ಸ್ವಸಹಾಯ ಸಂಘಗಳಿಂದ ಸ್ವಾವಲಂಬನೆ

ಕಿನ್ನಿಗೋಳಿ: ಸ್ವಸಹಾಯ ಸಂಘಗಳ ಆರ್ಥಿಕ ಸ್ವಾವಲಂಬನೆಯಿಂದಾಗಿ ರೈತ, ಮಹಿಳೆ, ಕೂಲಿ ಕಾರ್ಮಿಕ ಹಾಗೂ ದುರ್ಬಲರ ಏಳಿಗೆ ಸಾಧ್ಯವಾಗಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಭಾನುವಾರ ಕೊಡೆತ್ತೂರುವಿನಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು ಕಾರ್ಯಕ್ಷೇತ್ರದ ಆದರ್ಶ ಕೊಡೆತ್ತೂರು ಸ್ವಸಹಾಯ ಸಂಘದ ದಶಮನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಸ್ಯಮಠದ ವೇದವ್ಯಾಸ ಉಡುಪ ದಶಮನೋತ್ಸವದ ಅಂಗವಾಗಿ ನಡೆದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ಹಿರಿಯ ಕೃಷಿಕರಾದ ಪದ್ಮಯ್ಯ ಶೆಟ್ಟಿ, ಗಿರಿಯಪ್ಪ ಬಂಜನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಜನಾರ್ದನ, ವಲಯ ಮೇಲ್ವಿಚಾರಕ ಸತೀಶ್ ಉಪಸ್ಥಿತರಿದ್ದರು. ಸುಜಯ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶುಭಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli 13011402

Comments

comments

Comments are closed.

Read previous post:
ಕೊಡೆತ್ತೂರು ಶ್ರಮದಾನ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಕೊಡೆತ್ತೂರು ಆದರ್ಶ ಬಳಗದ  ಆಶ್ರಯದಲ್ಲಿ ಹಾಗೂ ಗ್ರಾಮಸ್ಥರ ವತಿಯಿಂದ ದೈವಸ್ಥಾನದ ವಠಾರ ಹಾಗೂ ರಸ್ತೆಯನ್ನು ಶ್ರಮದಾನದ ಮೂಲಕ...

Close