ಉಳೆಪಾಡಿ ಪದವು ಪ್ರದೇಶದಲ್ಲಿ ಮರುಕಳಿಸುವ ಬೆಂಕಿ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉಳೆಪಾಡಿ ಗ್ರಾಮದ ಪದವು ಪ್ರದೇಶದ ಎತ್ತರದ ಗುಡ್ಡದಲ್ಲಿ ಪ್ರತಿವರ್ಷ ಬೆಂಕಿ ಅನಾಹುತದ ಪರಿಪಾಠ ಸ್ಥಳೀಯ ಗ್ರಾಮಸ್ಥರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಈ ವರ್ಷದ ಮೊದಲ ವಾರದಲ್ಲಿಯೇ ಎರಡು ಸಾರಿ ಬೆಂಕಿ ಹತ್ತಿ ಕೊಂಡಾಗ ಸ್ಥಳೀಯ ಗ್ರಾಮಸ್ಥರು, ನಂದಿಕೂರು ಹಾಗೂ ಮೂಡಬಿದಿರೆಯ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು 12 ಎಕರೆ ಹೆಚ್ಚಿನ ಪ್ರದೇಶದಲ್ಲಿ ಮುಳಿಹುಲ್ಲು, ತರಗೆಲೆ ನಿರ್ವಹಣೆಯಿಲ್ಲದೆ ರಾಶಿ ಬಿದ್ದಿರುವುದೂ ಬೆಂಕಿ ಆಕಸ್ಮಿಕಕ್ಕೆ ಕಾರಣವಾಗುತ್ತಿದೆ ಇದರ ಜಾಗದ ಮಾಲಕರು ಪರವೂರಿನಲ್ಲಿರುವುದರಿಂದ ಯಾರೂ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳು ಬೀಡಿ ಸಿಗರೇಟುಗಳನ್ನು ಸೇದಿ ಎಸೆಯುವುದರಿಂದ ಹುಲ್ಲು ಉರಿದು ಬೆಂಕಿ ಅನಾಹುಕ್ಕೆ ಕಾರಣವಾಗಬಹುದು ಎಂದು ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ. ಸಮೀಪದಲ್ಲಿ ಅಂಗನವಾಡಿ ಕೇಂದ್ರ, ಸರಕಾರಿ ಶಾಲೆ, ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನ ಹಾಗೂ ಹಲವಾರು ಪರಿಶಿಷ್ಟ ಜಾತಿ ವರ್ಗದ ಕೂಲಿ ಕಾರ್ಮಿಕರ ಮನೆಗಳಿದ್ದು ಇಲ್ಲಿಗೂ ಬೆಂಕಿ ವ್ಯಾಪಿಸದೆ ನೂರಾರು ಸಾವು ನೋವುಗಳು ಸಂಭವಿಸುವ ಸಾಧ್ಯತೆ ಜಾಸ್ತಿಯಾಗಿದೆ.
ಕಳೆದ ವರ್ಷ ಇದೇ ಪ್ರದೇಶದಲ್ಲಿ ಎರಡೆರಡು ಸಾರಿ ಬೆಂಕಿ ಅನಾಹುತ ಸಂಭವಿಸಿ ಅಗ್ನಿಶಾಮಕದಳದವರು ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸುಟ್ಟು ಹೋದ ಅಕೇಶಿಯಾ ಮರಗಳು ಸ್ಥಳೀಯರಿಗೆ ಪುಕ್ಕಟೆಯಾಗಿ ಉರುವಲಿಗೆ ಕಟ್ಟಿಗೆ ಸಿಕ್ಕಿತ್ತು ಎಂದು ಸ್ಥಳೀಯವಾಗಿ ಕೇಳಿ ಬಂದಿದೆ. ಈ ಗುಡ್ಡ ಪ್ರದೇಶದಲ್ಲಿ ಗಂಧದ ಮರಗಳಿದ್ದು ರಾತೋರಾತ್ರಿ ಕಡಿದು ಹಣಗಳಿಸುವ ಅಕ್ರಮ ದಂದೆಗಳು ಕೂಡಾ ನಡೆಯುತ್ತಿರುತ್ತದೆ ಸ್ಥಳೀಯರ ಗುಮಾನಿ.
ಪದವು ಗುಡ್ಡಪ್ರದೇಶದಲ್ಲಿ ವಿದ್ಯುತ್ ತಂತಿ, ಅಥವಾ ಮನೆ ಮಠಗಳಿಲ್ಲ ಗುಡ್ಡದ ಮುಳಿಹುಲ್ಲಿಗೆ ಬೆಂಕಿಯನ್ನು ಯಾಕಾಗಿ ಇಡುತ್ತಾರೆ? ವಿಘ್ನ ಸಂತೋಷಿಗಳ ಕೃತ್ಯ ಇದಾಗಿರಬಹುದೇ ಅಥವಾ ಕಾಣದ ಕೈಯ ಕೆಲಸವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇದರ ನಿಗೂಢ ರಹಸ್ಯವನ್ನು ಪಂಚಾಯಿತಿ ಆಡಳಿತ ಹಾಗೂ ಜನಪ್ರತಿನಿಧಿಗಳು ಗಮನ ವಹಿಸಿ ಮುಂದಾಗುವ ತೊಂದರೆಗಳಿಗೆ ಶಾಶ್ವತ ಮುಕ್ತಿ ಪರಿಹಾರ ದೊರೆಕಿಸಬೇಕಾಗಿದೆ. ಪರಿಸರದ ಜಾಗದ ಮಾಲೀಕರು ತಮ್ಮ ಜಾಗವನ್ನು ಸ್ವಚ್ಚವಾಗಿಟ್ಟು ಬೆಂಕಿ ಆಕಸ್ಮಿಕ ಆಗದಂತೆ ಎಚ್ಚರ ವಹಿಸಬೇಕಾಗಿದೆ. ಪ್ರಕೃತಿಯಲ್ಲಿನ ಜೀವರಾಶಿಗಳು, ವೃಕ್ಷಗಳು ಮಾನವನ ದಾಳಿಯನ್ನು ತಡೆಗಟ್ಟುವಂತೆ ರಕ್ಷಣೆಗಾಗಿ ಕೂಗುವುದಕ್ಕೆ ಆಗುವುದಿಲ್ಲ. ಆದ್ದರಿಂದ ಮನುಷ್ಯರಾದ ನಾವು ಪರಿಸರ ಜಾಗೃತಿ ಮೂಡಿಸುವುದಕ್ಕೆ ಮುಂದಾಗಬೇಕಿದೆ.

Kinnigoli 10011404 Kinnigoli 10011405

Comments

comments

Comments are closed.

Read previous post:
ಭೋಜ ಆಚಾರ್ಯ (82)

 ಕಿನ್ನಿಗೋಳಿ : ಪ್ರಭಾತ್ ಜುವೆಲ್ಲರ್ ನ ಭೋಜ ಆಚಾರ್ಯ (82) ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಕಳೆದ 50 ವರ್ಷಗಳಿಂದ ಜುವೆಲ್ಲರಿ ಅಂಗಡಿ ನಡೆಸುತ್ತಿದ್ದ ಅವರು...

Close