ಶಂಶೀಂದ್ರ ಗೋಳಿಜೋರ ಪುಣ್ಯ ಸ್ಮರಣೆ

 ಕಿನ್ನಿಗೋಳಿ: ಸಮಾಜಕ್ಕೆ ಒಳಿತನ್ನು ಬಯಸಿ ತಮ್ಮ ಜೀವನದಲ್ಲಿ ಶಿಸ್ತು ಶಂಸ್ಕಾರ ತ್ಯಾಗ ಮನೋಭಾವ ಮೈಗೂಡಿಸಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು. ಗೋಳಿಜೋರ ಶ್ರೀ ರಾಮ ಯುವಕ ವೃಂದ ಹಾಗೂ ಯಕ್ಷಗಾನ ಬಯಲಾಟ ಸಮಿತಿ ಗೋಳಿಜೋರ ಆಶ್ರಯದಲ್ಲಿ ಭಾನುವಾರ ನಡೆದ ಶಂಶೀಂದ್ರ ಗೋಳಿಜೋರ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಶ್ರೀ ಹರಿಹರ ಭಜನಾ ಮಂಡಳಿ ಮುಖ್ಯಸ್ಥ ಶಂಕರ್ ಮಾಸ್ಟರ್, ಉದ್ಯಮಿ ಸುಧಾಕರ ಶೆಟ್ಟಿ, ಜಾದೂಗಾರ ಲೋಲಾಕ್ಷ, ಶ್ರೀ ರಾಮ ಯುವಕ ವೃಂದದ ಅಧ್ಯಕ್ಷ ಶ್ರೀಪತಿ ಗೋಳಿಜೋರ ಉಪಸ್ಥಿತರಿದ್ದರು. ಗಿರೀಶ್ ಪ್ರಸ್ತಾವಿಸಿ ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli 13011409 Kinnigoli 13011410 Kinnigoli 13011411

Comments

comments

Comments are closed.

Read previous post:
ಪಟ್ಟೆ ಶ್ರೀ ಜಾರಂದಾಯ ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ನಡೆಯಿತು. Sudhir Suvarna

Close