ಸೇವಾ ಸೌಹಾರ್ದದ ಮನೋಭಾವ ಬೆಳೆಸಬೇಕು

ಕಿನ್ನಿಗೋಳಿ: ಆತ್ಮಭಿಮಾನ, ಸೇವಾ ಸೌಹಾರ್ದದ ಮನೋಭಾವ ಬೆಳೆಸಿ ವಿಶ್ವಶಾಂತಿಗಾಗಿ ನಾವು ಬದ್ಧತೆಯಿಂದ ಜೀವನ ನಡೆಸಬೇಕು ಎಂದು ರೋಟರಿ ಜಿಲ್ಲೆ 3180 ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ ಹೇಳಿದರು
ಸೋಮವಾರ ಕಿನ್ನಿಗೋಳಿ ಸಹಕಾರ ಸೌಧ ಸಭಾ ಭವನದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಮತ್ತು ಇನ್ನರ್‌ವೀಲ್ ಕ್ಲಬ್ ಆಯೋಜಿಸಿದ ಕ್ರಿಸ್ ಮಸ್ ಹಾಗೂ ಹೊಸವರ್ಷದ ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೊ ಅಧ್ಯಕ್ಷತೆ ವಹಿಸಿದ್ದರು, ನಾಗೇಂದ್ರ ಕುಳಾಯಿ ಮೊಬೈಲ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಹಾಗೂ ಪೊಂಪೈ ಕಾಲೇಜು ಸಹಾಯಕ ಪ್ರೊಪೆಸರ್ ಯೋಗೀಂದ್ರ ಅವರು ಕ್ರಿಸ್‌ಮಸ್ ಮತ್ತು ಹೊಸ ವರುಷದ ಸಂದೇಶ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ , ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ರೋಟರಿ ವಲಯ ಸೇನಾನಿ ಎನ್.ಪಿ.ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ, ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 07011403 Kinnigoli 07011404 Kinnigoli 07011405

Comments

comments

Comments are closed.

Read previous post:
Kinnigoli 07011402
ಗುತ್ತಕಾಡು: ಸೌಹರ್ದ ಕ್ರಿಕೆಟ್ ಟ್ರೋಫಿ -2014

ಕಿನ್ನಿಗೋಳಿ: ಭಾನುವಾರ ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಎಸೋಸಿಯೇಶನ್ ಹಾಗೂ ಗುತ್ತಕಾಡು ರೋಟರಿ ಸಮುದಾಯ ದಳದ ಜಂಟೀ ಆಶ್ರಯದಲ್ಲಿ 7 ನೇ ವರ್ಷದ ಸೌಹರ್ದ ಕ್ರಿಕೆಟ್ ಟ್ರೋಫಿ -2014...

Close