ವಿದ್ಯೆಯ ಜೊತೆಗೆ ಬೌದ್ಧಿಕ ವಿಕಸನ ಮುಖ್ಯ

ಕಿನ್ನಿಗೋಳಿ : ಜೀವನದಲ್ಲಿ ಶಿಸ್ತು, ಸಂಸ್ಕಾರ, ಏಕಾಗ್ರತೆ ಹಾಗೂ ವಿದ್ಯೆಯ ಜೊತೆಗೆ ಬೌದ್ಧಿಕವಾಗಿ ವಿಕಸನಗೊಳ್ಳಲು ಭಗವದ್ಗೀತೆಯಂತಹ ಮಹಾನ್ ಗ್ರಂಥಗಳ ಪಠಣ ಸಹಕಾರಿ ಯಾವುದೇ ಕೆಲಸಗಳನ್ನು ಸ್ವತ: ಇಚ್ಚಾಪೂರ್ವಕವಾಗಿ ಮಾಡಬೇಕಲ್ಲದೆ ಸಮಾಜದ ಹಿತಕ್ಕೋಸ್ಕರ ಪ್ರತಿಯೊಬ್ಬನೂ ತನ್ನ ಕರ್ತವ್ಯ ನಿರ್ವಹಿಸಬೇಕು ಎನ್ನುವುದು ಗೀತೆಯ ತಾತ್ಪರ್ಯವಾಗಿದೆ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಶುಕ್ರವಾರ ಕಿನ್ನಿಗೋಳಿ ಸಮೀಪದ ಕಮ್ಮಾಜೆ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗೀತಾ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಟೀಲು ಕಾಲೇಜು ಸಂಸ್ಕೃತ ಉಪನ್ಯಾಸಕ ಡಾ| ಸೋಂದಾ ಭಾಸ್ಕರ ಭಟ್, ವಸತಿ ಶಾಲಾ ಮುಖ್ಯ ಶಿಕ್ಷಕ ಚಂದ್ರ ಶೇಖರ್ ಉಪಸ್ಥಿತರಿದ್ದರು. ಶಿಕ್ಷಕ ಗಣಪತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli 11011402

Comments

comments

Comments are closed.

Read previous post:
ಜಯಲಕ್ಷ್ಮೀ ಜೆ. ನಾಯಕ್ (54)

ಕಿನ್ನಿಗೋಳಿ: ಕಿನ್ನಿಗೋಳಿ ಮೂರುಕಾವೇರಿಯ ಜಗದೀಶ ನಾಯಕ್ ಅವರ ಪತ್ನಿ ಜಯಲಕ್ಷ್ಮೀ ಜೆ. ನಾಯಕ್ (54ವರ್ಷ) ಹೈದಯಾಘಾತದಿಂದ ಶನಿವಾರ ನಿಧನರಾದರು. ಅವರಿಗೆ ಪತಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರು...

Close