ಬ್ರಹ್ಮಶ್ರೀ ನಾರಾಯಣಗುರು ತುಳು ಚಿತ್ರದ ಚಿತ್ರೀಕರಣ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣಗುರು ತುಳು ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು ಮೂಲ್ಕಿ ಪರಿಸರದ ಪ್ರದೇಶಗಳಲ್ಲಿ ಚಿತ್ರೀಕರಣ ಸಾಗಿದೆ. ತುಂಗಭದ್ರಾ ಫಿಲಂ ನಿರ್ಮಾಣದ ಈ ಚಿತ್ರವು ಶೇ.75ಪೂರ್ಣಗೊಂಡಿದ್ದು ಮುಂದಿನ ಭಾಗಗಳು ಕೇರಳದ ವರ್ಕಳ ಶಿವಗಿರಿ ಪ್ರದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಡಿ.15ರಂದು ಪ್ರಾರಂಭಗೊಂಡ ಚಿತ್ರೀಕರಣ ನಿರ್ಮಾಪಕ ರಾಜಶೇಖರ ಕೋಟ್ಯಾನ್ (ಸಿದ್ಧಾರ್ಥ) ನೇತ್ರತ್ವದಲ್ಲಿ ಬಾರ್ಕೂರು, ಉಡುಪಿ, ಕಟಪಾಡಿ, ಮಂಚಕಲ್, ಬೆಳ್ತಂಗಡಿ, ನಂದಿಕೂರು, ಪಲಿಮಾರು, ಇನ್ನಾಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಕಳೆದೆರಡು ದಿನಗಳಿಂದ ಮೂಲ್ಕಿ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು ಸುರತ್ಕಲ್, ಬಂಟ್ವಾಳ ಚಿತ್ರೀಕರಣ ನಡೆಯಲಿದೆ. ರವೀಂದ್ರನಾಥ್ ಠಾಗೋರ್ ಆಗಿ ಅಭಿನಯಿಸಿದ ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ವಿಶ್ವ ಮಾನವ ತತ್ವ ಪ್ರತಿಪಾದಿಸಿ ರಾಷ್ಟ್ರನಾಯಕರಿಗೆ ಅಮೂಲ್ಯ ಸಲಹೆ ನೀಡಿದ ವಿಶ್ವ ಶಾಂತಿಯ ಪ್ರತಿಪಾದಕ ಶ್ರೀ ನಾರಾಯಣಗುರುಗಳ ಚಿತ್ರದಲ್ಲಿ ಪಾತ್ರವಹಿಸುವ ಅವಕಾಶ ಅವರ ಆಶೀರ್ವಾದವೆಂದೇ ತಿಳಿದಿದ್ದೇನೆ ಈ ಚಿತ್ರವು ಮುಂದಿನ ಪೀಳಿಗೆಗೆ ಸಾಮರಸ್ಯ ಶಾಂತಿ ವಿದ್ಯಾರ್ಹತೆಯನ್ನು ತಿಳಿಯಲು ಹಾಗೂ ಶ್ರೀ ನಾಯಾಯಣಗುರುಗಳ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದರು.
ಚಟ್ಟಂಬಿ ಸ್ವಾಮಿಯಾಗಿ ಅಭಿನಯಿಸಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಮಾತನಾಡಿ,ಸಿನಿಮಾ ಎಂದರೆ ದೂರ ಸರಿಯುವವನಾದ ನಾನು ಶ್ರೀ ನಾರಾಯಣ ಗುರುಗಳ ಚಿತ್ರ ಎಂದು ತಿಳಿದು ತಕ್ಷಣ ಒಪ್ಪಿಗೆ ಸೂಚಿಸಿದೆ ಅವರ ಚಿತ್ರದಲ್ಲಿ ಅಭಿನಯಿಸುವ ಕಾರ್ಯವೂ ಅವರ ಸೇವೆ ಎಂದು ತಿಳಿದು ನಟಿಸಿದ್ದೇನೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಯಶಸ್ವಿಯಾಗಿ ನಡೆಯಬೇಕು ಎಂದರು.
ನಿರ್ಮಾಪಕ ರಾಜಶೇಖರ ಕೋಟ್ಯಾನ್ (ಸಿದ್ಧಾರ್ಥ) ಮಾತನಾಡಿ, ದಕ್ಷಿಣ ಕನ್ನಡ ಪರಿಸರ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ ಇಲ್ಲಿ ಎಲ್ಲವೂ ಲಭ್ಯ ಸಮುದ್ರ,ನದಿ, ಗದ್ದೆಗಳು ಪರ್ವತ ಕಾಡು, ಬೃಹತ್ ಹಳೆ ಹೆಂಚಿನ ಮನೆಗಳು, ಗುಡಿಸಲುಗಳು, ಚೆಂದದ ಬಂಗಲೆಗಳು ಲಭ್ಯವಿರುವುದರಿಂದ ಸಮಾಜಿಕ ಚಿತ್ರೀಕರಣ ಇಲ್ಲಿ ಸುಲಭ ಸಾಧ್ಯ ಎಂದರು.
ಶ್ರೀ ನಾರಾಯಣ ಗುರು ಚಿತ್ರದ ಬಗ್ಗೆ ಪ್ರಶ್ನಿಸಿದಾಗ ಭಾವುಕರಾದ ಅವರು ನಾರಾಯಣ ಗುರುಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಅಗತ್ಯವನ್ನು ಮನಗಂಡು ಭಕ್ತಿ ಭಾವದಿಂದ ಚಿತ್ರ ತಯಾರಿಯಲ್ಲಿದ್ದೇವೆ.ಚಿತ್ರೀಕರಣ ಎಣಿಸಿದ್ದಕ್ಕಿಂತಲೂ ವೇಗದಲ್ಲಿ ನಡೆಯುತ್ತಿದೆ. ಉತ್ತಮ ತಂತ್ರಜ್ಞರು ಮತ್ತು ಶೃಜನಶೀಲ ಕಲಾವಿದರ ತಂಡವಿದೆ ಜನವರಿ ೨೪ರಿಂದ ಡಬ್ಬಿಂಗ್, ಎಡಿಟಿಂಗ್, ರೆಕಾರ್ಡಿಂಗ್, ಸೆನ್ಸಾರ್ ಬಳಿಕ ಏಪ್ರಿಲ್ ಮೊದಲ ವಾರದಲ್ಲಿ ತುಳುನಾಡಿನಾದ್ಯಂತ ಚಿತ್ರಬಿಡುಗಡೆ ಬಳಿಕ ದೇಶ ವಿವಿಧ ನಗರಗಳಲ್ಲಿ ಚಿತ್ರಬಿಡುಗಡೆಗೊಳಿಸಿ ವಿದೇಶಗಳಲ್ಲೂ ಚಿತ್ರಪದರ್ಶನ ನಡೆಯಲಿದೆ ವಿವಿಧ ಭಾಷೆಗಳ್ಲಿ ಡಬ್ಬಿಂಗ್ ನಂತರದ ದಿನಗಳಲ್ಲಿ ಪ್ರತೀಯೋಬ್ಬರ ಮನೆಯಲ್ಲಿ ಇರಿಸಿಕೊಳ್ಳಲಾಗುವಂತೆ ಡಿವಿಡಿ.ಬ್ಲೂರೇ ರೂಪದಲ್ಲಿ ಚಿತ್ರವನ್ನು ತಯಾರಿಸಿ ಬಿಡುಗಡೆಗೊಳಿಸಲಾಗುವುದು ಎಂದರು.
ಚಿತ್ರಕಥೆ ಬರೆದು ನಟಿಸುತ್ತಿರುವ ಮೂಲ್ಕಿ ಚಂದ್ರಶೇಖರ ಸುವರ್ಣ ಮಾತನಾಡಿ, ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ವೈಜ್ಞಾನಿಕವಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದೇವೆ ಯುವ ಪೀಳೀಗೆಗೆ ಅಧ್ಯಯನಕ್ಕೆ ಸಹಕಾರಿಯಾಗುವಂತೆ ಅವರು ಜೀವನ ನಡೆಸಿದ ಪ್ರದೇಶಗಳಲ್ಲಿ ಅವರು ಸ್ಥಾಪಿಸಿದ ದೇವಳಗಳಲ್ಲಿ ಚಿತ್ರಿಕರಣ ನಡೆದಿದೆ ಅವರ ವಿದ್ವತ್ತಿನ ಸಂಪೂರ್ಣ ಪರಿಚಯ ಚಿತ್ರ ನೀಡಲಿದೆ ಎಂದರು.
ಚಲನಚಿತ್ರ ನಟ ವಿಜಯರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ ನಾರಾಯಣಗುರು ಪಾತ್ರದಲ್ಲಿ ವೆಂಕಟಾದ್ರಿ, ರಾಜಶೇಖರ ಕೋಟ್ಯಾನ್ ಊರಿನ ಗುರಿಕಾರರಾಗಿ ಪಾತ್ರ ವಹಿಸಿದ್ದು ಬಾಲಕೃಷ್ಣ ಶೆಟ್ಟಿ, ಸೂರ್ಯೋದಯ, ಭೂಮಿಕಾ, ನವ್ಯಾ, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಚಂದ್ರಶೇಖರ ಸುವರ್ಣ, ಕೃಷ್ಣಮೂರ್ತಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ

