ಕಾರ್ನಾಡ್ ಯಂಗ್‌ಸ್ಟಾರ‍್ಸ್ ಅಸೋಸಿಯೇಶನ್ ವಾರ್ಷಿಕೋತ್ಸವ

ಮೂಲ್ಕಿ:ಯುವ ಪೀಳಿಗೆಯ ಉನ್ನತಿಗಾಗಿ ಯುವ ಸಂಘಟನೆಗಳು ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಮತ್ತು ಕ್ರೀಡೆಯತ್ತ ಹೆಚ್ಚನ ಗಮನ ಹರಿಸುವುದರೊಂದಿಗೆ ಸಮಾಜ ಪಿಡುಗುಗಳಾದ ದುಶ್ಚಟಗಳ ನಿವಾರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ಹೇಳಿದರು.
ಕಾರ್ನಾಡ್ ಯಂಗ್‌ಸ್ಟಾರ‍್ಸ್ ಅಸೋಸಿಯೇಶನ್ ಇದರ 34ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಸಂಘಟನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತೀಕರಣಕ್ಕಾಗಿ ಕಾರ್ನಾಡ್ ಯಂಗ್‌ಸ್ಟಾರ‍್ಸ್ ಅಸೋಸಿಯೇಶನ್ ವಿಶೇಷವಾಗಿ ಹಮ್ಮಿಕೊಂಡ ವಿದ್ಯಾನಿಧಿ, ಪ್ರತಿಭಾ ಪುರಸ್ಕಾರ ಮುಂತಾದ ಸಾಮಾಜಿಕ ಅಭಿವೃದ್ಧಿಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕಂಬಳ ಕ್ರೀಡೆಗಾಗಿ 2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮುಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್‌ರವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜಿ.ಜಿ.ಕಾಮತ್ ಹಾಗೂ ಭಾರತ್ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ್ ಎಂ. ಸಾಲ್ಯಾನ್, ಕಾರ್ಯದರ್ಶಿ ಕಮಲಾಕ್ಷ ಮತ್ತು ಕೋಶಾಧಿಕಾರಿ ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.
ಶಿವರಾಮ್ ಸುವರ್ಣ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದರು. ಕೃಷ್ಣ ವರದಿ ಮಂಡಿಸಿದರು. ಶಿವಪ್ರಕಾಶ್ ಹಾಗೂ ರವಿಚಂದ್ರ ವೈ.ಎನ್.ಸಾಲ್ಯಾನ್ ಸನ್ಮಾನ ಪತ್ರ ವಾಚಿಸಿದರು. ವಿನೋಬ್‌ನಾಥ್ ಐಕಳ್ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಗುಂಡಾಲ್ ವಂದಿಸಿದರು.

Mulki 08011401

Comments

comments

Comments are closed.