ಶ್ರೀಧರ ರಾವ್ (72)

ಮೂಲ್ಕಿ:  ಮೂಲ್ಕಿ ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕ ಮೈಲೊಟ್ಟುವಿನ ನಿವಾಸಿ ವಿ.ಶ್ರಿಧರರಾವ್ (72) ಇಂದು ಬೆಳಿಗ್ಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಜನಾನುರಾಗಿಯಾಗಿದ್ದ ಶ್ರೀಧರರಾವ್ ಸಾವಿರಾರು ವಿದ್ಯಾರ್ಥಿ ಸಮೂಹವನ್ನು ಸಮಾಜಕ್ಕೆ ಅರ್ಪಿಸಿದ್ದರಲ್ಲದೆ ಅಪಾರ ಜನಮನ್ನಣೆಯನ್ನು ಪಡೆದಿದ್ದರು. ನಿವೃತ್ತಿ ನಂತರವು ತಮ್ಮ ಶೈಕ್ಷಣಿಕ ಅನುಭವವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸದಾ ಚಟುವಟಿಕೆಯಲ್ಲಿದ್ದರು.
ಮೃತರು ಪತ್ನಿಯನ್ನು ಅಗಲಿದ್ದಾರೆ. ಹಿರಿಯ ಪುತ್ರ ಪೃಥ್ವೀಶ್ ಕರಿಕೆ ಕಿನ್ನಿಗೋಳಿ ಸಮೀಪದ ಶಿಮಂತೂರು ಶಾರದಾ ಫ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾರೆ. ಪುತ್ರಿ ಡಾ.ಈಶ್ವರಿ ಪ್ರಜ್ಞರವರು ವೈದ್ಯ ವೃತ್ತಿಯಲ್ಲಿ ಪ್ರಸಿದ್ಧರಾಗಿದ್ದಾರೆ. ಕಿರಿಯ ಪುತ್ರ ಪುನೀತ್ ಕೃಷ್ಣರವರು ಪತ್ರಕರ್ತರಾಗಿದ್ದಾರೆ.
ಚಂದ್ರಶೇಖರ ಸ್ವಾಮೀಜಿ, ಸಂಸದ ನಳಿನ್‌ಕುಮಾರ್ ಕಟೀಲು, ಸಚಿವ ಕೆ.ಅಭಯಚಂದ್ರ, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ನ್ಯಾಯವಾದಿ ಬಿಪಿನ್ ಪ್ರಸಾದ್, ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ, ಮೂಲ್ಕಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಬಿ.ಎಂ.ಆಸಿಫ್, ಶಶಿಕಾಂತ ಶೆಟ್ಟಿ, ವಿಶ್ವಕರ್ಮ ಒಕ್ಕೂmದ ಜಿಲ್ಲಾ ಉಪಾಧ್ಯಕ್ಷ ಮಧು ಆಚಾರ್ಯ ಕಾರ್ನಾಡು, ಸಮಾಜ ಸೇವಕರಾದ ಎಂ.ಬಿ.ನೂರ್ ಮಹಮ್ಮದ್, ಅಬ್ದುಲ್ ರಜಾಕ್, ಸಾಧು ಅಂಚನ್, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಆಚಾರ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ, ಶಿಕ್ಷಕ ವೃಂದ, ಶಾಲಾ ಆಡಳಿತ ಮಂಡಳಿ, ರಾಮಕೃಷ್ಣ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ವೈ.ಎನ್.ಸಾಲಿಯಾನ್ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Mulki SridharRao

Comments

comments

Comments are closed.

Read previous post:
ವಿದ್ಯೆಯ ಜೊತೆಗೆ ಬೌದ್ಧಿಕ ವಿಕಸನ ಮುಖ್ಯ

ಕಿನ್ನಿಗೋಳಿ : ಜೀವನದಲ್ಲಿ ಶಿಸ್ತು, ಸಂಸ್ಕಾರ, ಏಕಾಗ್ರತೆ ಹಾಗೂ ವಿದ್ಯೆಯ ಜೊತೆಗೆ ಬೌದ್ಧಿಕವಾಗಿ ವಿಕಸನಗೊಳ್ಳಲು ಭಗವದ್ಗೀತೆಯಂತಹ ಮಹಾನ್ ಗ್ರಂಥಗಳ ಪಠಣ ಸಹಕಾರಿ ಯಾವುದೇ ಕೆಲಸಗಳನ್ನು ಸ್ವತ: ಇಚ್ಚಾಪೂರ್ವಕವಾಗಿ ಮಾಡಬೇಕಲ್ಲದೆ...

Close