ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೇಕು

ಕಿನ್ನಿಗೋಳಿ : ತೆರೆಮರೆಯ ಕಲಾವಿದರಿಗೆ ಮನ್ನಣೆ ನೀಡಿ ಜನಪದ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೇಕು ಸಾಮಾಜಿಕ ಜೀವನದಲ್ಲಿ ಸಂಸಾರದ ಜಂಜಾಟದಿಂದ ಮನಸ್ಸನ್ನು ಹಗುರು ಮಾಡಿಕೊಳ್ಳಲು ದಾಸರ ತತ್ತ್ವ ಪದಗಳು, ಭಜನೆ, ಕೀರ್ತನೆ, ಪುರಾಣ ಆಲಿಸುವುದರಿಂದ ಸಾಧ್ಯ. ಎಂದು ಬೆಂಗಳೂರು ಹೈಕೋರ್ಟ್ ವಕೀಲ ಹರೀಶ ಪೂಂಜ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಪ್ರಾಯೋಜಿಸಿದ ಸಾಂಸ್ಕ್ರತಿಕ ಸೌರಭದ ಅಂಗವಾಗಿ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ನಡೆದ ಭಜನ್ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಭಜನಕಾರ ರಾಧಾಕೃಷ್ಣ ನಾಯಕ್ ಮೂರುಕಾವೇರಿ, ಸಾಹಿತಿ ಉದಯಕುಮಾರ್ ಹಬ್ಬು ಉಪಸ್ಥಿತರಿದ್ದರು.
ಶ್ರೀನಿವಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಿದುಷಿ ವಿಭಾ ಶ್ರೀನಿವಾಸ ನಾಯಕ್ ಮಂಗಳೂರು ಅವರ “ಭಜನ್ ಸಂಧ್ಯಾ” ಸಂಕೀರ್ತನೆಗೆ ತಬ್ಲಾದಲ್ಲಿ ಅಶ್ವಿನಿ ನಾಯಕ್ ಹಾಗೂ ಹಾರ್ಮೊನಿಯಂನಲ್ಲಿ ಶಶಿಕಿರಣ್ ಸಾತ್ ನೀಡಿದರು.

Kinnigoli 13011403 Kinnigoli 13011404 Kinnigoli 13011405

Comments

comments

Comments are closed.

Read previous post:
ಶ್ರೀಧರ ರಾವ್ (72)

ಮೂಲ್ಕಿ:  ಮೂಲ್ಕಿ ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕ ಮೈಲೊಟ್ಟುವಿನ ನಿವಾಸಿ ವಿ.ಶ್ರಿಧರರಾವ್ (72) ಇಂದು ಬೆಳಿಗ್ಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸರ್ಕಾರಿ ಶಾಲೆಯಲ್ಲಿ...

Close