ಬಳ್ಕುಂಜೆ ಸಂತ ಪೌಲರ ದೇವಾಲಯಕ್ಕೆ ನೂರರ ಸಂಭ್ರಮ

ಬಳ್ಕುಂಜೆ : ಸಂತ ಪೌಲರ ದೇವಾಲಯಕ್ಕೆ ನೂರು ವರ್ಷ ತುಂಬಿದ ಪ್ರಯುಕ್ತ ಭಾನುವಾರ ಬಳ್ಕುಂಜೆ ಚರ್ಚ್‌ನಲ್ಲಿ ಶತಮಾನೋತ್ಸವದ ಉದ್ಘಾಟನೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ರೆ| ಫಾ| ಡೆನಿಸ್ ಪ್ರಭು ಮೊರಾಸ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕ್ರೀಸ್ತ್ ಮುಜೆ ಥಂಯ್ ಜಿಯೆತಾ ಎಂಬ ಧ್ಯೇಯವಾಕ್ಯವುಳ್ಳ ಶತಮಾನೋತ್ಸವ ಲಾಂಛನವನ್ನು ಅನಾವರಣಗೊಳಿಸಿದರು. ಬಳ್ಕುಂಜೆ ಚರ್ಚ್ ಧರ್ಮಗುರು ಫಾ| ಮೈಕಲ್ ಡಿಸಿಲ್ವಾ, ಪ್ರೋವಿಡೆನ್ಸ್ ಕಾನ್ವೆಂಟಿನ ಸುಪೀರಿಯರ್ ಭಗಿನಿ ನತಾಲಿಯ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫೆಡ್ರಿಕ್ ಪಿಂಟೊ, ಶತಮಾನೋತ್ಸವ ಸಮಿತಿಯ ಸಂಯೋಜಕ ನೆಲ್ಸನ್ ಲೋಬೋ ಮತ್ತು ಕಾರ್ಯದರ್ಶಿ ಅನಿತಾ ಡಿಸೋಜ ಉಪಸ್ಥಿತರಿದ್ದರು. ಫ್ರೀಡಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Balakunje 08011401 Balakunje 08011402 Balakunje 08011403

Pics by : Michael Rodrigues

Comments

comments

Comments are closed.

Read previous post:
Kinnigoli 07011406
ಕುದ್ರಿಪದವು ಬ್ಯಾನರ್ ವಿಶೇಷ

ಕಿನ್ನಿಗೋಳಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಗಿಮಿಕ್‌ಗಳನ್ನು ಮಾಡುತಿರುತ್ತದೆ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಪ್ರಕಟವಾದ ನಂತರ ರಾಜ್ಯಾದ್ಯಂತ...

Close