Kinnigoli 10011402

ರವೀಂದ್ರನಾಥ್ ಠಾಗೋರ್ ಆಗಿ ಅಭಿನಯಿಸಿದ ಸಚಿವ ಅಭಯಚಂದ್ರ ಜೈನ್

Kinnigoli 10011403

ಚಟ್ಟಂಬಿ ಸ್ವಾಮಿಯಾಗಿ ಅಭಿನಯಿಸಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ

Pics by Bhagyavan Sanil

Comments

comments

Comments are closed.

Read previous post:
ಪಕ್ಷೇತರನಾಗಿ ಟಾನಿಕ್ ನೀಡಲು ಸಜ್ಜಾದ ಕಮಲಾಕ್ಷ !!

ಮೂಲ್ಕಿ; ಇಲ್ಲಿನ ನಗರ ಪಂಚಾಯತ್ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದ್ದು ಬಪ್ಪನಾಡು ಪ್ರಥಮ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿರುವ ಕಮಲಾಕ್ಷ ಬಡಗುಹಿತ್ಲು ಎಂಬ ತೂಕದ ವ್ಯಕ್ತಿ  ಪಕ್ಷೇತರನಾಗಿ ನಾಮಪತ್ರ ಸಲ್ಲಿಕೆಯಿಂದ...

Close