕಿನ್ನಿಗೋಳಿ: ಆತ್ಮಭಿಮಾನ, ಸೇವಾ ಸೌಹಾರ್ದದ ಮನೋಭಾವ ಬೆಳೆಸಿ ವಿಶ್ವಶಾಂತಿಗಾಗಿ ನಾವು ಬದ್ಧತೆಯಿಂದ ಜೀವನ ನಡೆಸಬೇಕು ಎಂದು ರೋಟರಿ ಜಿಲ್ಲೆ 3180 ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ...

Close